ʼಗಾನಬಜಾನ ಸೀಸನ್ 3ʼ ಶುರು : ಗ್ರ್ಯಾಂಡ್ ಓಪನಿಂಗ್‌ನಲ್ಲಿ ʼಕಾಂತಾರʼ ಚಿತ್ರತಂಡ..!

ʼಗಾನ ಬಜಾನʼ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋಗಳಲ್ಲಿ ಒಂದು. ಯಶಸ್ವೀ ಎರಡು ಸೀಸನ್ ಗಳನ್ನು ಮುಗಿಸಿರುವ 'ಗಾನಬಜಾನ' ಇದೀಗ ತನ್ನ ಮೂರನೇ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಮತ್ತೆ ಬರಲು ಸಜ್ಜಾಗಿದೆ. ಶೋ ಲಾಂಚ್‌ಗೆ ಭರ್ಜರಿ ತಯಾರಿ ಕೂಡಾ ನಡೆದಿದ್ದು, ಪ್ರೊಮೋ ಸಹ ರಿಲೀಸ್ ಆಗಿದೆ. ವಿಶೇಷ ಅಂದ್ರೆ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್‌ನಲ್ಲಿ ದೇಶ ಮೆಚ್ಚಿದ ಸಿನಿಮಾ ʼಕಾಂತಾರʼ ಚಿತ್ರತಂಡ ಭಾಗಿಯಾಗಲಿದೆ.

Written by - Krishna N K | Last Updated : Nov 13, 2022, 03:03 PM IST
  • ʼಗಾನಬಜಾನ ಸೀಸನ್ 3ʼ ಪ್ರಾರಂಭ
  • ಗ್ರ್ಯಾಂಡ್ ಓಪನಿಂಗ್‌ನಲ್ಲಿ ʼಕಾಂತಾರʼ ಚಿತ್ರತಂಡ
  • ʼಗಾನ ಬಜಾನʼ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋಗಳಲ್ಲಿ ಒಂದು
ʼಗಾನಬಜಾನ ಸೀಸನ್ 3ʼ ಶುರು : ಗ್ರ್ಯಾಂಡ್ ಓಪನಿಂಗ್‌ನಲ್ಲಿ ʼಕಾಂತಾರʼ ಚಿತ್ರತಂಡ..! title=

ಬೆಂಗಳೂರು : ʼಗಾನ ಬಜಾನʼ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋಗಳಲ್ಲಿ ಒಂದು. ಯಶಸ್ವೀ ಎರಡು ಸೀಸನ್ ಗಳನ್ನು ಮುಗಿಸಿರುವ 'ಗಾನಬಜಾನ' ಇದೀಗ ತನ್ನ ಮೂರನೇ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಮತ್ತೆ ಬರಲು ಸಜ್ಜಾಗಿದೆ. ಶೋ ಲಾಂಚ್‌ಗೆ ಭರ್ಜರಿ ತಯಾರಿ ಕೂಡಾ ನಡೆದಿದ್ದು, ಪ್ರೊಮೋ ಸಹ ರಿಲೀಸ್ ಆಗಿದೆ. ವಿಶೇಷ ಅಂದ್ರೆ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್‌ನಲ್ಲಿ ದೇಶ ಮೆಚ್ಚಿದ ಸಿನಿಮಾ ʼಕಾಂತಾರʼ ಚಿತ್ರತಂಡ ಭಾಗಿಯಾಗಲಿದೆ.

ಈ ಬಾರಿ 'ಗಾನಬಜಾನ' ದ ನಿರೂಪಣೆಯ ಜವಾಬ್ದಾರಿ ಹೊತ್ತಿರೋದು ಸ್ಟಾರ್ ಆ್ಯಂಕರ್ ಅಕುಲ್ ಬಾಲಾಜಿ. ಈ ಹಿಂದೆ ಸುವರ್ಣ ವಾಹಿನಿಯ ಅನೇಕ ಸೂಪರ್ ಡೂಪರ್ ಹಿಟ್ ಶೋಸ್‌ಗಳನ್ನು ನಿರೂಪಣೆ ಮಾಡಿ ಪ್ರೇಕ್ಷಕರ ಮನಗೆದ್ದ ಅಕುಲ್ ಈಗ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಲಿದ್ದಾರೆ. 

ಇದನ್ನೂ ಓದಿ: ಮತ್ತೆ ಒಂದಾಗ್ತಾರಾ ಸಮಂತಾ - ನಾಗ ಚೈತನ್ಯ? ಫ್ಯಾನ್ಸ್‌ಗೆ ಸಿಕ್ತು ಗುಡ್ ನ್ಯೂಸ್!

ಇನ್ನು ಈ ಶೋ ಬಗ್ಗೆ ಹೇಳೋದಾದ್ರೆ ಈ ಕಾರ್ಯಕ್ರಮವು ಸಂಗೀತದ ಜೊತೆಗೆ ತಮಾಷೆ, ಕುಣಿತ, ಆಟ ಎಲ್ಲವನ್ನು ಒಳಗೊಂಡ ಸಂಪೂರ್ಣ ಮನೋರಂಜನೆಯ ಮಿಶ್ರಣವಾಗಿದೆ. ಸೆಲೆಬ್ರಿಟಿಗಳನ್ನು ಶೋ ಗೆ ಕರೆತಂದು ಎರಡು ತಂಡಗಳಾಗಿ ವಿಂಗಡಿಸಲಾಗುತ್ತದೆ. ಗಾಯನದ ಜೊತೆಗೆ ಹಲವಾರು ಗೇಮ್‌ಗಳನ್ನೂ ಆಡಿಸಲಾಗುತ್ತದೆ. ಆಟದಲ್ಲಿ ಯಾರು ಹೆಚ್ಚು ಸ್ಕೋರ್ ಮಾಡ್ತಾರೋ ಅವರನ್ನು ವಿನ್ನರ್ ಎಂದು ಘೋಷಿಸಲಾಗುತ್ತದೆ. ಇದೇ ಕಾರ್ಯಕ್ರಮದ ಮೂಲ ಉದ್ದೇಶ.

ಇನ್ನು ಕಾರ್ಯಕ್ರಮದ ಗ್ರಾಂಡ್ ಓಪನಿಂಗ್ ದಿನ ದೇಶವೇ ಮೆಚ್ಚಿಕೊಂಡ "ಕಾಂತಾರ" ಸಿನಿಮಾ ತಂಡದವರು ಭಾಗವಹಿಸಿದ್ದು, ರಿಷಬ್ ಶೆಟ್ಟಿ , ಸಪ್ತಮಿ ಗೌಡ, ಸ್ವರಾಜ್ ಶೆಟ್ಟಿ, ರಂಜನ್ ಸೇರಿದಂತೆ ಇನ್ನು ಅನೇಕರು 'ಗಾನಬಜಾನ ಸೀಸನ್ 3' ಸೆಟ್ ನಲ್ಲಿ ಮಸ್ತ್ ಮಜಾ ಮಾಡಿ ಬೊಂಬಾಟ್ ಆಗಿ ಮನೋರಂಜನೆ ನೀಡಿದ್ದಾರೆ. ʼಗಾನಬಜಾನ ಸೀಸನ್ 3ʼ ಯ  ಮಜಭರಿತ ಸಂಚಿಕೆಗಳು ಇದೇ ನವೆಂಬರ್ 13 ರಿಂದ ಪ್ರತೀ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News