Sunil Grover : ತರಕಾರಿ ಮಾರಾಟಕ್ಕೆ ನಿಂತ ʼಕಪಿಲ್‌ ಶರ್ಮಾ ಶೋʼ ನಟ.. ಸುನಿಲ್ ಗ್ರೋವರ್‌ಗೆ ಇದೆಂಥಾ ಸ್ಥಿತಿ..! 

ಬಡತನವೇ ಮನುಷ್ಯನ ಅತಿ ದೊಡ್ಡ ಗುರು ಎಂದು ಶಾರುಖ್‌ ಖಾನ್ ಅವರು ʼದಿ ಕಪಿಲ್ ಶರ್ಮಾ ಶೋʼನಲ್ಲಿ ಹೇಳಿದ್ದರು. ಅಲ್ಲದೆ, ಬಡತನ ವ್ಯಕ್ತಿಯನ್ನು ತಾನು ಎಂದಿಗೂ ಯೋಚಿಸದಿದ್ದನ್ನು ಮಾಡಲು ಮತ್ತು ಕಲಿಯಲು ಒತ್ತಾಯಿಸುತ್ತದೆ ಎಂದಿದ್ದರು. ʼದಿ ಕಪಿಲ್ ಶರ್ಮಾ ಶೋʼ ನಿಂದ ಹೊರ ಬಂದ ನಂತರ ಪ್ರಸಿದ್ಧ ಹಾಸ್ಯನಟ ಸುನಿಲ್ ಗ್ರೋವರ್‌ಗೆ ಬಡತನ ಎದುರಾಗಿದೆಯಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಏಕೆಂದ್ರೆ ಇತ್ತೀಚಿಗೆ ಅವರು ಆಲೂಗಡ್ಡೆ ಮತ್ತು ಈರುಳ್ಳಿ ಮಾರಾಟ ಮಾಡುತ್ತಿರುವ ಫೋಟೋ ಒಂದು ವೈರಲ್‌ ಆಗಿತ್ತು.

Written by - Krishna N K | Last Updated : Jan 22, 2023, 03:46 PM IST
  • ದಿ ಕಪಿಲ್ ಶರ್ಮಾ ಶೋʼ ನಿಂದ ಹೊರ ಬಂದ ನಂತರ ಪ್ರಸಿದ್ಧ ಹಾಸ್ಯನಟ ಸುನಿಲ್ ಗ್ರೋವರ್‌ಗೆ ಬಡತನ ಎದುರಾಗಿದೆಯಾ.
  • ಈ ಹಿಂದೆ ಹಾಲು ಮಾರಾಟ ಮಾಡುತ್ತಿದ್ದ ಫೋಟೋವನ್ನು ಸುನಿಲ್ ಹಂಚಿಕೊಂಡಿದ್ದರು.
  • ಇದೀಗ ಅವರು ಆಲೂಗಡ್ಡೆ ಮತ್ತು ಈರುಳ್ಳಿ ಮಾರಾಟ ಮಾಡುತ್ತಿರುವ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Sunil Grover : ತರಕಾರಿ ಮಾರಾಟಕ್ಕೆ ನಿಂತ ʼಕಪಿಲ್‌ ಶರ್ಮಾ ಶೋʼ ನಟ.. ಸುನಿಲ್ ಗ್ರೋವರ್‌ಗೆ ಇದೆಂಥಾ ಸ್ಥಿತಿ..!  title=

Sunil Grover : ಬಡತನವೇ ಮನುಷ್ಯನ ಅತಿ ದೊಡ್ಡ ಗುರು ಎಂದು ಶಾರುಖ್‌ ಖಾನ್ ಅವರು ʼದಿ ಕಪಿಲ್ ಶರ್ಮಾ ಶೋʼನಲ್ಲಿ ಹೇಳಿದ್ದರು. ಅಲ್ಲದೆ, ಬಡತನ ವ್ಯಕ್ತಿಯನ್ನು ತಾನು ಎಂದಿಗೂ ಯೋಚಿಸದಿದ್ದನ್ನು ಮಾಡಲು ಮತ್ತು ಕಲಿಯಲು ಒತ್ತಾಯಿಸುತ್ತದೆ ಎಂದಿದ್ದರು. ʼದಿ ಕಪಿಲ್ ಶರ್ಮಾ ಶೋʼ ನಿಂದ ಹೊರ ಬಂದ ನಂತರ ಪ್ರಸಿದ್ಧ ಹಾಸ್ಯನಟ ಸುನಿಲ್ ಗ್ರೋವರ್‌ಗೆ ಬಡತನ ಎದುರಾಗಿದೆಯಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಏಕೆಂದ್ರೆ ಇತ್ತೀಚಿಗೆ ಅವರು ಆಲೂಗಡ್ಡೆ ಮತ್ತು ಈರುಳ್ಳಿ ಮಾರಾಟ ಮಾಡುತ್ತಿರುವ ಫೋಟೋ ಒಂದು ವೈರಲ್‌ ಆಗಿತ್ತು.

ಸುನಿಲ್ ಗ್ರೋವರ್ ಅವರು ಆಲೂಗಡ್ಡೆ ಮತ್ತು ಈರುಳ್ಳಿ ಮಾರಾಟ ಮಾಡುತ್ತಿರುವ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋವನ್ನು ನೋಡಿದ ನೆಟ್ಟಿಗರು ಸುನೀಲ್‌ಗೆ ಈ ಗತಿ ಯಾಕೆ ಬಂತು. ದಿ ಕಪಿಲ್‌ ಶರ್ಮಾ ಶೋ ನಿಂದ ಹೊರ ಬಂದ ನಂತರ ಪ್ರಸಿದ್ಧ ಹಾಸ್ಯನಟ ಬಡತನಕ್ಕೆ ಗುರಿಯಾದ್ರಾ ಎನ್ನುವ ಪ್ರಶ್ನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಇಂಟರ್‌ನೆಟ್‌ನಲ್ಲಿ ಚರ್ಚೆ ನಡೆಯುತ್ತಿದೆ.

 
 
 
 

 
 
 
 
 
 
 
 
 
 
 

A post shared by Sunil Grover (@whosunilgrover)

ಇದನ್ನೂ ಓದಿ: Kangana Ranaut: "ಎಮರ್ಜೆನ್ಸಿ ಸಿನಿಮಾಗಾಗಿ ನನ್ನೆಲ್ಲ ಆಸ್ತಿ ಅಡವಿಟ್ಟಿರುವೆ" - ಕಂಗನಾ ರಣಾವತ್‌

ಈ ಹಿಂದೆ ಹಾಲು ಮಾರಾಟ ಮಾಡುತ್ತಿದ್ದ ಫೋಟೋವನ್ನು ಸುನಿಲ್ ಹಂಚಿಕೊಂಡಿದ್ದರು. ಸುನೀಲ್‌ ಹೆಚ್ಚಾಗಿ ಸಾಮಾನ್ಯ ಜನರೊಂದಿಗೆ ಬೆರೆಯಲು ಇಷ್ಟ ಪಡುತ್ತಾರೆ. ಅಲ್ಲದೆ, ಅವರ ಕಷ್ಟದ ಜೀವನವನ್ನು ಅನುಭವಿಸಲು ಪ್ರಯತ್ನಿಸುತ್ತಿರುತ್ತಾರೆ. ಇದೀಗ ವೈರಲ್‌ ಆಗಿರುವ ಫೋಟೋಗೆ, ಗ್ರೋವರ್‌ ಅಭಿಮಾನಿಗಳ ಸೇರಿದಂತೆ ಚಿತ್ರರಂಗದ ಸಹೋದ್ಯೋಗಿಗಳು ಕಾಮೆಂಟ್ ಮಾಡಿದ್ದಾರೆ. ನಟ ಅರ್ಜುನ್ ಬಿಜ್ಲಾನಿ ಕಾಮೆಂಟ್‌ ಮಾಡಿ, 'ಪ್ಯಾಂಟ್ ನೋಡಿದ್ರೆ ʼಬಲೆನ್ಸಿʼಯಾದಂಎ ಕಾಣುತ್ತದೆʼ ಅಂತ ಕಾಲೆಳೆದಿದ್ದಾರೆ.

ಸುನಿಲ್ ಗ್ರೋವರ್ ಅವರ ಅನೇಕ ಅಭಿಮಾನಿಗಳು ಆಲೂಗಡ್ಡೆ ಮತ್ತು ಈರುಳ್ಳಿ ಬೆಲೆಯನ್ನು ಕೇಳುವ ಮೂಲಕ ಅವರೊಂದಿಗೆ ತಮಾಷೆ ಮಾಡುತ್ತಿದ್ದಾರೆ. ಅಂತಹ ಬಳಕೆದಾರರೊಬ್ಬರು ಬರೆಯುತ್ತಾರೆ, 'ಅಣ್ಣ, 1 ಕೆಜಿ ಆಲೂಗಡ್ಡೆ, 1 ಕೆಜಿ ಈರುಳ್ಳಿ ಮತ್ತು ಕೊತ್ತಂಬರಿ-ಮೆಣಸಿನಕಾಯಿಯನ್ನು ಪ್ರತ್ಯೇಕವಾಗಿ ನೀಡಿ, ಅದೂ ಉಚಿತವಾಗಿ' ಎಂದು ಬರೆದಿದಾರೆ. ʼಈ ನೋಟದೊಂದಿಗೆ ನೀವು ಮಾರಾಟ ಮಾಡಿದರೆ ನೀವು ಮಿಲಿಯನೇರ್ ಆಗುತ್ತೀರಿʼ ಎಂದು ಇನ್ನೊಬ್ಬ ನೆಟ್ಟಿಗರು ಕಾಮೆಂಟ್‌ ಹಾಕಿದ್ದಾರೆ. ಅಲ್ಲದೆ ಕೆಲವುರ ಸುನೀಲ್‌ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News