ಗೋವಾ : 51ನೇ ವರ್ಷದ 'ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ'ಕ್ಕೆ ಚಾಲನೆ ದೊರೆತಿದೆ. ಜ.16ರಿಂದ ಆರಂಭವಾಗುವ ಚಲನಚಿತ್ರೋತ್ಸ ವಜನವರಿ 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಸುದೀಪ್ ಈ ಅವಕಾಶ ಪಡೆದಿರುವುದು ಸುದೀಪ್ ಅಭಿಮಾನಿಗಳನ್ನು ಸಂತೋಷದ ಕಡಲಲ್ಲಿ ತೇಲಿಸಿದೆ.
ಜ.16ರಿಂದ ಜ.24ರವರೆಗೆ 'ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ' (IFFI) ಗೋವಾದಲ್ಲಿ ನಡೆಯಲಿದೆ. ಅದರ ಉದ್ಘಾಟನಾ ಸಮಾರಂಭವು ಪಣಜಿ ನಗರದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ (Kiccha Sudeep) ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ (Prakash Javdekar) ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
Goa: The 51st International Film Festival of India started in Panaji today. Information and Broadcasting Minister Prakash Javadekar, and Chief Minister Pramod Sawant were also present at the event.
Actor Sudeep was present at the opening ceremony as the Chief Guest. pic.twitter.com/viF4Q0cFjI
— ANI (@ANI) January 16, 2021
ಇದನ್ನೂ ಓದಿ : ಕಿಚ್ಚ ಸುದೀಪ್ ಫಿಲ್ಮ್ ಗೆ ಕತ್ರಿನಾ ಕೈಫ್? ಸಿನಿಮಾ ಯಾವುದು ಗೊತ್ತಾ?
ಈ ಮಹತ್ವದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿರುವುದು ಕಿಚ್ಚನ ಅಭಿಮಾನಿಗಳನ್ನು (Fans) ಸಂತೋಷದ ಅಲೆಗಳಲ್ಲಿ ತೇಲಾಡಿಸಿದೆ. ಇಡೀ ಕನ್ನಡ ಚಿತ್ರೋದ್ಯಮ, ಕನ್ನಡ ಜನತೆಗೂ ಇದು ಹೆಮ್ಮೆಯ ವಿಚಾರವಾಗಿದೆ.
🇮🇳#KicchaPrideOfIndianCinema#KicchaSudeep @KicchaSudeep Boss pic.twitter.com/XZJvHpPqEu
— Kiccha Sudeep Trends™ (@TheSudeepTrends) January 16, 2021
ಕೊರೊನಾ (Coronavirus) ಭೀತಿಯ ಕಾರಣದಿಂದ ಈ ಬಾರಿಯ ಫಿಲ್ಮ್ ಫೆಸ್ಟಿವಲ್ (Film Festival)ಆಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಈ ವರ್ಷ 119 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ಪೈಕಿ 85 ಸಿನಿಮಾಗಳು ಪ್ರೀಮಿಯರ್ ಪ್ರದರ್ಶನ ಕಾಣಲಿವೆ. ಕೆಲವು ಸಿನಿಮಾಗಳು (Cinema) ದೊಡ್ಡ ಪರದೆಯಲ್ಲಿ ಪ್ರದರ್ಶನವಾದರೆ, ಮತ್ತೆ ಕೆಲವು ಆನ್‌ಲೈನ್‌ನಲ್ಲಿ ಬಿತ್ತರ ಆಗಲಿವೆ. ತಜ್ಞರ ಜೊತೆಗಿನ ಮಾಸ್ಟರ್ ಕ್ಲಾಸ್, ಸಂವಾದ ಮುಂತಾದ ಕಾರ್ಯಕ್ರಮಗಳು ಓಟಿಟಿ ಮೂಲಕ ನಡೆಯಲಿವೆ.
ಇದನ್ನೂ ಓದಿ :15 ವರ್ಷಗಳ ಬಳಿಕ ಸುದೀಪ್ ಈ ಮನೆಗೆ ಭೇಟಿ ಕೊಟ್ಟಿದ್ದು ಯಾಕೆ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.