ಕಿಚ್ಚ ಸುದೀಪ್ ಫಿಲ್ಮ್ ಗೆ ಕತ್ರಿನಾ ಕೈಫ್‌? ಸಿನಿಮಾ ಯಾವುದು ಗೊತ್ತಾ?

'ಫ್ಯಾಂಟಮ್‌'  ಸಿನಿಮಾದ 'ವಿಕ್ರಾಂತ್‌ ರೋಣಾ' ಪಾತ್ರದ ಜತೆಗೆ ಹಾಡೊಂದರಲ್ಲಿ ಮತ್ತು ದೃಶ್ಯವೊಂದರಲ್ಲಿ ಜತೆಯಾಗಲು ಬಾಲಿವುಡ್‌ ನಟ

Last Updated : Nov 28, 2020, 04:23 PM IST
  • 'ಫ್ಯಾಂಟಮ್‌' ಸಿನಿಮಾದ 'ವಿಕ್ರಾಂತ್‌ ರೋಣಾ' ಪಾತ್ರದ ಜತೆಗೆ ಹಾಡೊಂದರಲ್ಲಿ ಮತ್ತು ದೃಶ್ಯವೊಂದರಲ್ಲಿ ಜತೆಯಾಗಲು ಬಾಲಿವುಡ್‌ ನಟಿ
  • ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಅಥವಾ ಡ್ಯಾನ್ಸರ್ ಕಮ್ ನಟಿ ನೋರಾ ಫತೇಹಿ ಬರಲಿದ್ದಾರೆ
  • ಸುದೀಪ್‌ ಮತ್ತು ಸಲ್ಮಾನ್‌ ಆತ್ಮೀಯ ಸ್ನೇಹಿತರಾಗಿರುವುದರಿಂದ ಕತ್ರಿನಾ ಬಂದೇ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ
ಕಿಚ್ಚ ಸುದೀಪ್ ಫಿಲ್ಮ್ ಗೆ ಕತ್ರಿನಾ ಕೈಫ್‌? ಸಿನಿಮಾ ಯಾವುದು ಗೊತ್ತಾ? title=

ಸ್ಯಾಂಡಲ್ ವುಡ್ ಗೆ ಬಾಲಿವುಡ್‌ನಿಂದ ನಟಿಯರು ಬರುವುದು ಹೊಸದೇನಲ್ಲ. ಈ ಸಾಲಿನಲ್ಲಿ ಇದೀಗ ಇನ್ನಿಬ್ಬರು ನಟಿಯರ ಹೆಸರೂ ಕೇಳಿಬರುತ್ತಿದೆ. ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್‌'  ಸಿನಿಮಾದ 'ವಿಕ್ರಾಂತ್‌ ರೋಣಾ' ಪಾತ್ರದ ಜತೆಗೆ ಹಾಡೊಂದರಲ್ಲಿ ಮತ್ತು ದೃಶ್ಯವೊಂದರಲ್ಲಿ ಜತೆಯಾಗಲು ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಅಥವಾ ಡ್ಯಾನ್ಸರ್ ಕಮ್ ನಟಿ ನೋರಾ ಫತೇಹಿ ಬರಲಿದ್ದಾರೆ ಎಂಬ ಮಾಹಿತಿ 'ಫ್ಯಾಂಟಮ್‌' ಚಿತ್ರ ತಂಡದಿಂದ ಹೊರಬಿದ್ದಿದೆ.

ಸ್ಪೆಷಲ್ ಸಾಂಗ್, ಸ್ಪೆಷಲ್ ಪರ್ಸನ್: ಇತ್ತೀಚಿಗೆ ಹೈದರಾಬಾದ್‌ನಲ್ಲಿ ಚಿತ್ರ ತಂಡ ಎರಡನೇ ಶೆಡ್ಯೂಲ್‌ ಚಿತ್ರೀಕರಣ ಕಂಪ್ಲೀಟ್‌ ಮಾಡಿ, ಕಿಚ್ಚ ಸುದೀಪ್‌(Sudeep) ಈಗ ಕೇರಳದತ್ತ ಹೊರಟಿದ್ದಾರೆ. ಕೇರಳದಲ್ಲಿ ಡಿಸೆಂಬರ್‌ ಮೊದಲ ವಾರದಿಂದ 30 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಯಲಿದೆ. 'ಈ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಒಂದನ್ನ ತಯಾರಿಸಲಾಗಿದೆ. ಈ ಸಾಂಗ್ ಗೆ  ವಿಶೇಷ ವ್ಯಕ್ತಿಯೊಬ್ಬರು ಬೇಕಿರುವುದರಿಂದ ಕತ್ರಿನಾ ಕೈಫ್‌ ಅಥವಾ ನೋರಾ ಫತೇಹಿ ಅವರನ್ನು ಕರೆತರಲು ಚಿತ್ರ ತಂಡ ನಿರ್ಧಾರ ಮಾಡಿದೆ ಎನ್ನಲಾಗಿದೆ. ಅಲ್ಲದೆ, ಚಿತ್ರ ತಂಡಈಗಾಗಲೇ ಕತ್ರಿನಾ ಅವರ ಬಳಿ ಮಾತನಾಡಿದೆ. ಡೇಟ್ಸ್‌ ಮತ್ತಿತರ ಮಾತುಕತೆಗಳು ನಡೆಯುತ್ತಿವೆ. ಸ್ಪೆಷಲ್ ಸಾಂಗ್ ಆಗಿದ್ದರಿಂದ ಅವರು ಇದ್ದರೆ ಸಿನಿಮಾಗೆ ಒಂದು ವಿಶೇಷ ಕಳೆ ಬರಲಿದೆ. ಇನ್ನು ಕತ್ರಿನಾ ಅವರ ಡೇಟ್‌ ಇಲ್ಲ ಅಂದರೆ ನೋರಾ ಫತೇಹಿ ಬರಲಿದ್ದಾರೆ' ಎಂದು ನಿರ್ಮಾಪಕ ಜಾಕ್‌ ಮಂಜು ಮಾಹಿತಿ ನೀಡಿದ್ದಾರೆ.

ಐಎಎಸ್ ಅಧಿಕಾರಿಯಾಗಲು ಬಯಸಿದ್ದ 'ಫೇರ್ ಅಂಡ್ ಲವ್ಲಿ ಗರ್ಲ್' Yami Gautam

ಕತ್ರಿನಾ ಕೈಫ್‌ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಆಪ್ತರು. ಸುದೀಪ್‌ ಮತ್ತು ಸಲ್ಮಾನ್‌ ಆತ್ಮೀಯ ಸ್ನೇಹಿತರಾಗಿರುವುದರಿಂದ ಕತ್ರಿನಾ ಬಂದೇ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಿತ್ರ ವೀಕ್ಷಣೆಗೆ ಈ OTT Platform ಗಳು ಹಣ ನೀಡುತ್ತವಂತೆ ! ಕೇವಲ ಈ ಕೆಲಸ ಮಾಡಿ

ಎರಡು ದಿನಗಳ ಹಿಂದೆಯಷ್ಟೇ ಸುದೀಪ್‌, ತಾವು ಕೇರಳದ ಶೆಡ್ಯೂಲ್‌ಗಾಗಿ ವರ್ಕೌಟ್‌ ಮಾಡುತ್ತಿದ್ದು, ಒಳ್ಳೆಯ ರಿಸಲ್ಟ್‌ ಬಂದಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಒಟ್ಟಾರೆ ಬಾಲಿವುಡ್‌ ನಟಿಯರ ಆಗಮನವಾಗುತ್ತದೆ ಎಂಬ ಸುದ್ದಿಯಿಂದ ಸುದೀಪ್‌ ಅಭಿಮಾನಿಗಳು ಖುಷಿಯಾಗಿರುವುದಂತೂ ಸತ್ಯ. ''ನಮ್ಮ ಮೊದಲ ಆಯ್ಕೆ ಕತ್ರಿನಾ ಕೈಫ್‌. ಅವರನ್ನು ಈಗಾಗಲೇ ಸಂಪರ್ಕಿಸಿದ್ದೇವೆ. ಅವರು ಬಂದೇ ಬರುತ್ತಾರೆ, ಒಂದು ವೇಳೆ ಇಲ್ಲಎಂದಾದರೆ ನೋರಾ ಫತೇಹಿ ಅವರನ್ನು ಕರೆತರುತ್ತೇವೆ' ಎಂದು ನಿರ್ಮಾಪಕ ಜಾಕ್‌ ಮಂಜು ಹೇಳಿದ್ದಾರೆ.

Viral Video: ಕಪಿಲ್ ಶರ್ಮಾ ಶೋ ಖ್ಯಾತಿಯ ಚಿಂಕಿ-ಮಿಂಕಿಯಿಂದ 'ನಾಚ್ ಮೇರಿ ರಾಣಿ' ಹಾಡಿನ ಡಾನ್ಸ್

Trending News