Stalker: ಮಾರ್ಚ್ 31ಕ್ಕೆ ‘ಸ್ಟಾಕರ್’ ಸಿನಿಮಾ ಬಿಡುಗಡೆ

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಕ್ಯಾಂಪ್‍ನಲ್ಲಿ ಐದಾರು ವರ್ಷಗಳ ಕಾಲ ಕೆಲಸ ಕಲಿತಿರುವ.. ‘ಸೈಕೋ’ ಎಂಬ ತೆಲುಗು ಸಿನಿಮಾ‌ ನಿರ್ದೇಶನ ಮಾಡಿರುವ ಅನುಭವ ಹೊಂದಿರುವ ಕಿಶೋರ್ ಭಾರ್ಗವ್(Kishore Bhargava) ಆಕ್ಷನ್ ಕಟ್ ಹೇಳಿರುವ ‘ಸ್ಟಾಕರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 31ಕ್ಕೆ 30 ಸ್ಕ್ರೀನ್‍ಗಳಲ್ಲಿ ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ.

Written by - Malathesha M | Edited by - Puttaraj K Alur | Last Updated : Mar 28, 2022, 10:14 PM IST
  • ಕಿಶೋರ್ ಭಾರ್ಗವ್ ನಿರ್ದೇಶನದ ಕನ್ನಡ ಸಿನಿಮಾ ‘ಸ್ಟಾಕರ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ
  • ಸ್ಟಾಕರ್ ಸಿನಿಮಾ ಮಾರ್ಚ್ 31ಕ್ಕೆ 30 ಸ್ಕ್ರೀನ್ ಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ
  • ‘ಬೆಳದಿಂಗಳ ಬಾಲೆ’ ಖ್ಯಾತಿಯ ಸುಮನ್ ನರ್ಗಕರ್ ಉಗ್ರ ನಿಗ್ರಹ ಪಡೆ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ
Stalker: ಮಾರ್ಚ್ 31ಕ್ಕೆ ‘ಸ್ಟಾಕರ್’ ಸಿನಿಮಾ ಬಿಡುಗಡೆ title=
‘ಸ್ಟಾಕರ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ

ಬೆಂಗಳೂರು: ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಕ್ಯಾಂಪ್‍ನಲ್ಲಿ ಐದಾರು ವರ್ಷಗಳ ಕಾಲ ಕೆಲಸ ಕಲಿತಿರುವ.. ‘ಸೈಕೋ’ ಎಂಬ ತೆಲುಗು ಸಿನಿಮಾ‌ ನಿರ್ದೇಶನ ಮಾಡಿರುವ ಅನುಭವ ಹೊಂದಿರುವ ಕಿಶೋರ್ ಭಾರ್ಗವ್(Kishore Bhargava) ಆಕ್ಷನ್ ಕಟ್ ಹೇಳಿರುವ ‘ಸ್ಟಾಕರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 31ಕ್ಕೆ 30 ಸ್ಕ್ರೀನ್‍ಗಳಲ್ಲಿ ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ.

ಸಖತ್ ಸಸ್ಪೆನ್ಸ್ ‘ಸ್ಟಾಕರ್’ ಟ್ರೇಲರ್ ರಿಲೀಸ್

‘ಸ್ಟಾಕರ್’ ಸಿನಿಮಾ ಫಸ್ಟ್ ಲುಕ್(Stalker FirstLook) ಮೂಲಕ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಈಗ ರಿಲೀಸ್ ಆಗಿರುವ ಟ್ರೇಲರ್ ಸಿನಿಮಾ ಮೇಲಿನ ಈ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಗಂಡ-ಹೆಂಡತಿ, ಮಗಳನ್ನೊಳಗೊಂಡ ಸುಂದರ ಕುಟುಂಬ.. ಎಲ್ಲವೂ ಚೆನ್ನಾಗಿದ್ದ ಆ ಮಗಳ ಲೈಫ್‍ನಲ್ಲಿ ಎಂಟ್ರಿ ಕೊಟ್ಟು ಕಾಟ ಕೊಡುವ ವಿಲನ್.. ಆ ವಿಲನ್‍ನನ್ನು ಪತ್ತೆ ಹಚ್ಚಲು ಬರುವ ಉಗ್ರ ನಿಗ್ರಹ ಪಡೆ... ಇದು ‘ಸ್ಟಾಕರ್’ ಟ್ರೇಲರ್ ಹೈಲೆಟ್ಸ್.. ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಟ್ರೇಲರ್ ರಿಲೀಸ್ ಮಾಡಿರುವ ಚಿತ್ರತಂಡ ಪ್ರಮೋಷನ್ ಕಹಳೆ ಮೊಳಗಿಸಿದೆ.

ಇದನ್ನೂ ಓದಿ: Physics Teacher: ‘ಫಿಸಿಕ್ಸ್ ಟೀಚರ್’ಗೆ ಮೆಚ್ಚುಗೆಯ ಮಹಾಪೂರ

‘ಸ್ಟಾಕರ್’ ಸಿನಿಮಾದಲ್ಲಿ ‘ಬೆಳದಿಂಗಳ ಬಾಲೆ’ ಖ್ಯಾತಿಯ ನಟಿ ಸುಮನ್ ನರ್ಗಕರ್(Suman Nagarkar), ರಾಮ್, ಐಶ್ವರ್ಯ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಮುಂತಾದವರು ನಟಿಸಿದ್ದಾರೆ.

ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್(Suspense Thriller Movie)ಕಥಾಹಂದರ ಹೊಂದಿರುವ ‘ಸ್ಟಾಕರ್’ ಸಿನಿಮಾವನ್ನು, SML ಪ್ರೊಡಕ್ಷನ್ಸ್, ಸ್ಕ್ರೀಪ್ಟ್ ಟೀಸ್ ಫಿಲ್ಮ್ಸ್ ನಡಿ  ಎಂಎನ್‍ವಿ ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ನಿರ್ಮಾಣ ಮಾಡಿದ್ದಾರೆ. ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ವಿನೋದ್ ರಾಜ್ ಕ್ಯಾಮೆರಾ ಕೈ ಚಳಕದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ.

ಇದನ್ನೂ ಓದಿ: Kasturi Mahal: ಮೇ 13ಕ್ಕೆ ಶಾನ್ವಿ ಶ್ರೀವಾಸ್ತವ್ ಅಭಿನಯದ ‘ಕಸ್ತೂರಿ ಮಹಲ್’ ತೆರೆಗೆ

ಸ್ಕಂದ ಕಶ್ಯಪ್ ಸಂಗೀತ ನೀಡಿದ್ದು, ಸುಧೀರ್ ಪಿಆರ್ ಕಲಾ ನಿರ್ದೇಶನ, ವಂದನಾ ಭಂಡಾರೆ ವಸ್ತ್ರ ವಿನ್ಯಾಸ ಸಿನಿಮಾದಲ್ಲಿದೆ. ಟ್ರೇಲರ್(Stalker Trailer) ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿರುವ ‘ಸ್ಟಾಕರ್’ ಸಿನಿಮಾ ಮಾರ್ಚ್ 31ಕ್ಕೆ ತೆರೆಗಪ್ಪಳಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News