ಸಿನಿಮಾ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಗಿರೀಶ್ ಕಾರ್ನಾಡ್

ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ `ಸಂಸ್ಕಾರ' ಚಿತ್ರದಲ್ಲಿ ಪ್ರಾಣೇಶಾಚಾರ್ಯ ಪಾತ್ರದಲ್ಲಿ ವಿಶಿಷ್ಠ ರೀತಿಯಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಗಿರೀಶ್ ಕಾರ್ನಾಡ್.  

Last Updated : Jun 10, 2019, 11:52 AM IST
ಸಿನಿಮಾ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಗಿರೀಶ್ ಕಾರ್ನಾಡ್ title=
Pic Courtesy: Youtube

ಬೆಂಗಳೂರು:  ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ರೀತಿಯ ನಾಟಕಕಾರರೆಂದೇ ಗುರುತಿಸಿಕೊಂಡಿದ್ದ ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ `ಸಂಸ್ಕಾರ' ಚಿತ್ರದಲ್ಲಿ ಪ್ರಾಣೇಶಾಚಾರ್ಯ ಪಾತ್ರದಲ್ಲಿ ವಿಶಿಷ್ಠ ರೀತಿಯಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

'ಸಂಸ್ಕಾರ' ಚಿತ್ರದ ಮೂಲಕ ಎಲ್ಲರ ಗಮನ ಸೆಳೆದ ಗಿರೀಶ್ ಕಾರ್ನಾಡ್ ಅವರು ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. 

 "ತಬ್ಬಲಿಯು ನೀನಾದೆ ಮಗನೆ", "ಕಾಡು", "ಒಂದಾನೊಂದು ಕಾಲದಲ್ಲಿ"ಚಿತ್ರಗಳನ್ನು ನಿರ್ದೇಶಿಸಿದರು."ಕಾಡು" ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. 

ಕಾರ್ನಾಡರು ಅಭಿನಯಿಸಿದ ಪ್ರಮುಖ ಚಲನಚಿತ್ರಗಳು:

  • ಸಂಸ್ಕಾರ(ಕನ್ನಡ) - 1970
  • ವಂಶವೃಕ್ಷ(ಕನ್ನಡ) - 1971
  • ಜಾದೂ ಕಿ ಶಂಖ್(ಹಿಂದಿ) - 1974
  • ನಿಶಾಂತ್(ಹಿಂದಿ) - 1975
  • ಮಂಥನ್(ಹಿಂದಿ) - 1976    
  • ಸ್ವಾಮಿ(ಹಿಂದಿ) - 1977
  • ಜೀವನ್ಮುಕ್ತ್(ಹಿಂದಿ) - 1977
  • ಸಂಪರ್ಕ್(ಹಿಂದಿ) - 1979    
  • ರತ್ನದೀಪ್    (ಹಿಂದಿ) - 1979
  • ಬೇಕಸೂರ್ (ಹಿಂದಿ) - 1980
  • ಆಶಾ (ಹಿಂದಿ) - 1980
  • ಮನ್ ಪಸಂದ್ (ಹಿಂದಿ) - 1980
  • ಅಪ್ನೇ ಪರಾಯೇ (ಹಿಂದಿ) - 1980
  • ಶಮಾ(ಮರಾಠಿ) - 1981
  • ಉಂಬರ್ಥಾ(ಮರಾಠಿ) - 1982
  • ಅಪರೂಪ್    (ಹಿಂದಿ) - 1982
  • ತೇರೀ ಕಸಮ್ (ಹಿಂದಿ) - 1982
  • ಆನಂದ ಭೈರವಿ (ಮಲಯಾಳಂ) - 1983
  • ನೀ ತಂದ ಕಾಣಿಕೆ (1985) – ಕನ್ನಡ
  • ಜಮಾನಾ(1985) – ಹಿಂದಿ
  • ಮೇರಿ ಜಂಗ(1985) – ಹಿಂದಿ
  • ಸುರ ಸಂಗಮ (1985)
  • ನಾನ್ ಅಡಿಮೈ ಇಲ್ಲೈ(1986) – ತಮಿಳು
  • ನೀಲಕುರಿನ್ಹಿ ಪೂಥಪ್ಪೋಳ್ (1986) – ಮಲೆಯಾಳಮ್
  • ಸೂತ್ರ ಧಾರ (1987)
  • ಆಕರ್ಷಣ (1988)
  • ಮಿಲ್ ಗಯಿ ಮುಝೆ ಮಂಜಿಲ್(1989) – ಹಿಂದಿ
  • ನೆಹರು ದಿ ಜೆವೆಲ್ ಆಫ್ ಇಂಡಿಯ(1990) – ಹಿಂದಿ
  • ಏ ಕೆ 47(1990) – ಕನ್ನಡ
  • ಬ್ರಹ್ಮ (1991)
  • ಆತ್ಮಾನಂದ (1991)
  • ಗುನ್ಹಾ(1991)
  • ಚೆಲುವಿ (1991)
  • ಪ್ರಾಣದಾಟ(1993)
  • ಕಾದಲನ್(1994) – ತಮಿಳು
  • ಆಘಾತ(1994) – ಕನ್ನಡ
  • ಆತಂಕ (1996) – ಕನ್ನಡ
  • ದಿ ಪ್ರಿನ್ಸ(1996) – ಮಲೆಯಾಳಮ್
  • ರತ್ಚಾಂಗನ್(1997)
  • ಮಿನ್ಸಾರ ಕಣವು(1997) – ತಮಿಳು
  • ಆಕ್ರೋಶ(1998)
  • ಚೈನಾಗೇಟ(1999)
  • ಪ್ರತ್ಯರ್ಥ(1999)
  • ಪುಕಾರ (2000)
  • ಹೇ ರಾಮ(2000) – ತಮಿಳು
  • ಚೆಲ್ಲಾಮೈ(2004) – ತಮಿಳು
  • ಶಂಕರದಾದಾ ಎಮ್ ಬಿ ಬಿ ಎಸ್(2004) – ತೆಲುಗು
  • ಇಕ್ಬಾಲ(2005)
  • ಡೊರ್(2006)
  • ಆ ದಿನಗಳು(2007)
  • 8 x 10ತಸ್ವೀರ(2009)
  • ಆಶಾಂಯೆ(2009)
  • ಲೈಫ್ ಗೋಸ್ ಆನ್(2009)
  • ಕೋಮಾರಮ್ ಪುಲಿ(2010)
  • ಕೆಂಪೇಗೌಡ(2011)
  • ಎಕ ಥಾ ಟೈಗರ್(2012)
  • ಮುಗಾಮೂಡಿ(2012)
  • ಯಾರೆ ಕೂಗಾಡಲಿ(2012) – ಕನ್ನಡ
     

Trending News