Lok Sabha Election 2024: ಏಪ್ರಿಲ್ 26ರ ಶುಕ್ರವಾರದ ಈ ದಿನ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ (Second phase of Lok Sabha polls) ನಡೆಯಲಿದೆ. ದೇಶಾದ್ಯಂತ ಕರ್ನಾಟಕ ಸೇರಿದಂತೆ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ನೀವು ಮತದಾನಕ್ಕಾಗಿ ಸಿದ್ದರಿದ್ದು, ಮತದಾನ ಪಟ್ಟಿ (Voting List)ಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೇ? ನಿಮ್ಮ ಮತಗಟ್ಟೆ ಸಂಖ್ಯೆ ಯಾವುದು ಎಂದು ತಿಳಿಯದಿದ್ದರೆ ತುಂಬಾ ಸುಲಭವಾಗಿ ಮನೆಯಲ್ಲಿಯೇ ಕುಳಿತು ಇದನ್ನು ಚೆಕ್ ಮಾಡಬಹುದು.
ನಿಮಗೆಲ್ಲರಿಗೂ ತಿಳಿದಿರುವಂತೆ ಚುನಾವಣೆಗೆ ಸಂಬಂಧಿಸಿದ ಸಕಲ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಇದಲ್ಲದೆ, ಎಸ್ಎಂಎಸ್ ಮೂಲಕವೂ ನೀವು ವೋಟರ್ ಲಿಸ್ಟ್ (Voting List)ನಲ್ಲಿ ನಿಮ್ಮ ಹೆಸರಿದೆಯೋ/ಇಲ್ಲವೋ. ನಿಮ್ಮ ಮತಗಟ್ಟೆ ಸಂಖ್ಯೆ (Polling Station No) ಯಾವುದು ಎಂಬ ಮಾಹಿತಿಯನ್ನು ಪರಿಶೀಲಿಸುವುದು ತುಂಬಾ ಸುಲಭ.
ಇದನ್ನೂ ಓದಿ- Voter ID ಕಳೆದುಹೋಗಿದೆಯೇ? ಈ ದಾಖಲೆಗಳನ್ನು ನೀಡಿ ಮತ ಚಲಾಯಿಸಬಹುದು!
ಆನ್‌ಲೈನ್‌ನಲ್ಲಿ ನಿಮ್ಮ ಮತಗಟ್ಟೆ ಯಾವುದೆಂದು ತಿಳಿಯಲು ಏನು ಮಾಡಬೇಕು?
ಚುನಾವಣಾ ಆಯೋಗದ (Election Commission) ವೆಬ್‌ಸೈಟ್ ಅಥವಾ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು ಮತದಾರರ ಪಟ್ಟಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ- 1:
ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ. ನೀವು electoralsearch.eci.gov.in ಗೆ ಭೇಟಿ ನೀಡಬಹುದು ಅಂದರೆ ಮತದಾರರ ಸೇವಾ ಪೋರ್ಟಲ್.
ಹಂತ- 2:
ಅಲ್ಲಿ ನೀವು ಹೋಮ್ ಪೇಜ್‌ನಲ್ಲಿರುವ 'ಸರ್ಚ್ ಇನ್ ಎಲೆಕ್ಟೋರಲ್ ರೋಲ್' ಟ್ಯಾಬ್' ಎಂಬ ಆಯ್ಕೆಯನ್ನು ಆರಿಸಿ.
ಹಂತ- 3:
ಮುಂದಿನ ಪುಟದಲ್ಲಿ ನಿಮ್ಮ ಮುಂದೆ EPIC ಮೂಲಕ ಹುಡುಕಿ, ವಿವರಗಳ ಮೂಲಕ ಹುಡುಕಿ ಮತ್ತು ಮೊಬೈಲ್ ಮೂಲಕ ಹುಡುಕಿ ಎಂಬ ಮೂರು ಆಯ್ಕೆಗಳು ಗೋಚರಿಸುತ್ತವೆ.
ಹಂತ- 4:
ನಿಮ್ಮ ಭಾಷೆಯನ್ನು ಆರಿಸಿ. ಇದರ ನಂತರ ನೀವು ನಿಮ್ಮ EPIC ಸಂಖ್ಯೆ ಮತ್ತು ಸ್ಥಿತಿಯನ್ನು ನಮೂದಿಸುವ ಮೂಲಕ ಕೆಳಗಿನ ಕ್ಯಾಪ್ಚಾವನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ- 5:
ನಂತರ ನೀವು ನಿಮ್ಮ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಇಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ- ಎಲ್ಲರೂ ಒಟ್ಟಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ: ತುಷಾರ್ ಗಿರಿ ನಾಥ್
ಎಸ್ಎಂಎಸ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸುವುದು ಹೇಗೆ?
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ ಅಥವಾ ನಿಮಗೆ ಸ್ಮಾರ್ಟ್ಫೋನ್ ಇಂಟರ್ನೆಟ್ ಅವಶ್ಯಕತೆಯೂ ಇಲ್ಲ. ಇದಕ್ಕಾಗಿ, ಒಂದು ಕಿರು ಸಂದೇಶ ನಿಮಗೆ ಪ್ರಯೋಜನಕಾರಿ ಆಗಿದೆ.
ಇದಕ್ಕಾಗಿ ನೀವು 1950 ಗೆ ನಿಮ್ಮ EPIC ಸಂಖ್ಯೆಯನ್ನು ಕಳುಹಿಸಬೇಕು. EPIC ಸಂಖ್ಯೆಯು ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯೇ ಹೊರತು ಬೇರೇನೂ ಅಲ್ಲ. ಎಸ್ಎಂಎಸ್ ಮೂಲಕ ನಿಮ್ಮ ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂದು ಪರಿಶೀಲಿಸಿಯಲು ಕೇವಲ ಈ ರೀತಿಯ ಒಂದು ಸಂದೇಶ ಸಾಕು. ಈಗ ನಿಮ್ಮ EPIC ಸಂಖ್ಯೆ 12345678 ಎಂದು ನಾವು ಭಾವಿಸಿದರೆ, ನೀವು 1950 ಗೆ 'ECI 12345678' ಎಂದು ಸಂದೇಶ ಕಳುಹಿಸಬೇಕು. ಈ ಸಂದೇಶ ಕಳುಹಿಸಿದ ಕೆಲವೇ ನಿಮಿಷಯಗಳಲ್ಲಿ ನಿಮ್ಮ ಫೋನ್‌ನಲ್ಲಿ ಮತದಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀವು ಪಡೆಯುತ್ತೀರಿ.
ಮತದಾನ ಪ್ರತಿ ನಾಗರೀಕರ ಹಕ್ಕು. ಮಾತ್ರವಲ್ಲ ಇದು ನಮ್ಮ ಕರ್ತವ್ಯ. ಉತ್ತಮ ಭವಿಷ್ಯಕ್ಕಾಗಿ ತಪ್ಪದೇ ಮತ ಚಲಾಯಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.Te