ಮಾಲಿವುಡ್ ಚಿತ್ರರಂಗಕ್ಕೆ ‘ಲೈಕಾ’ ಎಂಟ್ರಿ.. ʻಲೂಸಿಫರ್ ಪಾರ್ಟ್-2’ಗೆ ಸುಭಾಷ್ ಕರಣ್ ಬಂಡವಾಳ

Lucifer Part 2 : ಮೋಹನ್ ಲಾಲ್ ಫಾರ್ಪೆಮನ್ಸ್, ಪೃಥ್ವಿರಾಜ್ ಡೈರೆಕ್ಷನ್ ಬಗ್ಗೆ ಸಿನಿಮಾರಸಿಕರು ಚಪ್ಪಾಳೆ ತಟ್ಟಿದ್ದರು. ಇದೀಗ ಲೂಸಿಫರ್ ಪಾರ್ಟ್-2 ನಿರ್ದೇಶಕ ಪೃಥ್ವಿರಾಜ್ ಸುಕುಮಾರ್ ಸಜ್ಜಾಗಿದ್ದು, ಲೈಕಾ ಜೊತೆಯಾಗಿ ನಿಂತಿದೆ. 

Written by - YASHODHA POOJARI | Last Updated : Sep 30, 2023, 11:00 PM IST
  • ಐದು ಗ್ಯಾರಂಟಿಗಳ ಘೋಷಣೆ ಮಾಡಿದ್ದೆವು
  • ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ
  • ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ
ಮಾಲಿವುಡ್ ಚಿತ್ರರಂಗಕ್ಕೆ ‘ಲೈಕಾ’ ಎಂಟ್ರಿ.. ʻಲೂಸಿಫರ್ ಪಾರ್ಟ್-2’ಗೆ ಸುಭಾಷ್ ಕರಣ್ ಬಂಡವಾಳ title=

Lyca Production : ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಮಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ. ಇಂಡಿಯನ್, ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ, 2.0, ಖೈದಿ 150ಯಂತಹ ಅದ್ಧೂರಿ ಹಾಗೂ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಸಿನಿಮಾ ರಂಗಕ್ಕೆ ಕೊಡುಗೆಯಾಗಿ ಕೊಟ್ಟಿರುವ ಲೈಕಾ ಮಾಲಿವುಡ್ ಸೂಪರ್ ಡೂಪರ್ ಹಿಟ್ ಚಿತ್ರ ಲೂಸಿಫರ್ ಪಾರ್ಟ್-2ಗೆ ಬಂಡವಾಳ ಹೂಡುತ್ತಿದೆ. 

ಲೈಕಾ ಒಡೆಯ ಸುಭಾಷ್ ಕರಣ್, ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್-ಪೃಥ್ವಿ ರಾಜ್ ಸುಕುಮಾರ್ ಜೊತೆ ಕೈ ಜೋಡಿಸಿದ್ದಾರೆ. 2019ರಲ್ಲಿ ರಿಲೀಸ್ ಆಗಿದ್ದ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಲೂಸಿಫರ್ ಸಿನಿಮಾ ಕಮರ್ಷಿಯಲ್ ಹಾಗೂ ವಿಮರ್ಷಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಮೋಹನ್ ಲಾಲ್ ಫಾರ್ಪೆಮನ್ಸ್, ಪೃಥ್ವಿರಾಜ್ ಡೈರೆಕ್ಷನ್ ಬಗ್ಗೆ ಸಿನಿಮಾರಸಿಕರು ಚಪ್ಪಾಳೆ ತಟ್ಟಿದ್ದರು. ಇದೀಗ ಲೂಸಿಫರ್ ಪಾರ್ಟ್-2 ನಿರ್ದೇಶಕ ಪೃಥ್ವಿರಾಜ್ ಸುಕುಮಾರ್ ಸಜ್ಜಾಗಿದ್ದು, ಲೈಕಾ ಜೊತೆಯಾಗಿ ನಿಂತಿದೆ. 

ಇದನ್ನೂ ಓದಿ : ಬಿಗ್ ಬಾಸ್‌ ಧ್ವನಿಯ ಹಿಂದಿರುವ ಆ ವ್ಯಕ್ತಿ ಯಾರು ಗೊತ್ತಾ?

ಲೂಸಿಫರ್ ಎರಡನೇ ಅಧ್ಯಾಯಕ್ಕೆ ಎಂಪುರನ್ ಎಂಬ ಟೈಟಲ್ ಇಡಲಾಗಿದೆ. ಮಲಯಾಳಂನ ಖ್ಯಾತ ನಿರ್ಮಾಣ ಸಂಸ್ಥೆ ಆಶೀರ್ವಾದ ಸಿನಿಮಾಸ್ ಜೊತೆಗೂಡಿ ಲೈಕಾ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಜಿ.ಕೆ.ಎಂ. ತಮಿಳ್ ಕುಮಾರನ್ ಲೈಕಾ ಪ್ರೊಡಕ್ಷನ್‌ನ ಮುಖ್ಯಸ್ಥರಾಗಿದ್ದಾರೆ. ಮುರಳಿ ಗೋಪಿ ಈ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ, ಸುಜಿತ್ ವಾಸುದೇವ್ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದಾರೆ. ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ. 

ಸುರೇಶ್ ಬಾಲಾಜಿ ಮತ್ತು ಜಾರ್ಜ್ ಪಯಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ‘ಎಂಪುರನ್’ ಅಧಿಕೃತ ಘೋಷಣೆಯ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಶೇಷವಾಗಿ ಆಶೀರ್ವಾದ್ ಸಿನಿಮಾಸ್ ಆಂಟೋನಿ ಪೆರುಂಬವೂರ್-ಲೈಕಾ ಪ್ರೊಡಕ್ಷನ್ಸ್ ಸುಭಾಸ್ಕರನ್-ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಕಾಂಬೋದ ಲೂಸಿಫರ್-2 ಝಲಕ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ : ಮೊಬೈಲ್ ನಂಬರ್ ಹಂಚಿಕೊಂಡ ಶಾರುಖ್, ನೀವೂ ಮಾತಾಡಬೇಕೇ? ಈ ಟೈಮ್‌ಗೆ ಕಾಲ್‌ ಮಾಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News