ಆ ಸ್ಟಾರ್ ಹೀರೋ ಮಗನ ಜೊತೆ ಮಹೇಶ್‌ ಬಾಬು ಪುತ್ರಿ ಸಿತಾರ ಸಿನಿಮಾ ಎಂಟ್ರಿ?

maheshbabu daughter sitara: ಪ್ರಿನ್ಸ್ ಮಹೇಶ್ ಬಾಬು ಸದ್ಯ ರಾಜಮೌಳಿ ನಿರ್ದೇಶನದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇದೊಂದು ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದ್ದು, ರಾಜಮೌಳಿ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ತಾರಾಬಳಗವನ್ನು ಕಣಕ್ಕಿಳಿಸುತ್ತಿದ್ದಾರೆ. ಅಂದಹಾಗೆ ಈ ಚಿತ್ರಕ್ಕಾಗಿ ಮಹೇಶ್ ಬಾಬು ಸುಮಾರು ಮೂರು ವರ್ಷ ಕಳೆಯಬೇಕಂತೆ. ಅಲ್ಲದೇ ಇದರ ಎರಡು ಭಾಗಗಳು ಬರಲಿವೆ ಎಂಬ ವರದಿಗಳಿವೆ ಆದರೆ ಈ ಬಗ್ಗೆ ಅಧಿಕೃತ ದೃಢೀಕರಣವಿಲ್ಲ.

Written by - Savita M B | Last Updated : May 26, 2024, 03:04 PM IST
  • ಸಿನಿಮಾ ವಿಚಾರದಲ್ಲಿ ಮಹೇಶ್ ಬಾಬುಗಿಂತ ಮಗಳು ಸಿತಾರಾ ಹೆಚ್ಚು ಆಕ್ಟೀವ್‌ ಆಗಿದ್ದಾರೆ.
  • ಇನ್‌ಸ್ಟಾಗ್ರಾಮ್‌ನಲ್ಲಿ ಸಿತಾರಾ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ.
ಆ ಸ್ಟಾರ್ ಹೀರೋ ಮಗನ ಜೊತೆ ಮಹೇಶ್‌ ಬಾಬು ಪುತ್ರಿ ಸಿತಾರ ಸಿನಿಮಾ ಎಂಟ್ರಿ? title=

 sitara: ಸಿನಿಮಾ ವಿಚಾರದಲ್ಲಿ ಮಹೇಶ್ ಬಾಬುಗಿಂತ ಮಗಳು ಸಿತಾರಾ ಹೆಚ್ಚು ಆಕ್ಟೀವ್‌ ಆಗಿದ್ದಾರೆ..  ಕಾಲಕಾಲಕ್ಕೆ ಸೋಷಿಯಲ್‌ ಮಿಡಿಯಾದಲ್ಲಿ ಅಪ್‌ಡೇಟ್‌ಗಳನ್ನು ನೀಡುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಿತಾರಾ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. 

ಸಿತಾರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಅಣ್ಣ ಗೌತಮ್ ಜೊತೆ ಆಟವಾಡುವುದು ತುಂಬಾ ಇಷ್ಟ.. ತಾಳ್ಮೆಯಿಂದ ಇರುವುದನ್ನು ಅಣ್ಣನಿಂದ ಕಲಿತೆ.. ತಾಯಿ ನಮ್ರತಾ ಅವರಿಂದ ಫ್ಯಾಶನ್ ಸೆನ್ಸ್ ಮತ್ತು ತಂದೆ ಮಹೇಶ್ ಬಾಬು ಅವರಿಂದ ನಟನೆಯನ್ನು ಕಲಿತಿದ್ದೇನೆ ಎಂದಿದ್ದಾರೆ.. 

ಇದನ್ನೂ ಓದಿ-ಟೀಂ ಇಂಡಿಯಾದಲ್ಲಿ ಸಾವಿರ ಪಟ್ಟು ರಾಜಕೀಯ ನಡೆಯುತ್ತದೆ ಎಂದಿದ್ದ ಕೆಎಲ್ ರಾಹುಲ್ ಅಮಾನತು ಸಾಧ್ಯತೆ!?

ಖಲೇಜಾ ಚಿತ್ರದಲ್ಲಿ ಸೀತಾರಾಮರಾಜು ಪಾತ್ರದಲ್ಲಿ ನಟಿಸುವ ತನ್ನ ಆಸೆಯನ್ನು ಸಿತಾರಾ ಬಹಿರಂಗಪಡಿಸಿದ್ದಾರೆ.. ನಂತರ ಸಿನಿಮಾ ಎಂಟ್ರಿ ಬಗ್ಗೆ ಕೇಳಿದಾಗ, ಅದಕ್ಕೆ ಇನ್ನೂ ಸಮಯವಿದೆ ಎಂದು ಹೇಳಿದ್ದಾರೆ.. ಈ ಹಿಂದೆ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ತಮ್ಮ ಮಗಳ ಸಿನಿರಂಗ ಪ್ರವೇಶದ ಬಗ್ಗೆ ಮಾತನಾಡಿದ್ದರು..  

ಇನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಪವನ್ ಕಲ್ಯಾಣ್ ಪುತ್ರ ಅಕಿರಾ ನಂದನ್ ನಾಯಕನಾಗಿ, ಸಿತಾರಾ ನಾಯಕಿಯಾಗಿ ಬಿಗ್ ಕಾನ್ಸೆಪ್ಟ್ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಯಾವುದಾದರೂ ಅಧಿಕೃತ ಘೋಷಣೆಯಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ-ಹಾರ್ದಿಕ್ -ನತಾಶಾ ಡಿವೋರ್ಸ್ ವದಂತಿ! ವಿಚ್ಛೇದನವಾದ್ರೆ ನತಾಶಾಗೆ ಶೇ.70ರಷ್ಟು ಆಸ್ತಿ ಪಾಲು ನೀಡಬೇಕೇ ಪಾಂಡ್ಯ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News