ಶಿವಣ್ಣನ ‘ಘೋಸ್ಟ್’ ಸಿನಿಮಾದಲ್ಲಿ ‘MOUSE’ನ ಮೇಜರ್ ಪಾತ್ರ! ಇದು Exclusive ಮಾಹಿತಿ

Ghost Kannada Movie Updates: ಅಕ್ಟೋಬರ್ 19ರಂದು ಬಹುನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ‌. 'ಘೋಸ್ಟ್' ಚಿತ್ರ ವಿದೇಶದಲ್ಲೂ ರಿಲೀಸ್ ಆಗಲಿದೆ. ಶಿವಣ್ಣ ಅವರ ಹುಟ್ಟುಹಬ್ಬಕ್ಕೆ 'Big daddy' ಟೀಸರ್ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ. ​

Written by - YASHODHA POOJARI | Edited by - Puttaraj K Alur | Last Updated : Oct 6, 2023, 10:38 PM IST
  • ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟನೆಯ 'ಘೋಸ್ಟ್' ಅಕ್ಟೋಬರ್ 19ಕ್ಕೆ ರಿಲೀಸ್ ಆಗುತ್ತಿದೆ
  • ‘ಜೀ ಕನ್ನಡ ನ್ಯೂಸ್‍’ ನೀಡಿರುವ ಸಂದರ್ಶನದಲ್ಲಿ ಸಿನಿಮಾದ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿರುವ ಶಿವಣ್ಣ
  • ‘ಘೋಸ್ಟ್‍ನಲ್ಲಿ ಒಂದು ‘Mouse’ದು ದೊಡ್ಡ ಪಾತ್ರವಿದೆ ಅನ್ನೋ Exclusive ಮಾಹಿತಿ ನೀಡಿದ್ದಾರೆ
ಶಿವಣ್ಣನ ‘ಘೋಸ್ಟ್’ ಸಿನಿಮಾದಲ್ಲಿ ‘MOUSE’ನ ಮೇಜರ್ ಪಾತ್ರ! ಇದು Exclusive ಮಾಹಿತಿ  title=
ಅ.19ಕ್ಕೆ 'ಘೋಸ್ಟ್' ರಿಲೀಸ್ ಆಗುತ್ತಿದೆ!

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ 'ಘೋಸ್ಟ್' ಚಿತ್ರ ಇದೇ ಅಕ್ಟೋಬರ್ 19ಕ್ಕೆ ರಿಲೀಸ್ ಆಗುತ್ತಿದೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದ ಚಿತ್ರ ಇದಾಗಿದೆ. ಘೋಸ್ಟ್ ಸಿನಿಮಾದ ಟ್ರೈಲರ್ ಮತ್ತು ಟೀಸರ್ ಸಪ್ತ ಸಾಗರದಾಚೆಗೂ ಸೌಂಡ್ ಮಾಡುತ್ತಿದೆ.

'ಘೋಸ್ಟ್' ಟ್ರೈಲರ್ ನೋಡಿ ಸಿನಿಮಾ ಪ್ರಿಯರು ಏನ್ರೀ ಇದು ಹಾಲಿವುಡ್ ರೇಂಜಿಗೆ ಇದೆ ಅಂತಿದ್ದಾರೆ. ಹಿಂದಿಯಲ್ಲಿ ಟ್ರೈಲರ್ ಕನ್ನಡಕ್ಕಿಂತಲೂ ಹೆಚ್ಚಾಗಿ ವ್ಯೂಸ್ ಆಗುತ್ತಿದೆ. ಈಗ ಏನಪ್ಪಾ ಮ್ಯಾಟರ್ ಅಂದ್ರೆ ಕರುನಾಡ ಚಕ್ರವರ್ತಿ ಶಿವಣ್ಣ ‘ಜೀ ಕನ್ನಡ ನ್ಯೂಸ್‍’ ನೀಡಿರುವ ಸಂದರ್ಶನದಲ್ಲಿ ‘ಘೋಸ್ಟ್’ ಸಿನಿಮಾದಲ್ಲಿನ ಇಂಟ್ರೆಸ್ಟಿಂಗ್ ವಿಚಾರವನ್ನು ತಿಳಿಸಿದ್ದಾರೆ. ಅದೆನಂದರೆ "MOUSE".. ಒಂದು  "Mouse" ಕೂಡ ಸಿನಿಮಾದಲ್ಲಿ ದೊಡ್ಡ ಪಾತ್ರ ಮಾಡಿದೆ ಅನ್ನೋ ಮ್ಯಾಟರ್‍ನ Exclusive ಆಗಿ ಹಂಚಿಕೊಂಡಿದ್ದಾರೆ. ಇದು ಈಗ ‘ಘೋಸ್ಟ್’ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ: ಅಕ್ಟೋಬರ್ 8ರಿಂದ ಕನ್ನಡ ಕಿರುತರೆ ವೀಕ್ಷಕರಿಗೆ ಮನರಂಜನೆಯ ರಸದೌತಣ..!

ಅಕ್ಟೋಬರ್ 19ರಂದು ಬಹುನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ‌. 'ಘೋಸ್ಟ್' ಚಿತ್ರ ವಿದೇಶದಲ್ಲೂ ರಿಲೀಸ್ ಆಗಲಿದೆ. ಶಿವಣ್ಣ ಅವರ ಹುಟ್ಟುಹಬ್ಬಕ್ಕೆ 'Big daddy' ಟೀಸರ್ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ. 'ಘೋಸ್ಟ್' ಚಿತ್ರವನ್ನು ನೋಡಲು ಬರೀ ಭಾರತೀಯರಷ್ಟೇ ಅಲ್ಲ, ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ.

ಲಂಡನ್‌ನಿಂದ ಅಭಿಮಾನಿಗಳು ತಾವು ಈ ಚಿತ್ರದ ಬಿಡುಗಡೆಗೆ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡು, ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದ್ದಾರೆ. ಮಹೇನ್‌ ಸಿಂಹ ಸಿನಿಮಾಟೋಗ್ರಫಿ ಕೆಲಸ, ಮಾಸ್ತಿ ಸಂಭಾಷಣೆ, ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈ ಚಿತ್ರಕ್ಕಾಗಿ ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಬೃಹತ್‌ ಜೈಲ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿತ್ತು.

ಇದನ್ನೂ ಓದಿ: Jalapatha Release: ಅಕ್ಟೋಬರ್ 13ಕ್ಕೆ ಮಲೆನಾಡಿನ ಸಂಸ್ಕೃತಿಯ 'ಜಲಪಾತ' ಸಿನಿಮಾ ತೆರೆಗೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News