ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸದಾಂ ಹುಸೇನ್ ಗೆ ಹೋಲಿಕೆ ಮಾಡಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್, ದೀದಿ ಕೈಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಒಬೆರಾಯ್, "ದೀದಿ ಅವರು ಸದ್ದಾಂ ಹುಸೇನ್ ರೀತಿ ಏಕೆ ವರ್ತಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ವಿಪರ್ಯಾಸವೆಂದರೆ ಸರ್ವಾಧಿಕಾರಿಯಂತೆ ದೀದಿಯಿಂದಲೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೊದಲು ಪ್ರಿಯಾಂಕಾ ಶರ್ಮಾ ಮತ್ತೀಗ ತಜೀಂದ್ರಬಗ್ಗಾ... ಈ ದೀದಿ ಗಿರಿ ನಡೆಯಲ್ಲ. ಬಂಗಾಳವನ್ನು ರಕ್ಷಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ" ಎಂದಿದ್ದಾರೆ.
I can’t understand why a respected lady like Didi is behaving like Saddam Hussain! Ironically, democracy is under threat and in danger by Dictator Didi herself. First #PriyankaSharma & now #TajinderBagga. यह दीदीगिरी नही चलेगी ! #SaveBengalSaveDemocracy #FreeTajinderBagga pic.twitter.com/oRq596aljH
— Vivek Anand Oberoi (@vivekoberoi) May 15, 2019
ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಈ ವೇಳೆ 100 ಅಧಿಕ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಹೇಳಿದೆ.