Maryada Prashne : ಸ್ಯಾಂಡಲ್ ವುಡ್ ನಲ್ಲಿ ಸಕತ್ ಸದ್ದು ಮಾಡಿದ "ಮರ್ಯಾದೆ ಪ್ರಶ್ನೆ" : ಗುಟ್ಟು ರಟ್ಟು

ಇತ್ತೀಚೆಗೆ ಮರ್ಯಾದೆ ಪ್ರಶ್ನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಸೆಲೆಬ್ರಿಟಿಗಳೆಲ್ಲ ಕೆಲ ವಿಷಯಗಳನ್ನು ಹೇಳಿಕೊಂಡು ಮರ್ಯಾದಿ ಪ್ರಶ್ನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಏನಿದು ಮರ್ಯಾದೆ ಪ್ರಶ್ನೆ ಇಲ್ಲಿದೆ ತಿಳಿದುಕೊಳ್ಳಿ 

Written by - Zee Kannada News Desk | Last Updated : Mar 17, 2024, 07:16 PM IST
  • 'ಮರ್ಯಾದೆ ಪ್ರಶ್ನೆ' ಇದೊಂದು ಸಿನಿಮಾ ಟೈಟಲ್ ಆಗಿದ್ದು, ಸಕ್ಕತ್ ಸ್ಡುಡಿಯೋಸ್ ಆರ್‌ಜೆ ಪ್ರದೀಪ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
  • ಪುಕ್ಸಟ್ಟೆ ಲೈಫು ಚಿತ್ರ ನಿರ್ಮಿಸಿದ್ದ ನಾಗರಾಜ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
  • ಶೀಘ್ರದಲ್ಲೇ ಚಿತ್ರದ ತಾರಾಬಳಗ ರಿವೀಲ್ ಆಗಲಿದೆ
Maryada Prashne : ಸ್ಯಾಂಡಲ್ ವುಡ್ ನಲ್ಲಿ ಸಕತ್ ಸದ್ದು ಮಾಡಿದ "ಮರ್ಯಾದೆ ಪ್ರಶ್ನೆ" : ಗುಟ್ಟು ರಟ್ಟು title=

Maryada Prashne : 'ಮರ್ಯಾದೆ ಪ್ರಶ್ನೆ' ಇದೊಂದು ಸಿನಿಮಾ ಟೈಟಲ್ ಆಗಿದ್ದು, ಸಕ್ಕತ್ ಸ್ಡುಡಿಯೋಸ್ ಆರ್‌ಜೆ ಪ್ರದೀಪ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಲೂಸ್ ಕನೆಕ್ಷನ್ ಮತ್ತು ಹನಿಮೂನ್ ನಿರ್ಮಾಣ ಮಾಡಿದ್ದ ಸಕ್ಕತ್ ಸ್ಟುಡಿಯೋ ಮೂಲಕ ಆರ್ ಜೆ ಪ್ರದೀಪ ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರದ ಮೂಲಕ ಸ್ಯಾಂಡಲ್ ವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಇದನ್ನು ಓದಿ : ಶಿವಮೊಗ್ಗಕ್ಕೆ ನಾಳೆ ಪ್ರಧಾನಿ ಭೇಟಿ :ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಮೋದಿ

ಪುಕ್ಸಟ್ಟೆ ಲೈಫು ಚಿತ್ರ ನಿರ್ಮಿಸಿದ್ದ ನಾಗರಾಜ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು,ಚಿತ್ರದ ಚಿತ್ರೀಕರಣ ಬೆಂಗಳೂರು ಹಾಗೂ ಚಾಮರಾಜಪೇಟೆ ಸುತ್ತಮುತ್ತ ನಡೆಸಲಾಗಿದೆ.  

ಇದು ಮಧ್ಯಮವರ್ಗದವರ ಭಾವನೆಗಳನ್ನು ಹೇಳುವ ಸಿನಿಮಾ. ‘ದುಡ್ಡಿರೋರಿಗೆ ಎಲ್ಲಾ ದುಡಿಯೋರಿಗೆ ಏನೂ ಇಲ್ಲ’ ಎಂಬ ಲೈನ್ ಮೇಲೆ ಸಿನಿಮಾದ ಕಥೆ ಸಾಗಲಿದೆ. ಯಾವಾಗಲೋ ಒಮ್ಮೆ ದುಡ್ಡು ಮಾಡುತ್ತೇವೆ. ಆ ಹೋಪ್​ನಲ್ಲೇ ಎಲ್ಲರೂ ಬದುಕುತ್ತಿರುತ್ತೇವೆ. ಆ ಎಮೋಷನ್​ ಸಿನಿಮಾದಲ್ಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.ಚಿತ್ರವು ಮಧ್ಯಮ ವರ್ಗದ ಸ್ಟೋರಿ ಆಗಿದ್ದು, ಥ್ರಿಲ್ಲರ್ ಅಂಶಗಳೊಂದಿಗೆ ಚಿತ್ರಕಥೆ ಸಾಗಲಿದೆ. 

ಇದನ್ನು ಓದಿ: Photo Review : 'ಫೋಟೋ ': ವಲಸೆ ಕಾರ್ಮಿಕರ ಲಾಕ್ ಡೌನ್ ಸಂಕಷ್ಟ ತೋರ್ಪಡಿಸುವ ನೈಜ ಘಟನಾಧಾರಿತ ಸಿನಿಮಾ

ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಚಿತ್ರತಂಡ ನಿರತವಾಗಿದೆ. ಶೀಘ್ರದಲ್ಲೇ ಚಿತ್ರದ ತಾರಾಬಳಗ ರಿವೀಲ್ ಆಗಲಿದೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News