ನವದೆಹಲಿ: ದೇಶದ ಖ್ಯಾತನಾಮರನ್ನು ತನ್ನ ಬಲೆಗೆ ಬೀಳಿಸಿರುವ #ME TOO ಅಭಿಯಾನ ಇದೀಗ ಬಂಗಾಳಿ ಚಿತ್ರರಂಗದಲ್ಲಿ ತನ್ನ ಪ್ರಭಾವ ತೋರಿಸಲಾರಂಭಿಸಿದೆ. ಸದ್ಯ ಈ ಅಭಿಯಾನದಡಿ ಖ್ಯಾತ ಬಂಗಾಳಿ ಭಾಷೆಯ ಕಿರುತೆರೆ ನಟಿ ರುಪಾಂಜನಾ ಮಿತ್ರಾ, ಸುಪ್ರಸಿದ್ಧ ಬಂಗಾಳಿ ಚಿತ್ರನಿರ್ದೇಶಕ ಅರಿಂದಮ್ ಸೀಲ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಆನಂದ್ ಬಜಾರ್ ಡಿಜಿಟಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾತಿರುವ ರೂಪಾಂಜನಾ, ಜನಪ್ರೀಯ 'ಭೂಮಿಕನ್ಯಾ' ಸಿರಿಯಲ್ ನ ಸ್ಕ್ರಿಪ್ಟ್ ಓದಲು ತಮ್ಮ ಕೊಲ್ಕತ್ತಾ ಕಚೇರಿಗೆ ಕರೆಯುತ್ತಿದ್ದ ಚಿತ್ರ ನಿರ್ದೇಶಕ ತಮ್ಮ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಿದ್ದಾರೆ.
ABP ಡಿಜಿಟಲ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರೂಪಾಂಜನಾ, "ನನ್ನನ್ನು ಅವರು 'ಭೂಮಿಕನ್ಯಾ' ಧಾರಾವಾಹಿಯ ಮೊದಲ ಎಪಿಸೋಡ್ ನ ಸ್ಕ್ರಿಪ್ಟ್ ಓದಲು ತಮ್ಮ ಕಚೇರಿಗೆ ಕರೆಸುತ್ತಿದ್ದರು. ದುರ್ಗಾ ಪೂಜೆಗೂ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದೆ. ಸಂಜೆ 5 ಗಂಟೆಗೆ ಅವರ ಕಚೇರಿಗೆ ತಲುಪಿದಾಗ ಅವರ ಕಚೇರಿಯಲ್ಲಿ ಯಾರೂ ಇರಲಿಲ್ಲ ಎಂಬುದು ಇಲ್ಲಿ ಆಶ್ಚರ್ಯದ ಜೊತೆ ಭಯ ಹುಟ್ಟಿಸುವ ಸಂಗತಿಯಾಗಿತ್ತು. ಒಮ್ಮೆಲೇ ತಮ್ಮ ಚೇರ್ ನಿಂದ ಎದ್ದ ನಿರ್ದೇಶಕರು ನನ್ನ ತಲೆ ಮತ್ತು ಬೆನ್ನು ಸವರಲು ಪ್ರಾರಂಭಿಸಿದರು. ಈ ವೇಳೆ ಅವರ ಕಚೇರಿಯಲ್ಲಿ ಅವರ ಜೊತೆ ಕೇವಲ ನಾನಿದ್ದೆ. ಆಗ ನಾನು ನನ್ನ ಜೊತೆ ದುಷ್ಕ್ರುತ್ಯ ನಡೆಯಲಿದೆ ಎಂಬ ಭಯಕ್ಕೆ ಒಳಗಾಗಿದ್ದೆ ಹಾಗೂ ಯಾರಾದರೂ ಅಲ್ಲಿ ಬರಲಿ ಎಂದು ಪ್ರಾರ್ಥಿಸಲಾರಂಭಿಸಿದೆ" ಎಂದು ಹೇಳಿದ್ದಾರೆ.
"ಕೆಲ ಸಮಯದ ಬಳಿಕ ಇದು ನನ್ನಿಂದ ಸಹಿಸಲಾಗಲಿಲ್ಲ. ಹಾಗೂ ನಾನು ಗಟ್ಟಿಯಾಗಿ ಅವರೊಂದಿಗೆ ಸ್ಕ್ರಿಪ್ಟ್ ಕುಳಿತು ಮಾತನಾಡಲು ಆರಂಭಿಸಿದೆ. ಆಗ ನಾನು ಆ ರೀತಿಯ ಹುಡುಗಿ ಅಲ್ಲ ಎಂಬ ಸಂಕೇತ ದೊರೆತ ನಿರ್ದೇಶಕರು ತಮ್ಮ ವೃತ್ತಿಪರತೆಯತ್ತ ವಾಲಿದರೂ ಮತ್ತು ಅಷ್ಟರಲ್ಲಿ ಅವರ ಪತ್ನಿಯೂ ಸಹ ಅವರ ಕಚೇರಿಗೆ ಬಂದರು" ಎಂದು ರೋಪಾಂಜನಾ ಹೇಳಿಕೊಂಡಿದ್ದಾರೆ. ನಿರ್ದೇಶಕರ ಕಚೇರಿಯಿಂದ ಮನೆಗೆ ತೆರಳಿದ ತಾವು ಕುಸಿದು ಬಿದ್ದಿರುವುದಾಗಿ ಅವರು ಹೇಳಿದ್ದಾರೆ.
ರೂಪಾಂಜನಾ ಮಾಡಿರುವ ಈ ಆರೋಪಗಳನ್ನು ಅಲ್ಲಗಳೆದಿರುವ ನಿರ್ದೇಶಕ ಅರಿಂದಮ್ ಸೀಲ್, "ಇದೊಂದು ರಾಜಕೀಯ ಸ್ಟಂಟ್ ಆಗಿದ್ದು, ರೂಪಾಂಜನಾ ಯಾಕೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ತಮಗೆ ತಿಳಿದಿಲ್ಲ, ಅಂದು ನಾನು ಅವರನ್ನು ಕಚೇರಿಯಿಂದ ಹೊರಗಟ್ಟಿದ್ದೆ. ಮನೆಗೆ ತೆರಳಿದ್ದ ಆಕೆ 'ನಾನು ನಿಮ್ಮ ಜೊತೆ ಕೆಲಸ ಮಾಡಲು ತುಂಬಾ ಆಸಕ್ತಿ ಹೊಂದಿದ್ದೇನೆ' ಎಂಬ ಸಂದೇಶ ಕೂಡ ಕಳುಹಿಸಿದ್ದು, ಆ ಸಂದೇಶ ಇಂದಿಗೂ ಕೂಡ ನನ್ನ ಮೊಬೈಲ್ ನಲ್ಲಿ ಇದೆ ಮತ್ತು ನಾನು ಅದನ್ನು ಬಹಿರಂಗಪಡಿಸಬಲ್ಲೆ. ಒಂದು ವೇಳೆ ನಾನು ಆಕೆಯ ಜೊತೆಗೆ ದುರ್ವ್ಯವಹಾರ ನಡೆಸಿದ್ದೆ ನಿಜ ಆದಲ್ಲಿ ಆಕೆ ತಮಗೆ ಮೆಸೇಜ್ ಯಾಕೆ ಮಾಡುತ್ತಿದ್ದರು?" ಎಂದು ಪ್ರಶ್ನಿಸಿದ್ದಾರೆ.