44ನೇ ವಯಸ್ಸಿಗೆ 2ನೇ ಮದುವೆಯಾಗಿದ್ದ ನಟಿ ಊರ್ವಶಿ... ಕುಡಿತದ ಚಟಕ್ಕೆ ದಾಸಳಾಗಿದ್ದ ಈಕೆಯ ಇಬ್ಬರು ಗಂಡಂದಿರು ಯಾರು ಗೊತ್ತಾ? ಒಬ್ಬ ನಟ.. ಮತ್ತೊಬ್ಬ ಖ್ಯಾತ ನಿರ್ದೇಶಕ

Actress Urvashi Husband: ನಾಲ್ಕು ದಶಕಗಳ ವೃತ್ತಿಜೀವನದಲ್ಲಿ, ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ, ಎರಡು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದಿದ್ದಾರೆ. 

Written by - Bhavishya Shetty | Last Updated : Jul 27, 2024, 05:53 PM IST
    • ಕನ್ನಡ ಮತ್ತು ತೆಲುಗು ಚಿತ್ರಗಳಲ್ಲೂ ಗಮನಾರ್ಹ ಅಭಿನಯ ಮಾಡಿರುವ ಊರ್ವಶಿ
    • 2000 ರಂದು ಚಲನಚಿತ್ರ ನಟ ಮನೋಜ್ ಕೆ. ಜಯನ್ ಅವರನ್ನು ವಿವಾಹವಾದರು
    • ಕುಡಿತಕ್ಕೆ ದಾಸಿಯಾಗಿದ್ದ ಊರ್ವಶಿ, ಸಂಬಂಧವನ್ನು ಹಾಳು ಮಾಡಿಕೊಂಡು ಚ್ಛೇದನ ನೀಡಿದರು
44ನೇ ವಯಸ್ಸಿಗೆ 2ನೇ ಮದುವೆಯಾಗಿದ್ದ ನಟಿ ಊರ್ವಶಿ...  ಕುಡಿತದ ಚಟಕ್ಕೆ ದಾಸಳಾಗಿದ್ದ ಈಕೆಯ ಇಬ್ಬರು ಗಂಡಂದಿರು ಯಾರು ಗೊತ್ತಾ? ಒಬ್ಬ ನಟ.. ಮತ್ತೊಬ್ಬ ಖ್ಯಾತ ನಿರ್ದೇಶಕ title=
File Photo

Actress Urvashi Husband: ನಟಿ, ಡಬ್ಬಿಂಗ್ ಕಲಾವಿದೆ, ದೂರದರ್ಶನ ನಿರೂಪಕಿ, ಚಿತ್ರಕಥೆಗಾರ್ತಿ ಮತ್ತು ಚಲನಚಿತ್ರ ನಿರ್ಮಾಪಕಿಯಾಗಿದ್ದ ಊರ್ವಶಿ, ದಕ್ಷಿಣದ ಚಲನಚಿತ್ರೋದ್ಯಮದಲ್ಲಿ, ಪ್ರಧಾನವಾಗಿ ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರಗಳಲ್ಲೂ ಗಮನಾರ್ಹ ಅಭಿನಯ ಮಾಡಿರುವ ಊರ್ವಶಿ ಬದುಕು ಮಾತ್ರ ಏರಿಳಿತಗಳಿಂದ ಕೂಡಿತ್ತು ಎನ್ನಬಹುದು.

ನಾಲ್ಕು ದಶಕಗಳ ವೃತ್ತಿಜೀವನದಲ್ಲಿ, ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ, ಎರಡು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದಿದ್ದಾರೆ. ತನ್ನ ವಿಶಿಷ್ಟ ಶೈಲಿಯ ನಟನೆಗೆ ಹೆಸರುವಾಸಿಯಾಗಿರುವ ಊರ್ವಶಿ ಮಲಯಾಳಂ ಮತ್ತು ತಮಿಳು ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರಾಗಿದ್ದಾರೆ. ಊರ್ವಶಿ 1980 ಮತ್ತು 1990 ರ ದಶಕದ ಪ್ರಮುಖ ನಾಯಕ ನಟಿಯಾಗಿದ್ದರು. 

ಇದನ್ನೂ ಓದಿ: 2 ವಿವಾಹವಾದ ನಟನೊಂದಿಗೆ ಸಂಬಂಧ, ಮದುವೆಯಾಗದೆ 2 ಮಕ್ಕಳ ತಾಯಿಯಾದ ಖ್ಯಾತ ನಟಿ! ಈಕೆಯ ಮಗಳು 100 ಕೋಟಿ ಸಂಭಾವನೆ ಪಡೆದ ಮೊದಲ ನಾಯಕನಟಿ!!

ಊರ್ವಶಿ, ಕೊಲ್ಲಂ ಜಿಲ್ಲೆಯಲ್ಲಿ ಜನಪ್ರಿಯ ನಾಟಕ ನಟರಾದ ಚವರ ವಿ ಪಿ ನಾಯರ್ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರಿಯಾಗಿ ಜನಿಸಿದರು. ಇವರು ಪ್ರಸಿದ್ಧ ಮಲಯಾಳಿ ಬರಹಗಾರರಾದ ಸೂರನಾಡ್ ಕುಂಜನ್ ಪಿಳ್ಳೈ ಅವರ ಮೊಮ್ಮಗಳು. ಊರ್ವಶಿ ಕುಟುಂಬ ತಿರುವನಂತಪುರದಲ್ಲಿ ನೆಲೆಸಿದೆ. ಆಕೆಯ ಇಬ್ಬರು ಸಹೋದರರಾದ ಕಮಲ್ ರಾಯ್ ಮತ್ತು ಪ್ರಿನ್ಸ್ ಕೂಡ ಕೆಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. 

ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಿರುವನಂತಪುರಂನ ಫೋರ್ಟ್ ಗರ್ಲ್ಸ್ ಮಿಷನ್ ಹೈಸ್ಕೂಲ್‌ʼನಲ್ಲಿ ನಾಲ್ಕನೇ ತರಗತಿಯವರೆಗೆ ಪಡೆದರೆ, ನಂತರ ಕೋಡಂಬಾಕ್ಕಂನ ಕಾರ್ಪೊರೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಒಂಬತ್ತನೇ ತರಗತಿಯವರೆಗೆ ಕಲಿತರು. ಅದಾದ ಬಳಿಕ ಅವರ ಕುಟುಂಬವು ಚೆನ್ನೈಗೆ ಸ್ಥಳಾಂತರಗೊಂಡಿತು.

ಇದನ್ನೂ ಓದಿ:  6,6,6,6,6,6... ಟಿ20 ಕ್ರಿಕೆಟ್‌ʼನಲ್ಲಿ ಸಂಚಲನ ಸೃಷ್ಟಿಸಿದ ಕಾವ್ಯಾ ಮಾರನ್‌ ನೆಚ್ಚಿನ ಕ್ರಿಕೆಟಿಗ

ಇನ್ನು ಊರ್ವಶಿ ಮೇ 2000 ರಂದು ಚಲನಚಿತ್ರ ನಟ ಮನೋಜ್ ಕೆ. ಜಯನ್ ಅವರನ್ನು ವಿವಾಹವಾದರು. ಅವರಿಗೆ ನವೆಂಬರ್ 2001 ರಲ್ಲಿ ತೇಜ ಲಕ್ಷ್ಮಿ ಎಂಬ ಮಗಳು ಜನಿಸಿದಳು. ಆದರೆ ಕುಡಿತಕ್ಕೆ ದಾಸಿಯಾಗಿದ್ದ ಊರ್ವಶಿ, ಸಂಬಂಧವನ್ನು ಹಾಳು ಮಾಡಿಕೊಂಡು 2008 ರಲ್ಲಿ ವಿಚ್ಛೇದನ ನೀಡಿದರು. ಅದಾದ ಬಳಿಕ ತಪ್ಪನ್ನು ಸರಿಪಡಿಸಿಕೊಂಡ ಊರ್ವಶಿ, ನವೆಂಬರ್ 2013 ರಲ್ಲಿ ಚೆನ್ನೈ ಮೂಲದ ಬಿಲ್ಡರ್ ಶಿವಪ್ರಸಾದ್ ಅವರನ್ನು ವಿವಾಹವಾದರು. ಈ ದಂಪತಿಗೆ ಒಂದು ಗಂಡು ಮಗು ಇದೆ. ಊರ್ವಶಿ ಎರಡನೇ ಪತಿ ಶಿವಪ್ರಸಾದ್ ಅವರು ಕಳೆದ ವರ್ಷವಷ್ಟೇ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News