ಮುಂಬೈ: ಆಗಾಗ ತನ್ನ ಹೇಳಿಕೆಗಳು ಮತ್ತು ಉಡುಪಿನಿಂದಾಗಿ ಗಮನ ಸೆಳೆಯುವ ಮಾಡೆಲ್-ನಟಿ ಶೆರ್ಲಿನ್ ಚೋಪ್ರಾ ಇತ್ತೀಚಿಗೆ ಮುಂಬೈ ನಿಲ್ದಾಣದಲ್ಲಿ ಮೈ ಮೇಲಿನ ಜಾಕೆಟ್ ತೆಗೆದಿದ್ದಾರೆ.ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಗಳ ಮೂಲಕ ಆಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಜಾಕ್‌ಪಾಟ್ ! ಹಿರಿಯ ಪ್ರಯಾಣಿಕರ ಟಿಕೆಟ್ ದರದಲ್ಲಿ ಮತ್ತಷ್ಟು ಇಳಿಕೆ
ಶೆರ್ಲಿನ್ ಚೋಪ್ರಾ ಅವರ ವೀಡಿಯೋಗೆ ಪ್ರತಿಕ್ರಿಯಿಸುತ್ತಾ, ಒಬ್ಬ ಬಳಕೆದಾರರು "ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯದನ್ನು ನಿಲ್ಲಿಸಿ, ವಿಮಾನ ನಿಲ್ದಾಣ ಹೈ ಇಂಕೆ ಬಾಪ್ ಕಾ ಸ್ಟೇಜ್ ನಹೀ ಎಂದು ಪ್ರತಿಕ್ರಿಯಿಸಿದ್ದಾರೆ.
ಶೆರ್ಲಿನ್ ಚೋಪ್ರಾ ಇತ್ತೀಚಿಗೆ ತನ್ನ ಆಕ್ಷೇಪಾರ್ಹ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಬಿಗ್ ಬಾಸ್ ತಾರೆ ರಾಖಿ ಸಾವಂತ್ ವಿರುದ್ಧ ದೂರು ದಾಖಲಿಸಿದ್ದರು.ಈ ಹಿಂದೆ, ಮೀಟೂ ವಿಚಾರವಾಗಿ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಶೆರ್ಲಿನ್ ಚೋಪ್ರಾ ಮಾಡಿದ ಆರೋಪಗಳ ಬಗ್ಗೆ ರಾಖಿ ಸಾವಂತ್ ಪ್ರತಿಕ್ರಿಯಿಸಿದ ನಂತರ ರಾಖಿ ಮತ್ತು ಶೆರ್ಲಿನ್ ವಿರುದ್ಧ ವಾಗ್ವಾದ ನಡೆದಿತ್ತು.
ಇದನ್ನೂ ಓದಿ: ಚಾಮರಾಜನಗರ: 70-80 ಫೈಲ್ ಪೆಂಡಿಂಗ್ ಇಟ್ಟು 2.5 ಲಕ್ಷ ಲಂಚಕ್ಕೆ ಬೇಡಿಕೆ- ಅಧಿಕಾರಿಗಳು ಲೋಕಾ ಬಲೆಗೆ!!
35 ವರ್ಷ ವಯಸ್ಸಿನ ಶೆರ್ಲಿನ್ 2012 ರಲ್ಲಿ ಪ್ಲೇಬಾಯ್ ಮ್ಯಾಗಜೀನ್‌ಗಾಗಿ ನಗ್ನ ಪೋಸ್ ನೀಡುವ ಮೂಲಕ ಮೊದಲ ಬಾರಿಗೆ ಸುದ್ದಿ ಮಾಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.