Sudeep Politics Entry: "ಎರಡೂ ಪಕ್ಷಗಳಿಂದ ಆಫರ್‌ಗಳಿವೆ, ಆದರೆ ನನಗೆ 3ನೇ ಪಕ್ಷ ಮುಖ್ಯ" ಎಂದ ಕಿಚ್ಚ ಸುದೀಪ್

Kiccha Sudeep entry into politics : ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಕಿಚ್ಚ ಸುದೀಪ್‌. ಇವರ ಲುಕ್‌, ಖದರ್‌ಗೆ ಫಿದಾ ಆಗದವರಿಲ್ಲ. ಇವರ ಕಂಚಿನ ಕಂಠಕ್ಕಂತೂ ಅನೇಕರು ಮನಸೋತಿದ್ದಾರೆ. ಕೆಲದಿನಗಳಿಂದ ನಟ ಕಿಚ್ಚ ಸುದೀಪ್‌ ವಿಚಾರವಾಗಿ ವದಂತಿಯೊಂದು ಹರಿದಾಡುತ್ತಿದೆ.

Written by - Chetana Devarmani | Last Updated : Feb 17, 2023, 10:44 AM IST
  • "ಎರಡೂ ಪಕ್ಷಗಳಿಂದ ಆಫರ್‌ಗಳಿವೆ"
  • "ಆದರೆ ನನಗೆ 3ನೇ ಪಕ್ಷ ಮುಖ್ಯ"
  • ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್ ಹೇಳಿಕೆ
Sudeep Politics Entry: "ಎರಡೂ ಪಕ್ಷಗಳಿಂದ ಆಫರ್‌ಗಳಿವೆ, ಆದರೆ ನನಗೆ 3ನೇ ಪಕ್ಷ ಮುಖ್ಯ" ಎಂದ ಕಿಚ್ಚ ಸುದೀಪ್  title=
Kiccha Sudeep

Kiccha Sudeep entry into politics : ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಕಿಚ್ಚ ಸುದೀಪ್‌. ಇವರ ಲುಕ್‌, ಖದರ್‌ಗೆ ಫಿದಾ ಆಗದವರಿಲ್ಲ. ಇವರ ಕಂಚಿನ ಕಂಠಕ್ಕಂತೂ ಅನೇಕರು ಮನಸೋತಿದ್ದಾರೆ. ಕೆಲದಿನಗಳಿಂದ ನಟ ಕಿಚ್ಚ ಸುದೀಪ್‌ ವಿಚಾರವಾಗಿ ವದಂತಿಯೊಂದು ಹರಿದಾಡುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಟ ಕಿಚ್ಚ ಸುದೀಪ್‌ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಆಗ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿರಲಿಲ್ಲ. ಇದೀಗ ಈ ವಿಚಾರವಾಗಿ ಕಿಚ್ಚ ಸುದೀಪ್‌ ಮೌನ ಮುರಿದಿದ್ದಾರೆ. 

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಮೂಲಕ ಸುದೀಪ್‌ ಕಾಂಗ್ರೆಸ್‌ ಸೇರುತ್ತಿದ್ದಾರೆ ಎಂಬ ವಿಚಾರಗಳು ಹರಿದಾಡಿದ್ದವು. ಆ ಬಳಿಕ ಸುದೀಪ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಜೊತೆಗಿರುವ ಫೋಟೋಗಳು ಎಲ್ಲೆಡೆ ವೈರಲ್‌ ಆದವು. ಈ ವೈರಲ್‌ ಫೋಟೋಗಳು ಸುದೀಪ್‌ ರಾಜಕೀಯಕ್ಕೆ ಬರುವ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದವು. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುದೀಪ್‌ ರಾಜಕೀಯಕ್ಕೆ ಬರುತ್ತಾರೆ ಎಂಬ ವಿಚಾರ ಹಲವರಲ್ಲಿ ಗೊಂದಲ ಸೃಷ್ಟಿಸಿತು. 

ಇದನ್ನೂ ಓದಿ :‌ Kichcha Sudeep : ರಾಜಕೀಯಕ್ಕೆ ಕಿಚ್ಚ ಸುದೀಪ್‌ ಎಂಟ್ರಿ? ಕಾಂಗ್ರೆಸ್‌ನಿಂದ ಬಂತಾ ಆಹ್ವಾನ!

ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳಲ್ಲೂ ಸುದೀಪ್‌ ಅವರಿಗೆ ಆಪ್ತರಿದ್ದಾರೆ. ಹೀಗಾಗಿ ಸುದೀಪ್‌ ಒಂದು ವೇಳೆ ರಾಜಕೀಯಕ್ಕೆ ಬಂದರೆ ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಕುತೂಹಲ ಮೂಡಿಸಿತ್ತು. CCL ನಲ್ಲಿ ಬ್ಯುಸಿಯಿರುವ ಸುದೀಪ್‌, ವಿಕ್ರಾಂತ್‌ ರೋಣ ಬಳಿಕ ಯಾವುದೇ ಹೊಸ ಸಿನಿಮಾ ಬಗ್ಗೆ ಅನೌನ್ಸ್‌ ಮಾಡಿಲ್ಲ. ಹೀಗಾಗಿ ಈ ರಾಜಕೀಯ ವಿಚಾರ ಮತ್ತಷ್ಟು ಪುಷ್ಠಿ ಪಡೆಯಿತು. 

ಕಿಚ್ಚ ಸುದೀಪ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಶುರುವಾದ ಬೆನ್ನಲ್ಲೇ ಸುದೀಪ್‌ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಈ ಬಗ್ಗೆ ಮಾತುಕತೆ ನಡೆದ ವಿಚಾರವನ್ನು ಕೂಡ ಸುದೀಪ್‌ ಒಪ್ಪಿಕೊಂಡಿದ್ದು, ವಿಶೇಷವಾಗಿದೆ. "ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದು ನಾನು ಹೇಳಲ್ಲ. ನನ್ನನ್ನು ರಾಜಕೀಯಕ್ಕೆ ಆಹ್ವಾನಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಅನೇಕ ರಾಜಕೀಯ ನಾಯಕರು ನನ್ನನ್ನು ರಾಜಕೀಯಕ್ಕೆ ಆಹ್ವಾನಿಸಿದ್ದಾರೆ" ಎಂದಿದ್ದಾರೆ.

ಇದನ್ನೂ ಓದಿ : Sudeep Politics Entry: ಡಿಕೆಶಿ ಜೊತೆ ಸುದೀಪ್‌.! ʻಕೈʼ ಹಿಡಿತಾರಾ ಅಭಿನಯ ಚಕ್ರವರ್ತಿ?

"ಎರಡು ಕಡೆ ನನಗೆ ಆಪ್ತರಿದ್ದಾರೆ. ನಾನು ಇನ್ನೂ ರಾಜಕೀಯಕ್ಕೆ ಸೇರುವ ಬಗ್ಗೆ ನಿರ್ಧಾರ ಮಾಡಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ಅಭ್ಯರ್ಥಿಗಳನ್ನು ಬೆಂಬಲಿಸಲು ನನ್ನನ್ನು ಕರೆಯಬಹುದು. ನನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಆಫರ್‌ಗಳಿವೆ ಎಂಬುದು ಸತ್ಯ. ಆದರೆ ಅಭಿಮಾನಿಗಳ ಪಕ್ಷ ಎಂಬ ಮತ್ತೊಂದು ಪಕ್ಷವಿದೆ. ಸುದೀಪ್ ರಾಜಕೀಯಕ್ಕೆ ಬರಲೇಬಾರದು ಎಂಬುದು ಜನರ ಅಭಿಪ್ರಾಯವಾಗಿರಬಹುದು. ಹೀಗಾಗಿ, ಆ ಎರಡು ಪಕ್ಷಕ್ಕಿಂತ ನನಗೆ ಮೂರನೇ ಪಕ್ಷ ಅಂದರೆ ಜನರ ಪಕ್ಷ ಬಹಳ ಮುಖ್ಯ" ಎಂದು ಸುದೀಪ್‌ ಖಾಸಗಿ ವಾಹಿನಿಯೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News