Mrunal Thakur: ಮೃಣಾಲ್ ಠಾಕೂರ್ ಮುಡಿ ಸೇರುತ್ತಾ ಪ್ರತಿಷ್ಠಿತ ಪ್ರಶಸ್ತಿ?

Mrunal Thakur: 'ಸೀತಾರಾಮಂ' ಖ್ಯಾತಿಯ ಮೃಣಾಲ್ ಠಾಕೂರ್ ಅವರಿಗೆ ಅಪರೂಪದ ಗೌರವ ಸಿಕ್ಕಿದೆ. ಇತ್ತೀಚೆಗೆ ಈ ಸುಂದರಿ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  

Written by - Chetana Devarmani | Last Updated : Aug 5, 2023, 05:59 PM IST
  • 'ಸೀತಾರಾಮಂ' ಖ್ಯಾತಿಯ ಮೃಣಾಲ್ ಠಾಕೂರ್
  • ಮೃಣಾಲ್ ಠಾಕೂರ್‌ಗೆ ಪ್ರತಿಷ್ಠಿತ ಪ್ರಶಸ್ತಿ?
  • ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಸುಂದರಿ
Mrunal Thakur: ಮೃಣಾಲ್ ಠಾಕೂರ್ ಮುಡಿ ಸೇರುತ್ತಾ ಪ್ರತಿಷ್ಠಿತ ಪ್ರಶಸ್ತಿ?   title=
Mrunal Thakur

Mrunal Thakur: ಧಾರಾವಾಹಿ ನಟಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ಮೃಣಾಲ್ ಠಾಕೂರ್ ಅವರು ಮರಾಠಿ ಚಿತ್ರ 'ವಿಟ್ಟಿ ದಂಡು' ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ 'ಲವ್ ಸೋನಿಯಾ', 'ಸೂಪರ್ 30' ಮತ್ತು ಜೆರ್ಸಿ (ಹಿಂದಿ) ನಂತಹ ಚಿತ್ರಗಳಲ್ಲಿ ಅವರು ಅದ್ಭುತವಾಗಿ ನಟಿಸಿದರು ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಪಡೆದರು. ಅದರ ನಂತರ ಘೋಸ್ಟ್ ಸ್ಟೋರೀಸ್ ಚಿತ್ರಗಳು ಸೂಪರ್ ಹಿಟ್ ಆದವು. ಆ ಬಳಿಕ ಈ ಸುಂದರಿಗೆ ಸರಣಿ ಆಫರ್‌ಗಳು ಬಂದವು. 

ತೆಲುಗಿನಲ್ಲಿ ಈ ಚೆಲುವೆ ನಟಿಸಿದ್ದ ಸೀತಾರಾಮಂ ಸಿನಿಮಾ ಆಕೆಯ ವೃತ್ತಿ ಬದುಕಿಗೆ ದೊಡ್ಡ ಬ್ರೇಕ್ ನೀಡಿತು. ‘ಸೀತಾರಾಮಂ’ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಕ್ರಶ್ ಆದರು. ಸದ್ಯ ನಾನಿ ಜೊತೆ ನಟಿಸುತ್ತಿದ್ದಾರೆ. ಈ ಸುಂದರಿಯ ಕೈಯಲ್ಲಿ ಇನ್ನೂ ಮೂರು ಚಿತ್ರಗಳಿವೆ.

ಇದನ್ನೂ ಓದಿ: ಆ ಭಾಷೆಯ ಸೊಗಡಿನಲ್ಲಿಯೇ ಸಿನಿಮಾ ಮಾಡಲು ರೆಡಿ...ಉತ್ತರ ಕರ್ನಾಟಕದ ಹುಡುಗ್ರುಗೆ ರಕ್ಷಿತ್‌ ಶೆಟ್ಟಿ ಬುಲಾವ್‌

ಮೃಣಾಲ್ ಅವರಿಗೆ ಇತ್ತೀಚೆಗೆ ಅಪರೂಪದ ಗೌರವ ಸಿಕ್ಕಿದೆ. ಸದ್ಯದಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೆಲ್ಬೋರ್ನ್ ನ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಡೈವರ್ಸಿಟಿ ಇನ್ ಸಿನಿಮಾ ಅವಾರ್ಡ್ ಗೆ ಈ ಚೆಲುವೆ ಆಯ್ಕೆಯಾಗಿದ್ದಾರೆ. 

 

 

ಮೃಣಾಲ್ ಠಾಕೂರ್ ಅವರು ವಿವಿಧ ಭಾರತೀಯ ಭಾಷೆಗಳಲ್ಲಿ ತಮ್ಮ ಮೆಚ್ಚುಗೆ ಪಾತ್ರಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ. ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದಿದ್ದಾರೆ ಮೃಣಾಲ್ ಠಾಕೂರ್. ಈ ಪ್ರಶಸ್ತಿ ಭವಿಷ್ಯದಲ್ಲಿ ಇನ್ನಷ್ಟು ಸ್ಪೂರ್ತಿದಾಯಕ ಪಾತ್ರಗಳಲ್ಲಿ ನಟಿಸಲು ಪ್ರೇರಣೆ ನೀಡಲಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಹಂದಿ ಮಾಂಸ, ನಾಯಿ ಬಿಸ್ಕೆಟ್ ಬಲು ಇಷ್ಟವಂತೆ! ಇದು ನಿಜವೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News