Maleesha Kharwa : ಪ್ರಯತ್ನ ಪಟ್ಟರೆ ಕನಸುಗಳು ನನಸಾಗುತ್ತವೆ ಅನ್ನೋದಕ್ಕೆ ಮಾಲೀಶಾಗಿಂತ ದೊಡ್ಡ ಉದಾಹರಣೆ ಬೇರೆ ಯಾರೂ ಅಲ್ಲ ಎನಿಸುತ್ತದೆ. ಮುಂಬೈನ ಧಾರಾವಿ ಕೊಳೆಗೇರಿಯಲ್ಲಿ ವಾಸಿಸುವ 14 ವರ್ಷದ ಮಲೀಶಾ ಖಾರ್ವಾ ಸದ್ಯ ಐಷಾರಾಮಿ ಸೌಂದರ್ಯ ಬ್ರಾಂಡ್ ಫಾರೆಸ್ಟ್ ಎಸೆನ್ಷಿಯಲ್ಸ್ನ ʼದಿ ಯುವತಿ ಕಲೇಕ್ಷನ್ʼನ ಮಾಡೇಲ್ ಆಗಿದ್ದಾಳೆ. ಅಲ್ಲದೆ, ಎರಡು ಹಾಲಿವುಡ್ ಚಿತ್ರಗಳಿಂದ ಈ ಯುವತಿಗೆ ಆಫರ್ಗಳು ಬಂದಿವೆ.
ಹೌದು.. ಮಲೀಶಾ ಖಾರ್ವಾ ಮುಂಬೈನ ಧಾರಾವಿಯ ಕೊಳೆಗೇರಿಯ 14 ವರ್ಷದ ನಿವಾಸಿ. ಇದೀಗ ಆಕೆಗೆ ಎರಡು ಹಾಲಿವುಡ್ ಚಲನಚಿತ್ರಗಳ ಆಫರ್ಗಳೊಂದಿಗೆ ಮಾಡೆಲ್ ಮಿಂಚುತ್ತಿದ್ದಾಳೆ. ಮಲೀಶಾ ಖಾರ್ವಾ ಇನ್ಸ್ಟಾಗ್ರಾಮ್ನಲ್ಲಿ ಕಂಟೆಂಟ್ ರಚನೆಯ ಮೂಲಕ ತನ್ನ ಪ್ರಯಾಣವನ್ನು ಪ್ರಾರಂಭಿಸಿದಳು. ನಂತರ ʼಲೈವ್ ಯುವರ್ ಫೇರಿಟೇಲ್ʼ ಎಂಬ ಕಿರುಚಿತ್ರದಲ್ಲಿ ನಟಿಸಿದಳು. ಈ ಕಿರುಚಿತ್ರದಲ್ಲಿ ಯಾವುದೇ ವೃತ್ತಿಪರ ನಟರು ನಟಿಸಿಲ್ಲ, ಬದಲಿಗೆ ಜೀವನದಲ್ಲಿ ಮೊದಲ ಬಾರಿಗೆ ರೆಸ್ಟೋರೆಂಟ್ನಲ್ಲಿ ಊಟ ಮಾಡುವ ಐದು ಸ್ಲಂ ಮಕ್ಕಳ ಅನುಭವ ಬಿಂಬಿಸುವ ಚಿತ್ರವಾಗಿತ್ತು.
ಇದನ್ನೂ ಓದಿ: ಕುತೂಹಲ ಮೂಡಿಸುತ್ತಿದೆ ʼಪ್ರತಾಪ್ ಸಿಂಹʼ ನಟನೆಯ ʼಸ್ಥಬ್ಧʼ ಚಿತ್ರದ ಟ್ರೈಲರ್...!
ಮಲೀಶಾ ಖರ್ವಾ ಅವರನ್ನು 'ಸ್ಲಂ ರಾಜಕುಮಾರಿ' ಎಂದೂ ಕರೆಯುತ್ತಾರೆ. ತಮ್ಮ ಜೀವನದಲ್ಲಿ ಬಂದಿರುವ ಹೊಸ ಅವಕಾಶಗಳ ಬಗ್ಗೆ ಪ್ರತಿಕ್ರಿಯಿಸಿದ ಮಲೀಶಾ, "ನನಗೆ ತುಂಬಾ ಸಂತೋಷವಾಗುತ್ತದೆ. ಜನರು ನನ್ನನ್ನು ಎಲ್ಲೋ ಒಂದು ಕಡೆ ನೋಡಿ, ನನ್ನನ್ನು ಗುರುತಿಸುತ್ತಿದ್ದಾರೆ. ಅವರು ನನ್ನ ಅಭಿಮಾನಿಗಳು ಅಂದಾಗ ನನಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷವನ್ನು ನೀಡುತ್ತದೆ, ಅಂತ ತನ್ನ ಮುಗ್ಧವಾಗಿ ಹೇಳುತ್ತಾಳೆ.
ಮಲೀಶಾ ಖರ್ವಾ ಅವರನ್ನು 2020 ರಲ್ಲಿ ಹಾಲಿವುಡ್ ನಟ ರಾಬರ್ಟ್ ಹಾಫ್ಮನ್ ಮುಂಬೈನಲ್ಲಿ ಪತ್ತೆ ಮಾಡಿದರು. ಆಗ ಅವರು ಮಲೀಶಾಗಾಗಿ ಗೋ ಫಂಡ್ ಮಿ ವೆಬ್ ಪುಟವನ್ನು ಸ್ಥಾಪಿಸಿದ್ದರು. ಅಂದಿನಿಂದ, ಆಕೆ ಹಲವಾರು ಮಾಡೆಲಿಂಗ್ ಗಿಗ್ಗಳಲ್ಲಿ ಭಾಗವಹಿಸಿದ್ದಾಳೆ. ಆಕೆಯ ಪ್ರತಿಭೆ ಮತ್ತು ಸೃಜನಶೀಲತೆಗೆ ನಿಜವಾಗಿಯೂ ಧನ್ಯವಾದಗಳನ್ನು ಹೇಳಲೇಬೇಕು. 14 ವರ್ಷದ ಮಲೀಶ ಖರ್ವಾ ಕಥೆಯು ಜೀವನದಲ್ಲಿ ಏಕೆ ಭರವಸೆ ಕಳೆದುಕೊಳ್ಳಬಾರದು ಎಂಬುದನ್ನು ತಿಳಿಸಿಕೊಡುತ್ತದೆ ಅಲ್ಲವೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ