close

News WrapGet Handpicked Stories from our editors directly to your mailbox

ತೆರೆಗೆ ಬರಲಿದೆ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಕುರಿತ ಜೀವನ ಚರಿತ್ರೆ..!

ಇದು ಬಯೋಪಿಕ್ ಜಮಾನಾ, ಈಗ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸಿನಿಮಾ ತೆರೆಗೆ ಬರುವುದು ಸಾಮಾನ್ಯವಾಗಿದೆ. ಇಂತಹ ಸಾಲಿಗೆ ಈಗ ಜಗದ್ವಿಖ್ಯಾತ ಶ್ರೇಷ್ಠ ಸ್ಪಿನರ್ ಗಳಲ್ಲಿ ಒಬ್ಬರಾದ ಮುತ್ತಯ್ಯ ಮುರಳಿಧರನ್ ಅವರ ಕುರಿತಾದ ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ.

Updated: Jul 30, 2019 , 04:54 PM IST
ತೆರೆಗೆ ಬರಲಿದೆ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಕುರಿತ ಜೀವನ ಚರಿತ್ರೆ..!
file photo

ನವದೆಹಲಿ: ಇದು ಬಯೋಪಿಕ್ ಜಮಾನಾ, ಈಗ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸಿನಿಮಾ ತೆರೆಗೆ ಬರುವುದು ಸಾಮಾನ್ಯವಾಗಿದೆ. ಇಂತಹ ಸಾಲಿಗೆ ಈಗ ಜಗದ್ವಿಖ್ಯಾತ ಶ್ರೇಷ್ಠ ಸ್ಪಿನರ್ ಗಳಲ್ಲಿ ಒಬ್ಬರಾದ ಮುತ್ತಯ್ಯ ಮುರಳಿಧರನ್ ಅವರ ಕುರಿತಾದ ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ.

ಈ ಸಿನಿಮಾವನ್ನು ರಾಣಾ ದಗ್ಗುಬಟಿ ನಿರ್ಮಿಸಲಿದ್ದಾರೆ. ಇನ್ನು ಮುತ್ತಯ್ಯ ಮುರಳೀಧರನ್ ಅವರ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಈಗ ಪ್ರೊಡಕ್ಷನ್ ಕುರಿತಾಗಿ ಮಾತನಾಡಿರುವ ರಾಣಾ ದಗ್ಗುಬಟಿ ಈ ಸಿನಿಮಾವನ್ನು ಎಂ ಎಸ್  ಶ್ರೀಪತಿ ನಿರ್ದೇಶಿಸಲಿದ್ದು. ಕೋ ಪ್ರೊಡಕ್ಷನ್ ಆಗಿ ದಾರ್ ಮಿಡಿಯಾ ಪ್ರೈವೇಟ್ ಮೀಡಿಯಾ ಲಿಮಿಟೆಡ್ ಇರಲಿದೆ.

ಈಗ ಪಿಟಿಐ ಜೊತೆ ಮಾತನಾಡಿರುವ ಅವರು 'ಸುರೇಶ ಪ್ರೊಡಕ್ಷನ್ ದಾರ್ ಫಿಲಂಸ್ ಜೊತೆಗಿನ ಸಹಯೋಗದೊಂದಿಗೆ ದಂತಕತೆ ಆಟಗಾರನ ಜೀವನ ಚರಿತ್ರೆಯನ್ನು ಮಹಾನ್ ನಟನ ಮೂಲಕ ಹೇಳಹೊರಟಿದೆ- ವಿಜಯ್ ಸೇತುಪತಿ ಮುತ್ತಯ್ಯ ಮುರಳೀಧರನ್ ಆಗಿ ಸದ್ಯದಲ್ಲೇ ಬರಲಿದೆ ಎಂದು ಹೇಳಿದ್ದಾರೆ. ವಿಜಯ್ ಸೇತುಪತಿ ವಿಕ್ರಂ ವೇಧಾ, ಧರಂ ದುರೈ ಮತ್ತು ಸೋದು ಕಾವ್ವುಂ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ. ಡಿಸೆಂಬರ್ 2019 ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು ಭಾರತ, ಶ್ರೀಲಂಕಾ,ಇಂಗ್ಲೆಂಡ್ ಹಾಗೂ ಜಗತ್ತಿನ ಇತರ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಮುತ್ತಯ್ಯ ಮುರಳೀಧರನ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ್ ಸೇತುಪತಿ ' ಮುರಳಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ನಿಜಕ್ಕೂ ಸವಾಲಿನ  ಕೆಲಸ, ನಾನು ಅದನ್ನು ಎದುರು ನೋಡುತ್ತಿದ್ದೇನೆ. ವಿಶೇಷವೆಂದರೆ ಸ್ವತಃ ಮುರಳಿಯವರೇ ಈ ಪ್ರೊಜೆಕ್ಟ್ ನಲ್ಲಿ ಭಾಗಿಯಾಗಲಿದ್ದು ಕ್ರಿಕೆಟ್ ಸಂಬಂಧಿಸಿದ ವಿಚಾರಗಳಿಗಾಗಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.