ನಯನತಾರಾ ಹಿಂದೆ ಸುತ್ತಿದ್ದರು ಆ ಇಬ್ಬರು ನಟರು! ವಿಘ್ನೇಶ್ ಅವರನ್ನೇ ನಟಿ ವರಿಸಲು ಕಾರಣವೇನು?

Nayanathara: ನಯನತಾರಾ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಹೊರ ಬರುತ್ತಿದ್ದ ಹಾಗೆ, ಆಕೆಯ ಹಳೆಯ ಲವ್ ಸ್ಟೋರಿಗಳ ಬಗ್ಗೆ ಗಾಸಿಪ್‌ ಶುರುವಾಯ್ತು. ನಟಿ ನಯನತಾರಾ ಡೇಟಿಂಗ್, ಲವ್ ವಿಚಾರಕ್ಕೆ ಹಲವು ಬಾರಿ ಸುದ್ದಿಯಲ್ಲಿದ್ದರು. ಇದೀಗ ಆ ಬಗ್ಗೆ ಒಂದು ಇಂಟರೆಸ್ಟಿಂಗ್‌ ವಿಚಾರ ಹೊರ ಬಿದ್ದಿದೆ. ಅದೇನಂದ್ರೆ ನಯನತಾರಾ ಹಿಂದೆ ಈ ಇಬ್ಬರು ಸ್ಟಾರ್‌ಗಳು ಸುತ್ತಿದ್ದರಂತೆ. 

Written by - Chetana Devarmani | Last Updated : Jun 11, 2022, 01:16 PM IST
  • ಸಪ್ತಪದಿ ತುಳಿದ ನಟಿ ನಯನತಾರಾ ಮತ್ತು ವಿಘ್ನೇಶ್
  • ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
  • ನಯನತಾರಾ ಹಿಂದೆ ಸುತ್ತಿದ್ದರು ಆ ಇಬ್ಬರು ನಟರು!
  • ವಿಘ್ನೇಶ್ ಅವರನ್ನೇ ನಟಿ ವರಿಸಲು ಕಾರಣವೇನು?
ನಯನತಾರಾ ಹಿಂದೆ ಸುತ್ತಿದ್ದರು ಆ ಇಬ್ಬರು ನಟರು! ವಿಘ್ನೇಶ್ ಅವರನ್ನೇ ನಟಿ ವರಿಸಲು ಕಾರಣವೇನು? title=
ನಯನತಾರಾ

ನಟಿ ನಯನತಾರಾ ಮತ್ತು ವಿಘ್ನೇಶ್ ಮದುವೆ ಅದ್ಧೂರಿಯಾಗಿ ನೆರವೇರಿದೆ. ಆಪ್ತರ ಸಮ್ಮುಖದಲ್ಲಿ ಇಬ್ಬರೂ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಸಿನಿರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಅಂತಲೇ ನಯನತಾರಾ ಫೇಮಸ್. ನಯನತಾರಾ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಹೊರ ಬರುತ್ತಿದ್ದ ಹಾಗೆ, ಆಕೆಯ ಹಳೆಯ ಲವ್ ಸ್ಟೋರಿಗಳ ಬಗ್ಗೆ ಗಾಸಿಪ್‌ ಶುರುವಾಯ್ತು. ನಟಿ ನಯನತಾರಾ ಡೇಟಿಂಗ್, ಲವ್ ವಿಚಾರಕ್ಕೆ ಹಲವು ಬಾರಿ ಸುದ್ದಿಯಲ್ಲಿದ್ದರು. ಇದೀಗ ಆ ಬಗ್ಗೆ ಒಂದು ಇಂಟರೆಸ್ಟಿಂಗ್‌ ವಿಚಾರ ಹೊರ ಬಿದ್ದಿದೆ. ಅದೇನಂದ್ರೆ ನಯನತಾರಾ ಹಿಂದೆ ಈ ಇಬ್ಬರು ಸ್ಟಾರ್‌ಗಳು ಸುತ್ತಿದ್ದರಂತೆ. 

ಇದನ್ನೂ ಓದಿ:ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್

ನಟಿ ನಯನತಾರಾ ತಮ್ಮ ಸಿನಿ ಕರೀಯರ್‌ ಆರಂಭದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ನಟ ಸಿಂಬು ಜೊತೆಗೆ. 2006ರಲ್ಲಿ ಈ ಜೋಡಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಗುಸುಪಿಸು ಮಾತುಗಳು ಕೇಳಿಬಂದಿದ್ದವು.  'ವಲ್ಲವನ್' ಚಿತ್ರದ ವೇಳೆ ಈ ಇಬ್ಬರೂ ಲವ್‌ನಲ್ಲಿ ಬಿದ್ದರು ಎಂದು ಹೇಳಲಾಗ್ತಿತ್ತು. ಆದರೆ ಈ ಜೋಡಿ ಹೆಚ್ಚು ದಿನಗಳ ಕಾಲ ಜೊತೆಗೆ ಇರಲಿಲ್ಲ. ಕೆಲವೇ ತಿಂಗಳ ಬಳಿಕ ಬ್ರೇಕಪ್ ಮಾಡಿಕೊಂಡು ದೂರಾದರು ಎಂಬ ಗಾಸಿಪ್‌ ಒಂದು ನಯನತಾರಾ ಬಗ್ಗೆ ಇದೆ. 

ಆ ಬಳಿಕ ನಟಿ ನಯನತಾರಾ ಹೆಸರು ಪ್ರಭುದೇವ ಜತೆ ಕೇಳಿ ಬಂದಿತ್ತು. ಸುಮಾರು ವರ್ಷಗಳ ಕಾಲ ಇವರಿಬ್ಬರು ಡೇಟಿಂಗ್ ಮಾಡಿದ್ದರೆಂಬ ಊಹಾಪೋಹಗಳು ಇವೆ. 2009ರಲ್ಲಿ ಈ ಜೋಡಿ ಮದುವೆ ಆಗುತ್ತದೆ ಎಂಬ ಸುದ್ದಿ ಕೂಡ ಸಖತ್‌ ವೈರಲ್‌ ಆಗಿತ್ತು. ಆದರೆ ಇವರು ಕೂಡ ಬ್ರೇಕಪ್ ಮಾಡಿಕೊಂಡರಂತೆ. 

ಇದನ್ನೂ ಓದಿ:Priyanka Chopra: 22 ವರ್ಷಗಳ ಹಿಂದೆ ಹಿಂಗಿದ್ರು ನಟಿ ಪ್ರಿಯಾಂಕಾ ಚೋಪ್ರಾ!

ಆ ಬಳಿಕ 2015ರಲ್ಲಿ ನಯನತಾರಾ ಜೀವನದಲ್ಲಿ ಬಂದವರೇ ವಿಘ್ನೇಶ್. 'ನಾನುಂ ರೌಡಿದಾನ್' ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಶಿವನ್ ಹಾಗೂ ನಯನತಾರಾ ನಡುವೆ ಲವ್‌ ಶುರುವಾಯ್ತಂತೆ. ಬಳಿಕ ಇಷ್ಟು ವರ್ಷ ಡೇಟಿಂಗ್ ಮಾಡಿದ ಈ ಸ್ಟಾರ್‌ ಜೋಡಿ ಇದೀಗ ಹಸೆಮಣೆ ಏರಿದ್ದಾರೆ. ನಯನತಾರಾ ಅವರಿಗೆ ವಿಘ್ನೇಶ್‌ ತಮ್ಮ ಲೈಫ್‌ಗೆ ಸೂಕ್ತ ಪಾರ್ಟ್ನರ್‌ ಅನಿಸಿದ ಕಾರಣ ಅವರನ್ನೇ ತಮ್ಮ ಪತಿಯಾಗಿ ಸ್ವೀಕರಿಸಿದ್ದಾರಂತೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News