ನವದೆಹಲಿ: ಬಿಡುಗಡೆಗೂ ಮುನ್ನ ಭಾರಿ ಕುತೂಹಲ ಕೆರಳಿಸಿದ್ದ ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಈಗ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಭಾರಿ ನಿರಾಸೆಯನ್ನು ಮೂಡಿಸಿದೆ. ಸುಮಾರು 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರಕ್ಕೆ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿತ್ತು. ಪ್ರೇಕ್ಷಕ ಪ್ರಭುವನ್ನು ಗಮನ ಸೆಳೆಯುವಲ್ಲಿ ವಿಫಲವಾಗಿದೆ.
ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಆ ಮೂಲಕ ಬಾಲಿವುಡ್ ಚಿತ್ರಗಳಿಗೆ ಹೊಸ ಆಯಾಮವನ್ನು ನೀಡಲಿದೆ ಎಂದು ಸಿನಿಮಾ ಮಾರುಕಟ್ಟೆಯ ವಿಶ್ಲೇಷಕರು ಭಾವಿಸಿದ್ದರು, ಆದರೆ ಈಗ ಎಲ್ಲಾ ನಿರೀಕ್ಷೆಗಳು ತಲೆಕೆಳಗಾಗಿವೆ.ಹೌದು, ಈಗ ಸಿನಿಮಾ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ ಅವರು ಈ ಚಿತ್ರವನ್ನು ತಿರಸ್ಕರಿಸಲಾಗಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ. ಇದುವರೆಗೆ ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಕೇವಲ 55 ಕೋಟಿ ರೂ ಮಾತ್ರ.
ಇದನ್ನೂ ಓದಿ: ಲಾಂಗ್ ಟ್ರಿಪ್ ಹೋಗಿ ರಿಲ್ಯಾಕ್ಸ್ ಆಗಿ ಬಂದ್ರು ನಟಿ ಕಾವ್ಯಾ..!
#SamratPrithviraj is rejected... The heavy budget on one hand and the poor outcome on the other, has sent shock waves within the industry... Fri 10.70 cr, Sat 12.60 cr, Sun 16.10 cr, Mon 5 cr, Tue 4.25 cr, Wed 3.60 cr, Thu 2.80 cr. Total: ₹ 55.05 cr. #India biz. pic.twitter.com/3z94DzBlqi
— taran adarsh (@taran_adarsh) June 10, 2022
ಇನ್ನೊಂದೆಡೆಗೆ ದಕ್ಷಿಣ ಭಾರತದಲ್ಲಿ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ, ಈ ಮೊದಲು ಆರ್ ಆರ್ ಆರ್, ಕೆಜಿಎಫ್ 2 ಚಿತ್ರವಾದರೆ, ಈಗ ವಿಕ್ರಂ ಹಾಗೂ ಚಾರ್ಲಿ ೭೭೭ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುವುದರ ಜೊತೆಗೆ ವಿಮರ್ಶಕರಿಂದಲೂ ಮೆಚ್ಚುಗೆಯನ್ನು ಗಳಿಸಿವೆ.
ಇದನ್ನೂ ಓದಿ: ಶ್ರೀನಿವಾಸ್ ಗೌಡ ಅಡ್ಡಮತದಾನ: ಮಾನಮರ್ಯಾದೆ ಇದ್ದರೆ ರಾಜಕಾರಣ ಮಾಡಲಿ ಎಂದು ಎಚ್‌ಡಿಕೆ ಆಕ್ರೋಶ
ಒಟ್ಟಿನಲ್ಲಿ ಇದುವರೆಗೆ ಬಂದಿರುವ ಹಿಂದಿ ಸಿನಿಮಾಗಳಲ್ಲಿ ಬೂಲ್ ಬೂಲಯ್ಯ 2 ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದೆ, ಉಳಿದ ಬಹುತೇಕ ಹಿಂದಿ ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿವೆ ಎಂದು ಹೇಳಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ