"ಹುಟ್ಟುಹಬ್ಬದ ಶುಭಾಶಯಗಳು ನನ್ನ ಉಯಿರ್ ಉಲಗಂ": ಮಡದಿ ನಯನತಾರಾ ಹುಟ್ಟುಹಬ್ಬಕ್ಕೆ ಪತಿ ವಿಘ್ನೇಶ್ ಶಿವನ್ ಸ್ಪೆಷಲ್ ವಿಶ್!

South Actress Nayanathara: ಲೇಡಿ ಸೂಪರ್‌ ಸ್ಟಾರ್ ನಟಿ ನಯನತಾರಾ ಮುದ್ದಿನ ಮಡದಿಯ ಹುಟ್ಟುಹಬ್ಬದಂದು ಸ್ಪೆಷಲ್‌ ವಿಶ್‌ ಮಾಡಿದ್ದು, ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.  

Written by - Zee Kannada News Desk | Last Updated : Nov 19, 2023, 01:06 PM IST
  • ತಮಿಳು ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಕಪಲ್‌ಗಳ ಸಾಲಿನಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಕೂಡ ಸೇರಿಕೊಂಡಿದೆ.
  • ಪತಿ ವಿಘ್ನೇಶ್ ಶಿವನ್ ನಯನತಾರ ಹುಟ್ಟುಹಬ್ಬದ ಶುಭ ಹಾರೈಸಿ, ಕೇಕ್ ಜೊತೆಗೆ ಸಂಭ್ರಮಾಚರಣೆ ಮಾಡಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
  • ಕ್ಯೂಟ್ ಫೋಟೋದಲ್ಲಿ ನಯನತಾರಾ ಮತ್ತು ವಿಘ್ನೇಶ್ ಆಲಿವ್ ಗ್ರೀನ್ ಟಿ ಶರ್ಟ್‌ಗಳಲ್ಲಿ ಮಿಂಚಿದ್ದಾರೆ.
"ಹುಟ್ಟುಹಬ್ಬದ ಶುಭಾಶಯಗಳು ನನ್ನ ಉಯಿರ್ ಉಲಗಂ": ಮಡದಿ ನಯನತಾರಾ ಹುಟ್ಟುಹಬ್ಬಕ್ಕೆ ಪತಿ ವಿಘ್ನೇಶ್ ಶಿವನ್ ಸ್ಪೆಷಲ್ ವಿಶ್! title=

Nayanatharaʼs 39th Birthday: ಲೇಡಿ ಸೂಪರ್‌ ಸ್ಟಾರ್ ನಟಿ ನಯನತಾರಾ ತಮಿಳು, ತೆಲುಗು, ಕನ್ನಡ, ಬಾಲಿವುಡ್ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರಿಗೆ, ನವೆಂಬರ್ 18 ರಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಕೋಟ್ಯಾಂತರ ಅಭಿಮನಿಗಳು ಶುಭಾಶಯ ಕೋರಿದ್ದರೆ, ಇತ್ತ ಮುದ್ದಿನ ಮಡದಿ ನಯನತಾರಾಗೆ ಪತಿ ವಿಘ್ನೇಶ್‌ ಸ್ಪೆಷಲ್ ವಿಶ್ ಹೇಳಿದ್ದಾರೆ.

ಹೌದು.. ತಮಿಳು ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಕಪಲ್‌ಗಳ ಸಾಲಿನಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಕೂಡ ಸೇರಿಕೊಂಡಿದ್ದು, ಇಬ್ಬರು ಮುದ್ದಾದ ಮಕ್ಕಳ ತಂದೆ ತಾಯಿ ಅನಿಸಿಕೊಂಡವರು, ಸದ್ಯ  ನಟಿ ನಯನತಾರಾ ತಮ್ಮ ಹುಟ್ಟುಹಬ್ಬದಂದು ತಮಿಳು ಸಿನಿಮಾ ನಿರ್ದೇಶಕ ಪತಿ ವಿಘ್ನೇಶ್ ಶಿವನ್ ಹುಟ್ಟುಹಬ್ಬದ ಶುಭ ಹಾರೈಸಿ, ಕೇಕ್ ಜೊತೆಗೆ ಸಂಭ್ರಮಾಚರಣೆ ಮಾಡಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಇದನ್ನು ಓದಿ: ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಗೆ ಫ್ಯಾನ್ಸ್‌ ಫುಲ್‌ ಮಾರ್ಕ್ಸ್!‌

ಪತ್ನಿಯ ಹುಟ್ಟುಹಬ್ಬ ಆಚರಣೆ ಮಾಡಿರುವ ವಿಘ್ನೇಶ್ ಶಿವನ್, ನಯನತಾರಾ ಅವರೊಂದಿಗಿನ ಮುದ್ದಾದ ಚಿತ್ರದಲ್ಲಿ ಇವರಿಬ್ಬರು ತಮ್ಮ ಮಕ್ಕಳಾದ ಉಯಿರ್ ಮತ್ತು ಉಲಗಂ ಅವರೊಂದಿಗೆ ಕ್ಯಾಮರಾಗೆ ಮುದ್ದಾಗಿ ಪೋಸ್ ನೀಡುತ್ತಿದ್ದಾರೆ. ಈ ಕ್ಯೂಟ್ ಫೋಟೋದಲ್ಲಿ ನಯನತಾರಾ ಮತ್ತು ವಿಘ್ನೇಶ್ ಆಲಿವ್ ಗ್ರೀನ್ ಟಿ ಶರ್ಟ್‌ಗಳಲ್ಲಿ ಮಿಂಚಿದ್ದಾರೆ. ಈ ಮುದ್ದಾದ ಫೋಟೋಗೆ "ಹುಟ್ಟುಹಬ್ಬದ ಶುಭಾಶಯಗಳು ನನ್ನ ತಂಗಮೇ, ನಯನತಾರಾ" ಎಂದಿದ್ದು, ಕಿಸ್ಸಿಂಗ್ ಎಮೋಜಿಗಳನ್ನು ಹಾಕಿದ್ದಾರೆ. 

ಇದರ ಜೊತೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ, ವಿಘ್ನೇಶ್ ಹುಟ್ಟುಹಬ್ಬದ ಆಚರಣೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಚಾಕೊಲೇಟ್ ಕೇಕ್ ಮೇಲೆ "ಹುಟ್ಟುಹಬ್ಬದ ಶುಭಾಶಯಗಳು ನನ್ನ ಉಯಿರ್ ಉಲಗಂ" ಎಂಬ ಪದಗಳಿವೆ. ಶೀರ್ಷಿಕೆಯಲ್ಲಿ, "ಲವ್ ಯೂ ಮೈ ಉಯಿರ್ ಮತ್ತು ಉಲಗಂ. ನಯನತಾರಾಗೆ ಜನ್ಮದಿನದ ಶುಭಾಶಯಗಳು. ನನ್ನ ಜೀವನದ ಎಲ್ಲಾ ಬ್ಯೂಟಿ ಮತ್ತು ಅರ್ಥವೇ ನೀವು ಮತ್ತು ನಿಮ್ಮ ಸಂತೋಷ" ಎಂದು ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News