ಶ್ರೀ‌ಮುರಳಿ ಜನ್ಮ ದಿನಕ್ಕೆ ಹೊಸ ಸಿನಿಮಾ ಅನೌನ್ಸ್...ಪರಾಕ್ ಟೈಟಲ್ ಪೋಸ್ಟರ್ ರಿಲೀಸ್

Parak Movie: ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಈ ಬಾರಿ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ನೋವುಗಳು ಇದ್ದರೂ ಅದನ್ನು ಬದಿಗಿಟ್ಟು ಫ್ಯಾನ್ಸ್ ಭೇಟಿ ಮಾಡುತ್ತಿದ್ದಾರೆ. ಶ್ರೀ ಜನ್ಮದಿನ ಅಂಗವಾಗಿ ಸಖತ್ ಉಡುಗೊರೆಗಳು ಸಿಕ್ಕಿವೆ.  

Written by - Savita M B | Last Updated : Dec 17, 2023, 11:28 AM IST
  • ಶ್ರೀ ಮುರಳಿ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ.
  • ಯುವ ಪ್ರತಿಭೆಗಳ ಜೊತೆ ಬಘೀರ ಕೈ ಜೋಡಿಸಿದ್ದಾರೆ.
  • ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಶ್ರೀ‌ಮುರಳಿ ಜನ್ಮ ದಿನಕ್ಕೆ ಹೊಸ ಸಿನಿಮಾ ಅನೌನ್ಸ್...ಪರಾಕ್ ಟೈಟಲ್ ಪೋಸ್ಟರ್ ರಿಲೀಸ್ title=

Parak: ಶ್ರೀ ಮುರಳಿ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಯುವ ಪ್ರತಿಭೆಗಳ ಜೊತೆ ಬಘೀರ ಕೈ ಜೋಡಿಸಿದ್ದಾರೆ. ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನವ ನಿರ್ದೇಶಕ ಹಾಲೇಶ್ ಕೋಗುಂಡಿ ಸಾರಥ್ಯದ ಚಿತ್ರಕ್ಕೆ ಪರಾಕ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. 

ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್ ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್ ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ.

ಇದನ್ನೂ ಓದಿ-ನಟ ಕಿಚ್ಚ ಸುದೀಪ್ ತಂದೆ-ತಾಯಿ ಯಾರು ಗೊತ್ತಾ? ಕರುನಾಡ ಮಾಣಿಕ್ಯನ ಅಪ್ಪ ಸ್ಯಾಂಡಲ್ವುಡ್’ನಲ್ಲಿ ಸಖತ್ ಫೇಮಸ್

ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪರಾಕ್ ಸಿನಿಮಾವನ್ನು  ಬ್ರ್ಯಾಂಡ್ ಕೋಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಬಹುತೇಕ ಬೆಣ್ಣೆ ನಗರಿ ದಾವಣಗೆರೆ ಪ್ರತಿಭೆಗಳೇ ಒಂದಾಗಿ ಮಾಡುತ್ತಿರುವ ಪರಾಕ್ ಚಿತ್ರದ ಟೈಟಲ್ ಪೋಸ್ಟರ್ ಆಕರ್ಷಕವಾಗಿದೆ. ಹೊಸ ಅವತಾರದಲ್ಲಿ ಶ್ರೀ ದರ್ಶನ ಕೊಟ್ಟಿದ್ದಾರೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಪರಾಕ್ ಬಳಗ ಮೇ ಅಥವಾ ಜೂನ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಧುಮುಕುವ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ-ವಿನಯ್, ನಮ್ರತಾ ಅಲ್ಲ… ಇವರಾಗ್ತಾರೆ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಎಂದ ಸ್ನೇಹಿತ್ ಗೌಡ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News