Sandalwood updates: ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಈ ಪಾದ ಪುಣ್ಯ ಪಾದ’. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆಯನ್ನು ಖ್ಯಾತ ನಿರ್ದೇಶಕ ಶಶಾಂಕ್ ಅನಾವರಣ ಮಾಡಿ ಶುಭಕೋರಿದರು.
‘ದಾರಿ ಯಾವುದಯ್ಯಾ ವೈಕುಂಠಕೆ’, ‘ಬ್ರಹ್ಮ ಕಮಲ’, ‘ತಾರಿಣಿ’ ಮುಂತಾದ ಸದಭಿರುಚಿ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಸಿದ್ದು ಪೂರ್ಣಚಂದ್ರರವರು ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಟಿ20ಯಲ್ಲಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ: ಈ ಐತಿಹಾಸಿಕ ಸಾಧನೆ ಮಾಡಿದ ಮೊದಲ ಬ್ಯಾಟ್ಸ್’ಮನ್
ಈ ಕಥೆಯ ವಿಶೇಷವೇನೆಂದರೆ ಕಾಲುಗಳ ಮೇಲೆ ಕಥೆ ಬರೆಯಲಾಗಿದೆ. ಎಲ್ಲಾ ಪಾತ್ರಗಳ ಕಾಲುಗಳು ಕಥೆ ಹೇಳುತ್ತವೆ. ಮಗುವಿನ ಪಾದ, ದೊಡ್ಡವರ ಪಾದ, ವಯಸ್ಸಾದ ಪಾದ, ದಣಿದ ಪಾದ, ಖುಷಿಯ ಪಾದ, ಪಾಪದ ಪಾದ, ಆನೆಕಾಲು ರೋಗಿಯ ಪಾದ ಹೀಗೆ ನಾನಾ ಪಾದಗಳಿಂದ ಕೂಡಿದ ವಿನೂತನ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ.
ಮುಖ್ಯ ಪಾತ್ರದಲ್ಲಿ ಆಟೋ ನಾಗರಾಜ್, ಮಮತಾ ರಾಹುತ್, ಪ್ರಭಾಕರ್ ಬೋರೇಗೌಡ, ಪ್ರಮಿಳಾ ಸುಬ್ರಹ್ಮಣ್ಯಂ, ಹರೀಶ್ ಕುಂದೂರ್, ಸನ್ನಿ, ಇನ್ನೂ ಮುಂತಾದವರ ತಾರಾಗಣವಿದೆ.
ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಸಂಗೀತ ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪಕ್ ಸಂಕಲನ, ನಾಗರತ್ನ ಕೆ ಹೆಚ್ ವಸ್ತ್ರ ವಿನ್ಯಾಸ, ದಿಲೀಪ್ ಹೆಚ್ ಆರ್ ಪ್ರೊಡಕ್ಷನ್ ಡಿಸೈನ್ ಹಾಗೂ ಬಸವರಾಜ್ ಆಚಾರ್ ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಪುಟ್ಟರಾಜು ಎ ಕೆ ಆಲಗೌಡನ ಹಳ್ಳಿ.
ಇದನ್ನೂ ಓದಿ: ರೋಹಿತ್ ಶರ್ಮಾ ಸಿಕ್ಸರ್ ಸುರಿಮಳೆ… ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಂ ದಾಟಿ ಹೊರಹೋದ ಬಾಲ್
ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ಬೆಂಗಳೂರು ರಾಮನಗರ, ಚನ್ನಪಟ್ಟಣ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.