ಹೆಣ್ಣಿಗೂ ‌ʼಅಂತಹʼ ಆಸೆಗಳಿರುತ್ತೆ.. ಅದಕ್ಕೆ ಹಾಗೇ ಮಾಡ್ತಾರೆ.. ಸ್ಟಾರ್‌ ನಟಿ ಶಾಕಿಂಗ್‌ ಕಾಮೆಂಟ್ಸ್!

Ester Noronha: ನಟಿ ಎಸ್ತರ್ ಬಗ್ಗೆ ವಿಶೇಷವಾದದ್ದೇನೂ ಇಲ್ಲ ಇವರ ಸೌಂದರ್ಯಕ್ಕೆ ವಿಶೇಷವಾದ ಅಭಿಮಾನಿಗಳು ಇದ್ದಾರೆ ಎಂದರೆ ಅವರ ಕ್ರೇಜ್ ಎಂಥದ್ದು ಎಂಬುದು ಅರ್ಥವಾಗುತ್ತದೆ. 

Written by - Savita M B | Last Updated : Jun 20, 2024, 06:29 PM IST
  • ಕನ್ನಡ ಚಿತ್ರಗಳ ಮೂಲಕ ಪಾದಾರ್ಪಣೆ ಮಾಡಿದ ಎಸ್ತರ್ ನಂತರ ತೆಲುಗಿನಲ್ಲಿ ನಾಯಕಿಯಾಗಿ ನಟಿಸಿದ್ದರು.
  • ಅಲ್ಲದೇ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಈ ಬ್ಯೂಟಿ
ಹೆಣ್ಣಿಗೂ ‌ʼಅಂತಹʼ ಆಸೆಗಳಿರುತ್ತೆ.. ಅದಕ್ಕೆ ಹಾಗೇ ಮಾಡ್ತಾರೆ.. ಸ್ಟಾರ್‌ ನಟಿ ಶಾಕಿಂಗ್‌ ಕಾಮೆಂಟ್ಸ್! title=

Noel Ex Wife Ester Noronha About Casting Couch: ಕನ್ನಡ ಚಿತ್ರಗಳ ಮೂಲಕ ಪಾದಾರ್ಪಣೆ ಮಾಡಿದ ಎಸ್ತರ್ ನಂತರ ತೆಲುಗಿನಲ್ಲಿ ನಾಯಕಿಯಾಗಿ ನಟಿಸಿದ್ದರು. ಅದರಲ್ಲೂ ಭೀಮಾವರಂ ಚಿತ್ರದಲ್ಲಿ ನಟಿಸಿದ ನಂತರ ಪುರಿ ಜಗನ್ನಾಥ್ ಅವರ ಕಿರಿಯ ಸಹೋದರ ಸಾಯಿ ರಾಮ್ ಶಂಕರ್ ತೆಲುಗು ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ನಂತರ ಜೋಲಿಯಟ್ ಲವರ್ ಆಫ್ ಈಡಿಯಟ್, ನಯನಂ, ಐರಾವತಂ, 69 ಸಂಸ್ಕಾರ್ ಕಾಲೋನಿ, ಡೆವಿಲ್ ಬ್ರಿಟಿಷ್ ಸೀಕ್ರೆಟ್ ಏಜೆಂಟ್ ಚಿತ್ರಗಳಲ್ಲಿ ನಟಿಸುವ ಮೂಲಕ ವಿಶೇಷ ಮನ್ನಣೆ ಪಡೆದರು.

 ಕೆಲವು ವರ್ಷಗಳಿಂದ ಖ್ಯಾತ ಗಾಯಕ ನೋಯೆಲ್ ಸೀನ್ ಅವರನ್ನು ಪ್ರೀತಿಸುತ್ತಿದ್ದ ಈ ನಟಿ 2019 ರಲ್ಲಿ ಅವರನ್ನು ವಿವಾಹವಾದರು. ಮದುವೆಯಾದ ಕೆಲವು ತಿಂಗಳ ನಂತರ ಭಿನ್ನಾಭಿಪ್ರಾಯಗಳ ಕಾರಣದಿಂದ ವಿಚ್ಛೇದನ ನೀಡಿದ್ದರು... ಮದುವೆಯ ನಂತರ ಎಸ್ತರ್ ಕೆಲವು ಸಿನಿಮಾಗಳಲ್ಲಿ ನಟಿಸಿ ಪಡ್ಡೆ ಹುಡುಗರ ಮನಗೆದ್ದಿದ್ದರು.. ಅದರಲ್ಲೂ ರೆಕ್ಕಿ ಸಿನಿಮಾದಲ್ಲಿನ ಇವರ ನಟನೆಗೆ ಹೊಸ ಕ್ರೇಜ್‌ ಸೃಷ್ಟಿಯಾಯಿತು.. ಎಸ್ತರ್ ಕ್ಯಾರೆಕ್ಟರ್ ಆರ್ಟಿಸ್ಟ್ ಅಲ್ಲದೇ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದರಲ್ಲಿ ಬ್ಯುಸಿಯಾದರು.. ಈಗ ಎಸ್ತರ್ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿದ್ದಾರೆ.

ಇದನ್ನೂ ಓದಿ-ಆ ಭಾಗವನ್ನು ಬಾಡಿಗಾರ್ಡ್ ಅಸಭ್ಯವಾಗಿ ಮುಟ್ಟಿದ..! ಕಹಿ ಅನುಭವ ಹಂಚಿಕೊಂಡ ಸ್ಟಾರ್‌ ನಟಿ

 ಇತ್ತೀಚಿಗೆ ತಾವು ನಿರ್ದೇಶಿಸಿರುವ ಚಿತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಬಹಿರಂಗಪಡಿಸುವಾಗ ಅನೇಕ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.. "ತನಗೆ ಒಂಟಿಯಾಗಿರಲು ಇಷ್ಟವಿಲ್ಲ, ಎರಡನೇ ಮದುವೆಯಾಗುವುದಾಗಿ" ನಟಿ ಹೇಳಿದ್ದಾಳೆ. "ನಾನು ಒಬ್ಬಂಟಿಯಾಗಿ ಬದುಕಲು ಬಯಸುವುದಿಲ್ಲ. ನಾನು ಮದುವೆಯಾಗಲು ಬಯಸುತ್ತೇನೆ. ನನಗೆ ಸಂಗಾತಿ ಬೇಕು, ಸುಂದರ ಜೀವನ ಬೇಕು. ಆದರೆ ಯಾರೊಂದಿಗೆ ಬದುಕೊತ್ತೇನೆ ಎಂಬ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇಲ್ಲ. ನನ್ನ ಮೊದಲ ಮದುವೆಯಲ್ಲಿ ನಾನು ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ನನ್ನನ್ನು ಅರ್ಥಮಾಡಿಕೊಳ್ಳುವ ಯಾರಾದರೂ ನನಗೆ ಬೇಕುʼ ಎಂದಿದ್ದಾರೆ..

 ಅಲ್ಲದೇ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಈ ಬ್ಯೂಟಿ.. "ಗಂಡಸರು ಮಾತ್ರ ಕೇಳೋದಲ್ಲ ಹೆಂಗಸರು ಕೂಡ ಇಂಡಸ್ಟ್ರಿಯಲ್ಲಿ ಆಫರ್ ಕೊಡ್ತಾರೆ ಅಂತ ಎಸ್ತರ್ ಹೇಳಿದ್ದಾರೆ. ಯಾಕೆ ಹೆಣ್ಣಿಗೆ ಆಸೆಗಳು ಇರೋದಿಲ್ವಾ? ಇಂದಿನ ಸಮಾಜ ಇದನ್ನು ದೊಡ್ಡ ಅಪರಾಧವಾಗಿ ನೋಡುತ್ತಿದೆ. ಹೆಣ್ಣುಮಕ್ಕಳಿಗೂ ಜೀವನವಿದೆ. ಅವರು ಭಾವನೆಗಳನ್ನು ಹೊಂದಿದ್ದಾರೆ ಎಂದು ಎಸ್ತರ್ ಹೇಳಿದ್ದಾರೆ. 

ಇದನ್ನೂ ಓದಿ-Renukaswamy Murder Case: ನಾಳೆ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್‌ & ಗ್ಯಾಂಗ್‌ ಶಿಫ್ಟ್‌!?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News