Viral Video: ಟಿವಿ ಶೋನಲ್ಲಿ ಗಾಯಕ ಗುರು ರಾಂಧವಾಗೆ ಕಿಸ್ ಮಾಡಿದ ನೋರಾ ಫತೇಹಿ!

ಇತ್ತೀಚೆಗೆ ನಟಿ ನೋರಾ ಫತೇಹಿ ಮತ್ತು ಗಾಯಕ ಗುರು ರಾಂಧವಾ ಇಬ್ಬರು  ಗೋವಾದ ಕಡಲತೀರದಲ್ಲಿ ಕಾಣಿಸಿಕೊಂಡಿದ್ದರು.

Written by - Puttaraj K Alur | Last Updated : Jan 1, 2022, 01:39 PM IST
  • ‘ದಿ ಕಪಿಲ್ ಶರ್ಮಾ ಶೋ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಗುರು ರಾಂಧವಾ ಮತ್ತು ನೋರಾ ಫತೇಹಿ
  • ಶೋನಲ್ಲಿಯೇ ಪಂಜಾಬಿ ಗಾಯಕನಿಗೆ ಕಿಸ್ ಮಾಡಿದ ಬಾಲಿವುಡ್​ನ ಬಿಂಕದ ಸಿಂಗಾರಿ ನೋರಾ
  • ಇತ್ತೀಚೆಗೆ ನಟಿ ನೋರಾ ಮತ್ತು ಗುರು ರಾಂಧವಾ ಗೋವಾದ ಕಡಲತೀರದಲ್ಲಿ ಕಾಣಿಸಿಕೊಂಡಿದ್ದರು
Viral Video: ಟಿವಿ ಶೋನಲ್ಲಿ ಗಾಯಕ ಗುರು ರಾಂಧವಾಗೆ ಕಿಸ್ ಮಾಡಿದ ನೋರಾ ಫತೇಹಿ! title=
ಗುರು ರಾಂಧವಾ  ಮತ್ತು ನೋರಾ ಫತೇಹಿ

ನವದೆಹಲಿ: ‘ದಿ ಕಪಿಲ್ ಶರ್ಮಾ ಶೋ’ ಕಾರ್ಯಕ್ರಮದ ಹೊಸ ಪ್ರೋಮೋದಲ್ಲಿ ಪಂಜಾಬಿ ಗಾಯಕ ಗುರು ರಾಂಧವಾ(Guru Randhawa) ಮತ್ತು ಬಾಲಿವುಡ್​ನ ಬಿಂಕದ ಸಿಂಗಾರಿ, ಮೈ ಡೊಂಕಿನ ವಯ್ಯಾರಿ ನೋರಾ ಫತೇಹಿ(Nora Fatehi)  ಕಾಣಿಸಿಕೊಂಡಿದ್ದಾರೆ. ಈ ವಾರಾಂತ್ಯದಲ್ಲಿ ಅವರು ತಮ್ಮ ಹೊಸ ಹಾಡಿನ ವಿಡಿಯೋ ‘ಡ್ಯಾನ್ಸ್ ಮೇರಿ ರಾಣಿ’ ಪ್ರಚಾರಕ್ಕಾಗಿ ಶೋನಲ್ಲಿ ಪಾಲ್ಗೊಂಡಿದ್ದರು. ಇತನ್ಮಧ್ಯೆ ಬಿ ಟೌನ್‌ನಲ್ಲಿ ನೋರಾ ಮತ್ತು ಗುರು ರಾಂಧವಾ ಜೋಡಿಯ ಸಂಬಂಧದ ಬಗ್ಗೆ ವದಂತಿಗಳು ದಟ್ಟವಾಗುತ್ತಿವೆ. ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎಂಬ ಗಾಳಿಸುದ್ದಿಗಳು ಹರದಾಡುತ್ತಿವೆ.

ತಮಾಷೆಯ ಪ್ರಶ್ನೆ ಕೇಳಿದ ಕಪಿಲ್ ಶರ್ಮಾ

ಶೋನಲ್ಲಿ ಕಪಿಲ್ ಶರ್ಮಾ(The Kapil Sharma Show) ಅವರು ನೋರಾ ಬಗ್ಗೆ ಮಾತನಾಡುತ್ತಾ ಗುರುವನ್ನು ಲೇವಡಿ ಮಾಡಿದರು. ‘ಕಳೆದ ಆಲ್ಬಂ ಸಾಂಗ್ ನಲ್ಲಿ ನೀವು ನೋರಾಳನ್ನು ರೋಬೋಟ್ ಮಾಡಿದ್ದೀರಿ, ಈ ವಿಡಿಯೋ ಸಾಂಗ್ ನಲ್ಲಿ ಅವರನ್ನು ನೀವು ಮತ್ಸ್ಯಕನ್ಯೆ ಮಾಡಿದ್ದೀರಿ. ನಿಜ ಹೇಳಿ, ನಿಮ್ಮ ಮನಸ್ಸಿನಲ್ಲಿ ಆಕೆಯನ್ನು ಏನು ಮಾಡಲು ಬಯಸುತ್ತೀರಿ? ಅಂತಾ ತಮಾಷೆ ಪ್ರಶ್ನೆ ಕೇಳಿದರು. ಇದಕ್ಕೆ ಗುರು ನಗುತ್ತಾ ಮುಂದಿನ ಬಾರಿ ಕಾರ್ಯಕ್ರಮಕ್ಕೆ ಬಂದಾಗ ಈ ಪ್ರಶ್ನೆಗೆ ಉತ್ತರಿಸುತ್ತೇನೆ ಅಂತಾ ಹೇಳಿದರು.

ಇದನ್ನೂ ಓದಿ: Sai Pallavi: ಬುರ್ಖಾ ಧರಿಸಿ, ಥಿಯೇಟರ್‌ನಲ್ಲಿ ತಮ್ಮ ಸಿನಿಮಾ ವೀಕ್ಷಿಸಿದ ನಟಿ ಸಾಯಿ ಪಲ್ಲವಿ

ನನ್ನೊಂದಿಗೆ ಇಲ್ಲದಿದ್ದರೆ ನೃತ್ಯ ಮಾಡುವುದಿಲ್ಲ!

ಗುರು ಅವರ ಮೊದಲ ಮ್ಯೂಸಿಕ್ ವಿಡಿಯೋ ‘ನಾಚ್ ಮೇರಿ ರಾಣಿ’(Naach Meri Rani) ನಂತರ ನೋರಾ ಅವರ ನೃತ್ಯ ಸುಧಾರಿಸಿದೆಯೇ ಎಂದು ಕಪಿಲ್ ಕೇಳಿದರು. ಇದಕ್ಕುತ್ತರಿಸಿದ ನೋರಾ, ‘ವಾಸ್ತವವಾಗಿ ಗುರು ನನ್ನೊಂದಿಗೆ ಇಲ್ಲದಿದ್ದರೆ ನೃತ್ಯ ಮಾಡುವುದಿಲ್ಲ’ವೆಂದು ನಾನು ಭಾವಿಸುತ್ತೇನೆ. ಅವರ ಇನ್ನುಳಿದ ಮ್ಯೂಸಿಕ್ ವಿಡಿಯೋಗಳಲ್ಲಿ ಗುರು ಕೇವಲ ಅಂಗೈಗಳನ್ನು ಒಟ್ಟಿಗೆ ಉಜ್ಜುವ ಸ್ಟೈಲ್ ಮಾಡುತ್ತಾರೆ. ಅದು ಬಿಟ್ಟರೆ ಅವರು ಡ್ಯಾನ್ಸ್ ಮಾಡುವುದಿಲ್ಲ. ಆದರೆ ನನ್ನೊಂದಿಗೆ ಇದ್ದಾಗ ಗುರು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ’ ಅಂತಾ ನೋರಾ ತಮಾಷೆಯಾಗಿ ಹೇಳಿದರು.

ಸಾರ್ವಜನಿಕವಾಗಿ ಕಿಸ್ ಮಾಡಿದ ನೋರಾ..!

ನೋರಾಳ ಉತ್ತರ ಕೇಳಿ ಗುರು ರಾಂಧವಾ ಮತ್ತು ಕಪಿಲ್ ಶರ್ಮಾ(Kapil Sharma) ಜೋರಾಗಿ ನಗುತ್ತಿದ್ದರು. ಈ ವೇಳೆ ನೋರಾ ಗುರುಗೆ ಸಾರ್ವಜನಿಕವಾಗಿವಾಗಿ ಶೋನಲ್ಲಿಯೇ ಕಿಸ್ ಮಾಡಿದರು. ಹುಡುಗನನ್ನು ನೋಯಿಸಿದ್ದಕ್ಕಾಗಿ ಗುರುವನ್ನು ಚುಂಬಿಸಿದ್ದೀರಾ ಎಂದು ಕಪಿಲ್ ಕೇಳಿದರು. ‘ಖಂಡಿತವಾಗಿ’ ಆತನ ಮನಸ್ಸಿಗೆ ನೋಯಿಸಬಾರದು ಎಂದು ನಾನು ಕಿಸ್ ಮಾಡಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ.. ಸೂಪರ್ ಬೋಲ್ಡ್ ಲುಕ್ ಕಂಡು ಬೆರಗಾದ ಫ್ಯಾನ್ಸ್!

ಇತ್ತೀಚೆಗೆ ನಟಿ ನೋರಾ ಫತೇಹಿ ಮತ್ತು ಗಾಯಕ ಗುರು ರಾಂಧವಾ(Nora Fatehi & Guru Randhawa Dating)ಇಬ್ಬರು ಗೋವಾದ ಕಡಲತೀರದಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರೂ ಒಟ್ಟಿಗೆ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಬಳಿಕ ಇವರ ಅಭಿಮಾನಿಗಳು ಇಬ್ಬರ ನಡುವೆ ಏನಾದರೂ ನೆಡೆಯುತ್ತಿದೆಯಾ ಅಥವಾ ಇಲ್ಲವೇ ಎಂದು ಊಹಿಸಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣ(Social Media) ಗಳಲ್ಲಿ ಇವರಿಬ್ಬರ ಡೇಟಿಂಗ್ ಬಗ್ಗೆ ನೆಟಿಜನ್ ಗಳು ಚರ್ಚಿಸುತ್ತಿದ್ದಾರೆ. ಆದರೆ ಇಬ್ಬರು ಜನಪ್ರಿಯ ಸೆಲೆಬ್ರಿಟಿಗಳು ಇದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News