close

News WrapGet Handpicked Stories from our editors directly to your mailbox

ಪ್ರಿಯಾಂಕಾ ಚೋಪ್ರಾ ಪತಿಯ ಬಳಿ ಓಡಿ ಹೋಗಿ ಫೋಟೋ ತೆಗೆಸಿಕೊಂಡ ಪಾಕ್ ನಟಿ..!

ಪಾಕಿಸ್ತಾನದ ನಟಿ ಮೆಹ್ವೀಶ್ ಹಯಾತ್ ಯುಎಸ್ ಓಪನ್‌ ಟೂರ್ನಿ ನೋಡಲು ಹೋಗಿದ್ದ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೊನಾಸ್ ಹತ್ತಿರ ಓಡಿಹೋಗಿ ಫೋಟೋ ತೆಗೆಸಿಕೊಂಡಿದ್ದಾರೆ.

Updated: Sep 9, 2019 , 09:12 PM IST
 ಪ್ರಿಯಾಂಕಾ ಚೋಪ್ರಾ ಪತಿಯ ಬಳಿ ಓಡಿ ಹೋಗಿ ಫೋಟೋ ತೆಗೆಸಿಕೊಂಡ ಪಾಕ್ ನಟಿ..!
Photo courtesy: Twitter

ನವದೆಹಲಿ: ಪಾಕಿಸ್ತಾನದ ನಟಿ ಮೆಹ್ವೀಶ್ ಹಯಾತ್ ಯುಎಸ್ ಓಪನ್‌ ಟೂರ್ನಿ ನೋಡಲು ಹೋಗಿದ್ದ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೊನಾಸ್ ಹತ್ತಿರ ಓಡಿಹೋಗಿ ಫೋಟೋ ತೆಗೆಸಿಕೊಂಡಿದ್ದಾರೆ.

ಈಗ ಅವರು ಈ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಈ ರೀತಿ ಬರೆದುಕೊಂಡಿದ್ದಾರೆ. ' ನಾನು ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಯುಎಸ್ ಸೆಮಿಫೈನಲ್ ನಲ್ಲಿ ಯಾರ ಹತ್ತಿರ ಓಡಿ ಹೋದೆ ಗೊತ್ತೇ ! ಒಂದು ವಿಷಯದಲ್ಲಿ ನಾವಿಬ್ಬರು ಒಪ್ಪಬಹುದಾದ ಆಟಗಾರ ಎಂದರೆ ರಫೇಲ್ ನಡಾಲ್ ' ಎಂದು ಟ್ವೀಟ್ ಮಾಡಿದ್ದಾರೆ.

ಮೆಹ್ವಿಶ್ ಪ್ರಸ್ತುತ ತನ್ನ ಕುಟುಂಬದೊಂದಿಗೆ ಅಮೇರಿಕಾದಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಬಾಲಿವುಡ್ ವಿರುದ್ಧ ದ್ವೇಷದ ಟ್ವೀಟ್ ಮಾಡಿದ್ದರಿಂದಾಗಿ ಈ ನಟಿ ಸುದ್ದಿಯಲ್ಲಿದ್ದರು. ತನ್ನ ದೇಶವನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಅವರು ಬಾಲಿವುಡ್ ಮತ್ತು ಹಾಲಿವುಡ್ ವಿರುದ್ಧ ವಾಗ್ದಾಳಿ ನಡೆಸಿದ್ದರು.