Poonam Pandey ಛೀಮಾರಿ ಹಾಕುತ್ತಿರುವ ನೆಟ್ಟಿಗರು, 'ಛೀ... ಅಗ್ಗದ ಪಬ್ಲಿಸಿಟಿ ಸ್ಟಂಟ್' ಎಂದ ಜನ

Poonam Pandey Alive: ಛೀ...! ಡರ್ಟಿ ಆ್ಯಕ್ಟ್, ಚೀಪ್ ಪಬ್ಲಿಸಿಟಿ ಸ್ಟಂಟ್... ಪೂನಂ ಪಾಂಡೆ ಬದುಕಿರುವ ಸುದ್ದಿಗೆ ನೆಟ್ಟಿಗರಿಂದ ಬರುತ್ತಿರುವ ಪ್ರತಿಕ್ರಿಯೆ ಇಡುಎ. ಆಕೆಯ ಹಠಾತ್ ನಿಧನದ ಸುದ್ದಿ ಪಸರಿಸಿದ ನಂತರ, ಸ್ವತಃ ಪೂನಂ ಪಾಂಡೆ ಮುಂದೆ ಬಂದು ಈ ಪ್ರಹಸನವನ್ನು ಏಕೆ ಸೃಷ್ಟಿಸಿದೆ ಎಂಬುದರ ಸ್ಪಷ್ಟೀಕರಣ ನೀಡಿದ್ದಾಳೆ. (Entertainment News In Kannada)  

Written by - Nitin Tabib | Last Updated : Feb 3, 2024, 04:04 PM IST
  • ಇತ್ತೀಚೆಗಷ್ಟೇ ಪೂನಂ ಪಾಂಡೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
  • ಪೂನಂ ಪಾಂಡೆಯ ಇತ್ತೀಚಿನ ವಿಡಿಯೋ ಮತ್ತು ಪೋಸ್ಟ್ ನೋಡಿ ನೆಟಿಜನ್‌ಗಳು ಹುಚ್ಚೆದ್ದು ಕುಣಿದಿದ್ದಾರೆ. ಜನರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
  • ಇದಕ್ಕೆ ಪ್ರತಿಕ್ರಿಯಿಸಿದ ಓರ್ವ ಬಳಕೆದಾರರು - 'ನಾಚಿಕೆಗೇಡು, ಅಗ್ಗದ ಪ್ರಚಾರಕ್ಕಾಗಿ ಸಾವನ್ನು ಬಳಸುತ್ತಿರುವಿರಿ. ನಿಮ್ಮನ್ನು ಬಂಧಿಸಬೇಕು’ ಎಂದು ಹೇಳಿದ್ದಾರೆ.
Poonam Pandey ಛೀಮಾರಿ ಹಾಕುತ್ತಿರುವ ನೆಟ್ಟಿಗರು, 'ಛೀ... ಅಗ್ಗದ ಪಬ್ಲಿಸಿಟಿ ಸ್ಟಂಟ್' ಎಂದ ಜನ title=

Poonam Pandey Not Dead: ಪೂನಂ ಪಾಂಡೆಯ ಬಗ್ಗೆ ಕ್ರೇಜ್ ಹೊಂದಿರುವ ಜನರು ಇದೀಗ ಟೆನ್ಷನ್ ಫ್ರೀ ಆಗಿರಬೇಕು. ಏಕೆಂದರೆ ನಟಿಗೆ ಏನೂ ಆಗಿಲ್ಲ. 24 ಗಂಟೆಗಳ ನಂತರ, ಸ್ವತಃ ಪೂನಂ ಪಾಂಡೆ ಮುಂದೆ ಬಂದು ತಾನು ಜೀವಂತವಾಗಿದ್ದೇನೆ ಮತ್ತು ಗರ್ಭಕಂಠದ ಕ್ಯಾನ್ಸರ್ ಲಸಿಕೆಯನ್ನು ಉತ್ತೇಜಿಸಲು ಇಷ್ಟೆಲ್ಲ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಪೂನಂ ಪಾಂಡೆ ಬದುಕಿರುವ ಸುದ್ದಿ ಹೊರಬಿದ್ದ ಕೂಡಲೇ ಜನ ನಟಿಗೆ ಛೀಮಾರಿ ಹಾಕುತ್ತಿದ್ದಾರೆ. ಕೆಲವರು ಚೀಪ್ ಪಬ್ಲಿಸಿಟಿ ಸ್ಟಂಟ್ ಮಾಡಿದ್ದಕ್ಕಾಗಿ ನಟಿಯನ್ನು ಛೀಮಾರಿ ಹಾಕುತ್ತಿದ್ದರೆ, ಕೆಲವರು ಆಕೆಯ ನಡೆಗಳನ್ನು ಚೀಪ್ ಎಂದು ಕರೆಯುತ್ತಿದ್ದಾರೆ. (Entertainment News In Kannada)

ಇದನ್ನೂ ಓದಿ-Viral Video: ತನ್ನ ಮಕ್ಕಳ ಬೇಟೆಗಾಗಿ ಬಂದ ಚಿರತೆಯ ಬೆವರಿಳಿಸಿದ ಮುಳ್ಳು ಹಂದಿಗಳು

ಪೂನಂ ಪಾಂಡೆ ಬದುಕಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ
ಇತ್ತೀಚೆಗಷ್ಟೇ ಪೂನಂ ಪಾಂಡೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಪೂನಂ ಪಾಂಡೆಯ ಇತ್ತೀಚಿನ ವಿಡಿಯೋ ಮತ್ತು ಪೋಸ್ಟ್ ನೋಡಿ ನೆಟಿಜನ್‌ಗಳು ಹುಚ್ಚೆದ್ದು ಕುಣಿದಿದ್ದಾರೆ. ಜನರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಓರ್ವ ಬಳಕೆದಾರರು - 'ನಾಚಿಕೆಗೇಡು, ಅಗ್ಗದ ಪ್ರಚಾರಕ್ಕಾಗಿ ಸಾವನ್ನು ಬಳಸುತ್ತಿರುವಿರಿ. ನಿಮ್ಮನ್ನು ಬಂಧಿಸಬೇಕು’ ಎಂದು ಹೇಳಿದ್ದಾರೆ. ಇನ್ನೊಬ್ಬರು - ' ಗೇಟ್ ಅ ಲೈಫ್... ಈ ನಾಟಕವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವ ಮೊದಲು, ತುಂಬಾ ಕೆಟ್ಟ ತಮಾಷೆಯಾಗಿತ್ತು' ಎಂದಿದ್ದಾರೆ. ಈ ಕುರಿತು ಬರೆದುಕೊಂಡ ಮೂರನೇ ಬಳಕೆದಾರರು, 'ನಿನಗೆ ಹುಚ್ಚು ಹಿಡಿದಿದೆಯಾ? ಈ ರೀತಿ ಯಾರು ಪಬ್ಲಿಸಿಟಿ ಸ್ಟಂಟ್ ಮಾಡ್ತಾರೆ?' ಎಂದಿದ್ದಾರೆ. ಕೆಲವು ನೆಟ್ಟಿಗರು  ಚಿತ್ರದ ಮೀಮ್‌ಗಳನ್ನು ಸಹ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ-Viral Video: ಹೆಚ್ಚು ಗಾಳಿ ಬೇಕೆಂದು ಬಸ್ ಕಿಟಕಿಯಿಂದ ತಲೆ ಹೊರಕ್ಕೆ ಚಾಚಿದ ಪ್ರಯಾಣಿಕ, ನಂತರ ಆಗಿದ್ದೇನು ನೀವೇ ನೋಡಿ!

ಪೂನಂ ಪಾಂಡೆ ಸಾವಿನ ಸುದ್ದಿ ಸುಳ್ಳು!
ಪೂನಂ ಪಾಂಡೆ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ , ಅದರಲ್ಲಿ ಆಕೆ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಗ್ಗೆ ಮಾತನಾಡುತ್ತಿದ್ದಾಳೆ. ಅದರ ಶೀರ್ಷಿಕೆಯಲ್ಲಿ ಬರೆದುಕೊಂಡ ನಟಿ,  'ನಾನು ನಿಮ್ಮೆಲ್ಲರೊಂದಿಗೆ ಪ್ರಮುಖವಾದದ್ದನ್ನು ಹಂಚಿಕೊಳ್ಳಲು ಬಯಸುತ್ತೇನೆ, ನಾನು ಇಲ್ಲಿದ್ದೇನೆ, ನಾನು ಬದುಕಿದ್ದೇನೆ. ನನಗೇನೂ ಆಗಿಲ್ಲ. ಹಾಗೆಯೇ ನನಗೆ ಗರ್ಭಕಂಠದ ಕ್ಯಾನ್ಸರ್ ಕೂಡ ಇಲ್ಲ. ಆದರೆ ದುಃಖದ ಸಂಗತಿಯೆಂದರೆ, ಅದು ಸಾವಿರಾರು ಮಹಿಳೆಯರ ಪ್ರಾಣವನ್ನು ತೆಗೆದುಕೊಂಡಿದೆ ಮತ್ತು ಅವರಿಗೆ ಈ ರೋಗವನ್ನು ಎದುರಿಸುವ ಬಗ್ಗೆ ಏನೂ ತಿಳಿದಿರಲಿಲ್ಲ. ಆದ್ದರಿಂದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮುಖ್ಯವಾಗಿದೆ. HPV ಲಸಿಕೆ ಮತ್ತು ಪರೀಕ್ಷೆಯನ್ನು ಪಡೆಯುವ ಮೂಲಕ ಇದನ್ನು ತಪ್ಪಿಸಬಹುದು. ಜಾಗೃತಿಯಿಂದ ಪರಸ್ಪರ ಸಬಲರಾಗೋಣ. ಈ ರೋಗವನ್ನು ಒಟ್ಟಿಗೆ ಎದುರಿಸೋಣ' ಎಂದು ಬರೆದಿದ್ದಾಳೆ. 

ಇಲ್ಲಿದೆ ಆ ವಿಡಿಯೋ 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News