ನವದೆಹಲಿ: ಭೂಮಿಯ ಮೇಲೆ ಕೆಲವು ಪ್ರಾಣಿಗಳು ಅತ್ಯಂತ ಅಪಾಯಕಾರಿ ಪ್ರಾಣಿಗಳೆಂದು ಪರಿಗಣಿಸಲ್ಪಟ್ಟಿವೆ, ಅವುಗಳ ಹಿಡಿತದಲ್ಲಿ ಸಿಲುಕಿಕೊಳ್ಳುವುದು ಎಂದರೆ ಸಾವನ್ನು ಎದುರಿಸುವುದು ಎಂದರ್ಥ. ಅಂತಹ ಪ್ರಾಣಿಗಳಲ್ಲಿ ಸಿಂಹ, ಹುಲಿ ಮತ್ತು ಚಿರತೆ ಸೇರಿವೆ. ವಾಸ್ತವದಲ್ಲಿ, ಈ ಪ್ರಾಣಿಗಳು ದಟ್ಟವಾದ ಕಾಡುಗಳಲ್ಲಿ ಮಾತ್ರ ವಾಸಿಸುತ್ತವೆ ಮತ್ತು ಪ್ರಾಣಿಸಂಗ್ರಹಾಲಯಗಳಲ್ಲಿ ಪಂಜರದಲ್ಲಿ ನೀವು ಅವುಗಳನ್ನು ನೋಡಬಹುದು. ಸಾಮಾನ್ಯವಾಗಿ, ಅವು ಮನುಷ್ಯರಿಗೆ ಎದುರಾಗುವುದು ಅಪರೂಪ, ಆದರೆ ಮನುಷ್ಯರು ಹೊರತುಪಡಿಸಿದರೆ ಇತರ ಪ್ರಾಣಿಗಳು ಅವುಗಳಿಗೆ ಭಯಪಡುತ್ತವೆ, ಆದರೆ ತಮ್ಮದೇ ಆದ ಗುಂಪು ಕಟ್ಟಿಕೊಂಡು ವಾಸಿಸುಗ ಕೆಲ ಪ್ರಾಣಿಗಳಿವೆ. ಮುಳ್ಳುಹಂದಿ ಕೂಡ ಅಂತಹ ಪ್ರಾಣಿಗಳಲ್ಲಿ ಒಂದಾಗಿದೆ, ಬೇಟೆಯಾಡುವಾಗ ಈ ಅಪಾಯಕಾರಿ ಪ್ರಾಣಿಗಳು ಸಹ ಎದುರಾಳಿಯ ಬೆವರಿಳಿಸುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.(Viral News In Kannada)
ಈ ವೀಡಿಯೊದಲ್ಲಿ, ಚಿರತೆಯೊಂದು ಮುಳ್ಳುಹಂದಿಯ ಮಕ್ಕಳನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ, ಆದರೆ ಹೆಣ್ಣು ಮುಳ್ಳುಹಂದಿ ಅವುಗಳನ್ನು ರಕ್ಷಿಸುತ್ತದೆ. ಎರಡು ಮುಳ್ಳುಹಂದಿಗಳು ತಮ್ಮ ಮಕ್ಕಳೊಂದಿಗೆ ರಸ್ತೆ ದಾಟಲು ಯತ್ನಿಸುತ್ತಿರುವಾಗ ಚಿರತೆ ಅಲ್ಲಿಗೆ ಬಂದು ಅವುಗಳ ಮಕ್ಕಳನ್ನು ಬೇಟೆಯಾಡಲು ಪ್ರಯತ್ನಿಸುತ್ತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ರಕ್ಷಿಸಲು ಮುಳ್ಳುಹಂದಿ ತನ್ನ ಮೈಮೇಲಿನ ಮುಳ್ಳುಗಳಿಂದ ಚಿರತೆಯ ಮೇಲೆ ದಾಳಿ ಮಾಡಿದರೂ ಚಿರತೆ ಸೋಲು ಒಪ್ಪಿಕೊಳ್ಳುತ್ತಿಲ್ಲ. ಅದು ಮುಳ್ಳುಹಂದಿಗಳನ್ನು ಹಿಡಿಯಲು ಪ್ರಯತ್ನಿಸುತ್ತಲೇ ಇದೆ, ಆದರೂ ಕೂಡ ಅದಕ್ಕೆ ಮಕ್ಕಳನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ.
ಈ ವೀಡಿಯೊವನ್ನು @gunsnrosesgirl3 ಹೆಸರಿನ ID ಯೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ನಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು ಒಂದು ನಿಮಿಷದ ಈ ವೀಡಿಯೋವನ್ನು ಇದುವರೆಗೆ ಸಾವಿರಾರು ಬಾರಿ ವೀಕ್ಷಿಸಲಾಗಿದ್ದು, ನೂರಾರು ಮಂದಿ ಕೂಡ ಈ ವಿಡಿಯೋವನ್ನು ಲೈಕ್ ಮಾಡಿ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ-Amitabh Bachchan ಅವರ ಈ ಚಿತ್ರ ಭಾರಿ ವೈರಲ್ ಆಗುತ್ತಿದೆ, ನಿಮ್ಮ ಪ್ರತಿಕ್ರಿಯೆ ಏನು?
ಈ ಕುರಿತು ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರ 'ಪೋಷಕರು ತಮ್ಮ ಮಗುವನ್ನು ಉಳಿಸಲು ತಮ್ಮ ಪ್ರಾಣವನ್ನು ಸಹ ತ್ಯಾಗ ಮಾಡುತ್ತಾರೆ. ಇದು ಪ್ರಕೃತಿಯ ಭಾವನೆಗಳಲ್ಲಿ ಒಂದಾಗಿದೆ' ಎಂದಿದ್ದಾರೆ. ಮಮ್ತ್ತೋರ್ವ ಬಳಕೆದಾರರು ಬರೆದಿದ್ದಾರೆ, 'ಅದು ಮನುಷ್ಯನಾಗಿರಲಿ ಅಥವಾ ಪ್ರಾಣಿಯಾಗಿರಲಿ, ತಾಯಿ ನಿಜವಾಗಿಯೂ ತಾಯಿ, ತನ್ನ ಮಕ್ಕಳನ್ನು ಉಳಿಸಲು ಏನು ಬೇಕಾದರೂ ಮಾಡುತ್ತದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ-Rahat Fateh Ali Khan ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ಚಿನ್ಮಯಿ ಶ್ರೀಪದಾ ಹೇಳಿದ್ದೇನು ನೀವೇ ಓದಿ
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ-
Porcupine parents protect babies from leopard
pic.twitter.com/nEqqUlj7sc— Science girl (@gunsnrosesgirl3) January 28, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ