ಬೆಂಗಳೂರು: ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ಇಂದು 51ನೇ ಹುಟ್ಟು ಹಬ್ಬದ ಸಂಭ್ರಮ. ತೆಲುಗು ಅಷ್ಟೇ ಅಲ್ಲದೆ ದೇಶಾದ್ಯಂತ ಅಪಾರ ಫ್ಯಾನ್ಸ್ ಪಾಲೋಯಿಂಗ್ ಹೊಂದಿರುವ ಪವರ್ ಸ್ಟಾರ್ ಬರ್ತ್ಡೇ ಅನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ, ಪವನ್ ಕಲ್ಯಾಣ್ ಹುಟ್ಟು ಹಬ್ಬಕ್ಕೆ ʼಹರಿ ಹರ ವೀರಮಲ್ಲುʼ ಚಿತ್ರತಂಡ ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಬಿಗ್ ಗಿಫ್ಟ್ ನೀಡಿದೆ. ಟೀಸರ್ನಲ್ಲಿ ಪವನ್ ಕಲ್ಯಾಣ್ ಮಾಸ್ ಎಂಟ್ರಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಒಂದು ನಿಮಿಷದ ಟೀಸರ್ನಲ್ಲಿ ತೊಡೆ ತಟ್ಟಿ ಅಖಾಡಕ್ಕೆ ಇಳಿಯುವ ಪವನ್ ಕಲ್ಯಾಣ್ ಭರ್ಜರಿ ಸ್ಟಂಟ್ಸ್ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಎಂ.ಎಂ. ಕೀರವಾಣಿ ಹಿನ್ನೆಲೆ ಸಂಗೀತ ಟೀಸರ್ ಅನ್ನು ನೆಕ್ಸ್ಟ್ ಲೆವೆಲ್ಗೆ ತೆಗೆದುಕೊಂಡು ಹೋಗಿದ್ದು, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ.
ಇದನ್ನೂ ಓದಿ: Kiccha Sudeep :ಅಭಿನಯ ಚಕ್ರವರ್ತಿಗೆ ʼಪುಣ್ಯಕೋಟಿ ಯೋಜನೆʼಯ ರಾಯಭಾರಿ ಪಟ್ಟ
ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಜಾಗರಲಮುಡಿ ರಾಧಾಕೃಷ್ಣ ಡೈರೆಕ್ಷನ್ನಲ್ಲಿ ಮೂಡಿ ಬಂದಿರುವ ‘ಹರಿ ಹರ ವೀರಮಲ್ಲು’ ಚಿತ್ರವನ್ನು ಎ ದಯಾಕರ್ ರಾವ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್
ವರ್ಕ್ ಭರದಿಂದ ಸಾಗಿದ್ದು, ರಿಲೀಸ್ ಡೇಟ್ಗಾಗಿ ಫ್ಯಾನ್ಸ್ ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ.
ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಅವರು ಎರಡನ್ನೂ ಅವರು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಇನ್ನು, ಇದೆ ವರ್ಷ ತೆರೆಕಂಡ ವಕೀಲ್ ಸಾಬ್ ಹಾಗೂ ಭೀಮ್ಲಾ ನಾಯಕ್ ಪವನ್ ಕಲ್ಯಾಣ್ ಅವರಿಗೆ ಸಕ್ಸಸ್ ತಂದುಕೊಟ್ಟಿತ್ತು.
ಇದನ್ನೂ ಓದಿ: Kiccha Sudeep: ಅಭಿನಯ ಚಕ್ರವರ್ತಿಗೆ ಹುಟ್ಟುಹಬ್ಬದ ಸಂಭ್ರಮ: ಕಿಚ್ಚನ ಸಿನಿಜರ್ನಿಯೇ ವಿಭಿನ್ನ-ಸ್ಪೂರ್ತಿದಾಯಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.