Kiccha Sudeep: ಅಭಿನಯ ಚಕ್ರವರ್ತಿಗೆ ಹುಟ್ಟುಹಬ್ಬದ ಸಂಭ್ರಮ: ಕಿಚ್ಚನ ಸಿನಿಜರ್ನಿಯೇ ವಿಭಿನ್ನ-ಸ್ಪೂರ್ತಿದಾಯಕ

ಕನ್ನಡ ಸಿನಿರಂಗಕ್ಕೆ ಮೊದಲ ಬಾರಿಗೆ ಕಾಲಿಟ್ಟ ಕಿಚ್ಚನನ್ನು ಕೆಲವರು ಐರನ್ ಲೆಗ್ ಎಂದು ಕರೆದಿದ್ದರು. ಅಭಿನಯಿಸಿದ ಎರಡು ಸಿನಿಮಾಗಳು ಸಹ ರಿಲೀಸ್ ಆಗಲೇ ಇಲ್ಲ. ಈ ಸಂದರ್ಭದಲ್ಲಿ ಅನೇಕರು ಕಿಚ್ಚನನ್ನು ಹೀಯಾಳಿಸಿದ್ದೂ ಉಂಟು.

Written by - Bhavishya Shetty | Last Updated : Sep 2, 2022, 09:26 AM IST
    • ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್ ಡೇ
    • 49 ನೇ ವರ್ಷಕ್ಕೆ ಕಾಲಿಟ್ಟ ಕರುನಾಡ ಮಾಣಿಕ್ಯ
    • ತಡರಾತ್ರಿಯೇ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ
Kiccha Sudeep: ಅಭಿನಯ ಚಕ್ರವರ್ತಿಗೆ ಹುಟ್ಟುಹಬ್ಬದ ಸಂಭ್ರಮ: ಕಿಚ್ಚನ ಸಿನಿಜರ್ನಿಯೇ ವಿಭಿನ್ನ-ಸ್ಪೂರ್ತಿದಾಯಕ title=
Kiccha Sudeep

ಕರುನಾಡ ಅಭಿನಯ ಚಕ್ರವರ್ತಿ ಎಂದರೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಕರ್ನಾಟಕದ ಸಿನಿರಂಗದಲ್ಲಿ ಬಾದ್ ಶಾ ಎಂದೇ ಖ್ಯಾತಿ ಪಡೆದಿರುವ ಕಂಚಿನ ಕಂಠದ ನಟ ಕಿಚ್ಚ ಸುದೀಪ್, ಚಿತ್ರರಂಗ ಮಾತ್ರವಲ್ಲದೆ, ಅಭಿಮಾನಿಗಳ ಪಾಲಿಗೆ ದೇವರಂತೆ ಕಂಡವರು. ಇಂದು ನಮ್ಮೆಲ್ಲರ ನೆಚ್ಚಿನ ಕಿಚ್ಚನಿಗೆ 49ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕಿಚ್ಚ ಸಿನಿರಂಗದಲ್ಲಿ ಅದೆಷ್ಟೋ ಕಷ್ಟದ ಸಾಧನೆಗಳನ್ನು ದಾಟಿ ಬಂದವರು. ಇವರ ಈ ಹೆಜ್ಜೆಗುರುತು ಅದೆಷ್ಟೋ ಜನರಿಗೆ ಸ್ಪೂರ್ತಿ ಎನ್ನಬಹುದು. 

ಇದನ್ನೂ ಓದಿ: Kichcha Sudeep : ಕಿಚ್ಚ ಸುದೀಪ್ ಹೆಸರಲ್ಲಿ 'ವಿಶೇಷ ಅಂಚೆ ಲಕೋಟೆ' ಹೊರ ತರಲಿದೆ ಅಂಚೆ ಇಲಾಖೆ

ಕನ್ನಡ ಚಿತ್ರರಂಗದ ಪರಿಪೂರ್ಣ ನಟ ಸುದೀಪ್ ಎಂದರೆ ತಪ್ಪಾಗಲಾರದು. ಇಂತಹ ನಟನಿಗೆ ಸಿನಿರಂಗದ ಗಣ್ಯರು, ಆಪ್ತರು, ಅಭಿಮಾನಿಗಳು ಸೇರಿದಂತೆ ಅನೇಕರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು ಕಳೆದ ಎರಡು ವರ್ಷಗಳಿಂದ ಕಿಚ್ಚ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಆಚರಣೆ ಮಾಡುವುದು ಬೇಡ ಎಂದು ಸ್ವತಃ ಸುದೀಪ್ ತಿಳಿಸಿದ್ದರು. ಆದರೆ ಈ ಬಾರಿ ಮನೆಯ ಬಳಿಯೇ ಅಭಿಮಾನಿಗಳು ಜಮಾಯಿಸಿದ್ದು, ತಡರಾತ್ರಿಯೇ ನೆಚ್ಚಿನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

ಕನ್ನಡ ಸಿನಿರಂಗಕ್ಕೆ ಮೊದಲ ಬಾರಿಗೆ ಕಾಲಿಟ್ಟ ಕಿಚ್ಚನನ್ನು ಕೆಲವರು ಐರನ್ ಲೆಗ್ ಎಂದು ಕರೆದಿದ್ದರು. ಅಭಿನಯಿಸಿದ ಎರಡು ಸಿನಿಮಾಗಳು ಸಹ ರಿಲೀಸ್ ಆಗಲೇ ಇಲ್ಲ. ಈ ಸಂದರ್ಭದಲ್ಲಿ ಅನೇಕರು ಕಿಚ್ಚನನ್ನು ಹೀಯಾಳಿಸಿದ್ದೂ ಉಂಟು. ಇವೆಲ್ಲದಕ್ಕೂ ಧೃತಿಗೆಡದ ಮಾಣಿಕ್ಯ, ಸ್ಪರ್ಶ ಸಿನಿಮಾದ ಮೂಲಕ ಸಿನಿರಂಗಕ್ಕೆ ಆಗಮಿಸಿ ತನ್ನ ಛಾಪನ್ನು ಮೂಡಿಸಿದರು, ಅಷ್ಟೇ ಅಲ್ಲದೆ, ಭರವಸೆಯ ನಾಯಕ ಎಂಬ ಖ್ಯಾತಿಯನ್ನೂ ಪಡೆದರು.

ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ:

ಬಿದ್ದಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಇರುವ ಕನ್ನಡದ ಹೆಮ್ಮೆಯ ನಟ ಎಂದರೆ ಅದು ಕಿಚ್ಚ ಸುದೀಪ್, ‘ಹುಚ್ಚ’ ಸಿನಿಮಾದ ಬಂದ ಅದೆಷ್ಟೋ ಸಿನಿಮಾಗಳು ಹಿಟ್ ಆಗದೆ ಮುಗ್ಗರಿಸಿದ್ದವು. ಇದಕ್ಕೆಲ್ಲ ಬಗ್ಗದ ಸುದೀಪ್, ಸ್ವತಃ ನಿರ್ದೇಶನ ಮತ್ತು ನಿರ್ಮಾಣ ಮಾಡಿ, ‘ಮೈ ಆಟೋಗ್ರಾಫ್’ ಸಿನಿಮಾವನ್ನು ಮಾಡಿದರು. ಇದು ಮತ್ತೆ ಅವರನ್ನು ಗೆಲುವಿನ ಕುದುರೆಯನ್ನೇರುವಂತೆ ಮಾಡಿತು. ಇನ್ನು ಕಿಚ್ಚ ಸುದೀಪ್, ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ಈಗಾಗಲೇ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಿಚ್ಚ ಪ್ಯಾನ್ ಇಂಡಿಯಾ ಸ್ಟಾರ್ ಎಂದು ಖ್ಯಾತಿ ಪಡೆದಿದ್ದಾರೆ. 

ಇದನ್ನೂ ಓದಿ: ಒರಿಸ್ಸಾದ ಪುರಿಬೀಚ್‌ನಲ್ಲಿ ಅರಳಿದ ನಟ ಕಿಚ್ಚ ಸುದೀಪ್ ಮರಳು ಶಿಲ್ಪ..

ಶಿವಮೊಗ್ಗದಲ್ಲಿ ಜನಿಸಿದ ಕಿಚ್ಚ ಇದೀಗ ಭಾರತವೇ ಕರುನಾಡಿನತ್ತ ತಿರುಗಿ ನೋಡುವಂತೆ ಮಾಡಿದ ಮಾಣಿಕ್ಯ. ಕರ್ನಾಟಕದ ಕಂಪನ್ನು ಎಲ್ಲೆಡೆ ಪಸರಿಸಿದ ಕಿಚ್ಚ ಸುದೀಪ್ ಅವರ ಸಿನಿ ಜರ್ನಿ ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂಬುದು ನಮ್ಮ ಹಾರೈಕೆ. ಹುಟ್ಟುಹಬ್ಬದ ಶುಭಾಶಯಗಳು ‘ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್’.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News