ಕಿಡಿಗೇಡಿಗಳಿಂದ ಪ್ರಭಾಸ್ ಫೇಸ್‌ಬುಕ್ ಹ್ಯಾಕ್...ತಕ್ಷಣವೇ ಎಚ್ಚೆತ್ತುಕೊಂಡ ಡಾರ್ಲಿಂಗ್‌..!

Prabhas Face book Page Hacked : ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ 'ಆದಿಪುರುಷ್' ಸಿನಿಮಾದ ಸೋಲಿನಿಂದ ಹೊರಬಂದಿಲ್ಲ. ಆ ಬೆನ್ನಲೇ ನಿನ್ನೆ (ಜುಲೈ 27) ತಡರಾತ್ರಿ ನಟನ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿದೆ. ಈ ಬಗ್ಗೆ ಸ್ವತಃ ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಮಾಹಿತಿ ನೀಡಿದ್ದರು.  

Written by - Savita M B | Last Updated : Jul 28, 2023, 12:28 PM IST
  • ಸೋಲಿನ ಸುಳಿಯಲ್ಲಿ ಸಿಲುಕಿದ ನಟ ಪ್ರಭಾಸ್‌ಗೆ ʼಆದಿಪುರುಷ್‌ʼ ಸಿನಿಮಾ ಗೆಲುವು ತಂದು ಕೊಡಲಿಲ್ಲ
  • ಪ್ರಭಾಸ್ ಫೇಸ್‌ಬುಕ್ ಪೇಜ್ ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ
  • ಪ್ರಭಾಸ್ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಈ ಹ್ಯಾಕ್‌ ಆಗಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ
ಕಿಡಿಗೇಡಿಗಳಿಂದ ಪ್ರಭಾಸ್ ಫೇಸ್‌ಬುಕ್ ಹ್ಯಾಕ್...ತಕ್ಷಣವೇ ಎಚ್ಚೆತ್ತುಕೊಂಡ ಡಾರ್ಲಿಂಗ್‌..!  title=

Darling Prabhas : 'ಬಾಹುಬಲಿ' ಸಿನಿಮಾದ ನಂತರ ಸೋಲಿನ ಸುಳಿಯಲ್ಲಿ ಸಿಲುಕಿದ ನಟ ಪ್ರಭಾಸ್‌ಗೆ ʼಆದಿಪುರುಷ್‌ʼ ಸಿನಿಮಾ ಗೆಲುವು ತಂದು ಕೊಡಲಿಲ್ಲ. ಈ ಮೂಲಕ ಪ್ರಭಾಸ್‌ಗೆ ಮತ್ತೊಮ್ಮೆ ಹಿನ್ನೆಡೆಯಾಗಿತ್ತು. ಇದೆಲ್ಲದರ ನಡುವೆ ಪ್ರಭಾಸ್ ಫೇಸ್‌ಬುಕ್ ಪೇಜ್ ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಈ ಸಂಬಂಧ ಡಾರ್ಲಿಂಗ್ ಪ್ರಭಾಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಕಿಡಿಗೇಡಿಗಳು ಪ್ರಭಾಸ್ ಫೇಸ್‌ಬುಕ್ ಅನ್ನು ಹ್ಯಾಕ್ ಮಾಡಿ ಎರಡು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಒಂದು ವಿಡಿಯೋಗೆ " ನತದೃಷ್ಟ ಮನುಷ್ಯರು" ಹಾಗೂ ಇನ್ನೊಂದು ವಿಡಿಯೋಗೆ "ವಿಶ್ವದಾದ್ಯಂತ ಚೆಂಡು ವಿಫಲಗೊಳ್ಳುತ್ತೆ" ಎಂದು ಕ್ಯಾಪ್ಷನ್ ಕೊಡಲಾಗಿತ್ತು.

ಇದನ್ನೂ ಓದಿ-ಫ್ರೆಂಡ್ಸ್‌ ಜೊತೆ ಬಾಲಿಯಲ್ಲಿ ಹರ್ಷಿಕಾ ಎಂಜಾಯ್ಮೆಂಟ್‌..! ಬ್ಯಾಚುಲರ್‌ ಪಾರ್ಟಿನಾ..?

ಈ ಕುರಿತು ತಕ್ಷಣವೇ ಎಚ್ಚೆತ್ತುಕೊಂಡ  ಪ್ರಭಾಸ್ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಈ ಹ್ಯಾಕ್‌ ಆಗಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದರು. " " ನನ್ನ ಫೇಸ್‌ಬುಕ್ ಫೇಜ್ ಹ್ಯಾಕ್ ಆಗಿದೆ. ನನ್ನ ತಂಡ ಇದನ್ನು ಸರಿಪಡಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಸದ್ಯ ಪ್ರಭಾಸ್ ಫೇಸ್‌ಬುಕ್ ಪೇಜ್ ಸರಿ ಹೋಗಿದೆ ಎಂದು ಹೇಳಲಾಗಿದೆ. 

ಇನ್ನು ಆದಿಪುರುಷ್‌ ಸಿನಿಮಾ ಸಾಕಷ್ಟು ಟೀಕೆಗಳನ್ನು ಎದುರಿಸಿ ಬಿಡುಗಡೆಯಾದರೂ ಹೇಳಿಕೊಳ್ಳುವ ರೀತಿಯಲ್ಲಿ ಯಶಸ್ಸನ್ನು ತಂದುಕೊಡಲಿಲ್ಲ. ಚಿತ್ರದಲ್ಲಿನ ಪಾತ್ರದಿಂದಾಗಿ ಅನೇಕ ಜನರು ಸಿನಿಮಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ನೆಲಕಚ್ಚಿತ್ತು. 

ಇದನ್ನೂ ಓದಿ-Rocking Star Yash : ಟ್ರೆಂಡ್ ಆಯ್ತು ರಾಕಿ KGF ಲುಕ್...ಸಲಾಂ ರಾಕಿಭಾಯ್‌ ಎಂದ ಜಪಾನಿಯರು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾ

Trending News