Kichha Sudeep : ಸುದೀಪ್ ಬುಧವಾರ ಬಿಜೆಪಿಗೆ ತಮ್ಮ ಬೆಂಬಲವನ್ನು ಘೋಷಿಸಿದರು ಮತ್ತು ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ, ಆದರೆ ಮೇ 10 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು. ಈ ವಿಚಾರವಾಗಿ ಸಾಕಷ್ಟು ಚರ್ಚೆ ಹಾಗೂ ಗೊಂದಲಗಳು ಸೃಷ್ಠಿಯಾಗಿವೆ. ಅಲ್ಲದೇ ಇದೇ ವಿಷಯವಾಗಿ ಅವರ ಸಿನಿಮಾ ಟಿವಿ ಶೋ ಪ್ರಸಾರ ಮಾಡದಂತೆ ಚುನಾವಣಾ ಆಯೋಗಕ್ಕೆ ಪತ್ರವನ್ನು ಸಹ ಬರೆಯಲಾಗಿದೆ ಎಂಬ ವರದಿಗಳು ಕೇಳಿಬಂದಿವೆ.
ಇದೀಗ ಈ ಸುದ್ದಿ ಮತ್ತೊಂದು ತಿರುವು ಪಡೆದುಕೊಂಡಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ ಸುದೀಪ್ ಹೇಳಿಕೆಯ ವಿಚಾರವಾಗಿ ಬೇಸರ ಮತ್ತು ಆಘಾತವನ್ನು ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು "ಕಿಚ್ಚ ಸುದೀಪ್ ಅವರ ಹೇಳಿಕೆಯಿಂದ ನನಗೆ ಆಘಾತವಾಗಿದೆ ಮತ್ತು ನೋವಾಗಿದೆ, ಕರ್ನಾಟಕದಲ್ಲಿ ಹತಾಶರಾಗಿರುವ, ಸೋತಿರುವ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಇದು ಎಂದು ನಾನು ಬಲವಾಗಿ ನಂಬುತ್ತೇನೆ " ಎಂದಿದ್ದಾರೆ.
"I am shocked and hurt by Kichha Suddep's statement," says actor Prakash Raj on Kannada actor Kichcha Sudeep extending his support to BJP for the upcoming #KarnatakaAssemblyElection2023
(File Pic) pic.twitter.com/8olSSfwcJ8
— ANI (@ANI) April 5, 2023
ಇದನ್ನೂ ಓದಿ-ಹನುಮನ ಅವತಾರದಲ್ಲಿ ದೇವದತ್ತ ನಾಗೇ, ಆದಿಪುರುಷ್ ಚಿತ್ರದ ಹೊಸ ಪೋಸ್ಟರ್ ರಿಲೀಸ್..!
ಇನ್ನೂ ಕಿಚ್ಚ ಸುದೀಪ್ ಅವರು ಪ್ರಕಾಶ್ ರಾಜ್ ಟ್ವೀಟ್ ವಿಚಾರಕ್ಕೆ ಸಂಬಂಧಪಟ್ಟಂತೆ, ಪ್ರಕಾಶ್ ರಾಜ್ ಮತ್ತು ನಾನು ರನ್ನ ಸಿನಿಮಾ ಮಾದಿದ್ದೇವೆ. ಅವರ ಜೊತೆ ಮುಂದೆ ಯಾವ ಸಿನಿಮಾ ಮಾಡಬೇಕು ಅಂತ ಕಾಯ್ತಿದ್ದೇನೆ. ಪ್ರಕಾಶ್ ರಾಜ್ ಟ್ವೀಟಿಗೆ ಸಿನಿಮಾ ಶೈಲಿಯಲ್ಲೇ ಉತ್ತರಿಸಿದ್ದಾರೆ ಸುದೀಪ್. ಬೇರೆ ಪಕ್ಷದಲ್ಲಿ ನನಗೆ ವಯಕ್ತಿಕವಾಗಿ ಸಹಾಯ ಮಾಡಿದವರ ಪರ ನಿಲ್ತೀನಿ. ನನ್ನ ಲೈಫಲ್ಲಿ ಯಾರೆಲ್ಲಾ ಇದ್ರು, ಸಹಾಯ ಮಾಡಿದ್ರು ಅಂತ ನನಗೆ ಮಾತ್ರ ಗೊತ್ತು. ಪಕ್ಷ ಅಂತ ಬರಲ್ಲ, ವ್ಯಕ್ತಿಗೆ ಮಾತ್ರ ಬಂದೆ.ಅಂಬಿ ಮಾಮ ಇದ್ದಾಗ ಅವರ ಪರ ನಿಂತೆ ಅನ್ನೋದನ್ನ ಕೂಡ ನೆನಪು ಮಾಡಿಕೊಂಡರು ಕಿಚ್ಚ ಸುದೀಪ್.
ಇದನ್ನೂ ಓದಿ-ಕಿಚ್ಚ ಸುದೀಪ್ ಗೆ ಬೆದರಿಕೆ ಪ್ರಕರಣ : ಕಾರು ಚಾಲಕನ ಮೇಲೆ ಅನುಮಾನ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.