ಕಿಚ್ಚ ಸುದೀಪ್ ಗೆ ಬೆದರಿಕೆ ಪ್ರಕರಣ : ಕಾರು ಚಾಲಕನ ಮೇಲೆ ಅನುಮಾನ!

Kichcha Sudeep Threatening case :ಇತ್ತೀಚೆಗೆ ಕಾರು ಚಾಲಕನೊಬ್ಬನನ್ನು ಸುದೀಪ್ ಕೆಲಸದಿಂದ ತೆಗೆಡು ಹಾಕಿದ್ದರಿಂದ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ನಡೆದುಕೊಂದಿರಬಹುದು ಎನ್ನುವ ಅನುಮಾನ ಹೊರ ಬಿದ್ದಿದೆ. 

Written by - Ranjitha R K | Last Updated : Apr 6, 2023, 09:29 AM IST
  • ನಟ ಸುದೀಪ್ ಗೆ ಬಂದ ಬೆದರಿಕೆ ಪತ್ರ
  • ಎಲ್ಲಾ ಆಯಾಮದಲ್ಲೂ ಪೊಲೀಸ್ ತನಿಖೆ
  • ಪ್ರಕರಣ ಸಿಸಿಬಿಗೆ ವರ್ಗ
ಕಿಚ್ಚ ಸುದೀಪ್ ಗೆ ಬೆದರಿಕೆ ಪ್ರಕರಣ : ಕಾರು ಚಾಲಕನ ಮೇಲೆ ಅನುಮಾನ!  title=

ಬೆಂಗಳೂರು : ಸ್ಯಾಂಡಲ್ ವುಡ್ ನಟ ಸುದೀಪ್ ಗೆ ಬಂದ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ಚುರುಕಾಗಿದೆ. ಈಗಾಗಲೇ ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆ  ನಡೆಸುತ್ತಿದ್ದಾರೆ. ರಾಜಕೀಯ ಹಾಗೂ ಸಿನಿಮಾರಂಗ ಎರಡೂ ಆಯಾಮದಲ್ಲೂ ತನಿಖೆ ಬಿಗಿ ಗೊಳಿಸಿದ್ದಾರೆ. ಈ ನಡುವೆ ಸಿನಿಮಾರಂಗದ ಕೆಲ ವಿರೋಧಿಗಳ‌ ಜೊತೆ ಸೇರಿ ವ್ಯಕ್ತಿಯೋರ್ವ ಈ  ಕೃತ್ಯ ನಡೆಸಿರಬಹುದು ಎನ್ನುವ ಸಂದೇಹ ವ್ಯಕ್ತವಾಗಿದೆ. 

ಕಾರು ಚಾಲಕನ ಮೇಲೆ ಅನುಮಾನ : 
ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಬಳಿಯೂ ಮಾಹಿತಿ ಕಲೆ ಹಾಕಲಾಗಿದೆ. ಈ ವೇಳೆ ಸುದೀಪ್  ಮತ್ತವರ ತಂಡ ಕಾರು ಚಾಲಕನ ಮೇಲೆ ಅನುಮಾನ  ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕಾರು ಚಾಲಕನೊಬ್ಬನನ್ನು ಸುದೀಪ್ ಕೆಲಸದಿಂದ ತೆಗೆಡು ಹಾಕಿದ್ದರಿಂದ  ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ನಡೆದುಕೊಂದಿರಬಹುದು ಎನ್ನುವ ಅನುಮಾನ ಹೊರ ಬಿದ್ದಿದೆ. 

ಇದನ್ನೂ ಓದಿ : Kichcha Sudeep: "ಎಲೆಕ್ಷನ್‌ಗೆ ನಿಲ್ಲಲ್ಲ.. ಮಾಮ ಬೊಮ್ಮಾಯಿಗೆ ನನ್ನ ಬೆಂಬಲ"

ಪ್ರಕರಣ ಸಿಸಿಬಿಗೆ ವರ್ಗ :
ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು, ಕಾರು ಚಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣದ ಬಳಿಕ ಕಾರು ಚಾಲಕನ ಮೊಬೈಲ್ ಕೂಡಾ ಸ್ವಿಚ್ ಆಫ್ ಬರುತ್ತಿದ್ದು, ಆತನ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಸಿಸಿಬಿ ಡಿವೈಎಸ್ಪಿ ನೇತೃತ್ವದ ವಿಶೇಷ ತಂಡದಿಂದ ಕೇಸ್ ಬಗ್ಗೆ ತನಿಖೆ ನಡೆಸುತ್ತಿದೆ. 

ಹೆಚ್ಚಿನ ವಿಚಾರಣೆಗೆ ಸುದೀಪ್ ಗೆ ನೋಟೀಸ್ ?:
ಇನ್ನು ಘಟನೆ ಬಗ್ಗೆ ಮಾತನಾಡಿರುವ ಸುದೀಪ್ ಪ್ರಕರಣದ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆ ಎಂದಿದ್ದಾರೆ. ಕೃತ್ಯದ ಹಿಂದೆ ಇರುವ ಚಿತ್ರರಂಗದವರು ಯಾರು ಎನ್ನುವುದು ತಿಳಿದಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸುದೀಪ್ ಗೆ ನೊಟೀಸ್ ನೀಡಿ ಮತ್ತಷ್ಟು ಮಾಹಿತಿ ಪಡೆಯಲು ಸಿಸಿಬಿ ಸಿದ್ದತೆ ನಡೆಸಿದೆ.

ಇದನ್ನೂ ಓದಿ : Prakash Raj : "ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ" - ನಟ ಪ್ರಕಾಶ್ ರಾಜ್ 

ಪತ್ರ ಬರೆದಿದ್ದು ಯಾರು ? ಆತನ ಬಳಿ ಇರುವ ಸಾಕ್ಷಿಗಳೇನು? ನಿಜಕ್ಕೂ ಆತನ ಬಾಲಿ ವಿಡಿಯೋಗಳು ಇದೆಯಾ? ವೀಡಿಯೋ ಇದ್ದರೆ ಅದನ್ನ ಬ್ಲಾಕ್ ಮೇಲ್ ಗೆ ಬಳಸಲು ಇಚ್ಚಿಸಿದ್ದನಾ..? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News