ʼಸಲಾರ್‌ ಜಗತ್ತಿನ ವಿಲನ್‌ ಪೋಸ್ಟರ್‌ ರಿಲೀಸ್‌ʼ : ಪೃಥ್ವಿರಾಜ್‌ ಖಡಕ್‌ ಲುಕ್‌ಗೆ ಫ್ಯಾನ್ಸ್‌ ಶಾಕ್‌...!

ಪೊಸ್ಟರ್‌ನಿಂದಲೇ ಅಖಂಡ ಭಾರತ ಸಿನಿ ರಂಗದಲ್ಲಿ ಕುತೂಹಲ ಮೂಡಿಸಿದ್ದ ಪ್ರಶಾಂತ್‌ ನೀಲ್‌ ನಿರ್ದೇಶನದ ಹಾಗೂ ನಟ ಪ್ರಭಾಸ್‌ ನಟನೆಯ ʼಸಲಾರ್‌ʼ ಸಿನಿಮಾದ ಎರಡನೇ ಪೋಸ್ಟರ್‌ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ಹೈಪ್‌ ಹೆಚ್ಚಿಸಿದೆ. ಮಾಲಿವುಡ್‌ ಸ್ಟಾರ್‌ ಖ್ಯಾತ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರ ರಗಡ್‌ ಲುಕ್‌ ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

Written by - Krishna N K | Last Updated : Oct 16, 2022, 02:52 PM IST
  • ಪ್ರಶಾಂತ್‌ ನೀಲ್‌ ನಿರ್ದೇಶನದ ಹಾಗೂ ನಟ ಪ್ರಭಾಸ್‌ ನಟನೆಯ ʼಸಲಾರ್‌ʼ ಸಿನಿಮಾದ ಎರಡನೇ ಪೋಸ್ಟರ್‌ ಬಿಡುಗಡೆ
  • ಖ್ಯಾತ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರ ರಗಡ್‌ ಲುಕ್‌ ನೋಡಿದ ಅಭಿಮಾನಿಗಳು ಶಾಕ್‌
  • ಈ ಹಿಂದೆ ಪ್ರಭಾತ್‌ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು
ʼಸಲಾರ್‌ ಜಗತ್ತಿನ ವಿಲನ್‌ ಪೋಸ್ಟರ್‌ ರಿಲೀಸ್‌ʼ : ಪೃಥ್ವಿರಾಜ್‌ ಖಡಕ್‌ ಲುಕ್‌ಗೆ ಫ್ಯಾನ್ಸ್‌ ಶಾಕ್‌...! title=

ಬೆಂಗಳೂರು : ಪೊಸ್ಟರ್‌ನಿಂದಲೇ ಅಖಂಡ ಭಾರತ ಸಿನಿ ರಂಗದಲ್ಲಿ ಕುತೂಹಲ ಮೂಡಿಸಿದ್ದ ಪ್ರಶಾಂತ್‌ ನೀಲ್‌ ನಿರ್ದೇಶನದ ಹಾಗೂ ನಟ ಪ್ರಭಾಸ್‌ ನಟನೆಯ ʼಸಲಾರ್‌ʼ ಸಿನಿಮಾದ ಎರಡನೇ ಪೋಸ್ಟರ್‌ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ಹೈಪ್‌ ಹೆಚ್ಚಿಸಿದೆ. ಮಾಲಿವುಡ್‌ ಸ್ಟಾರ್‌ ಖ್ಯಾತ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರ ರಗಡ್‌ ಲುಕ್‌ ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಹೌದು.. ಸಲಾರ್‌ ಭಾರತೀಯ ಚಿತ್ರರಂಗದ ಮೋಸ್ಟ್‌ ಎಕ್ಸ್ಪೆಕ್ಟೆಡ್ ಸಿನಿಮಾ. ಕೆಜಿಎಫ್‌ ಸೃಷ್ಟಿಸಿ ಸಂಚಲನ ಮೂಡಿಸಿದ್ದ ನಿರ್ದೇಶಕ ಪ್ರಶಾಂತ್‌ ಸಲಾರ್‌ ಜನಕ. ಈ ಹಿಂದೆ ಪ್ರಭಾತ್‌ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು. ಸದ್ಯ ಮಲಯಾಳಂ ಸ್ಟಾರ್‌ ಪೃಥ್ವಿರಾಜ್ ಸುಕುಮಾರನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದ್ದು, ಪೃಥ್ವಿರಾಜ್‌ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಗಾಡ್ ಆಫ್ ಮಾಸ್ ಬಾಲಕೃಷ್ಣಗೆ ಕನ್ನಡತಿ ರಶ್ಮಿಕಾ ಮೇಲೆ ಕ್ರಶ್...!

ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಬಿಡುಗಡೆ ಮಾಡಿದೆ. ಪೋಸ್ಟರ್‌ನಲ್ಲಿ ಪೃಥ್ವಿರಾಜ್‌ ಅವರ ಪಾತ್ರದ ಹೆಸರನ್ನು ರೀವಿಲ್‌ ಮಾಡಿದ್ದು, ವರದರಾಜ್‌ ಮನ್ನಾರ್‌ ಒಂದು ಅದ್ಭುತ ಪಾತ್ರವಾಗಲಿದೆ. ಸಲಾರ್‌ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಚಿತ್ರವನ್ನು ಕೆಜಿಎಫ್ ಮಾಸ್ಟರ್ ಮೈಂಡ್‌ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. 

ಸಲಾರ್ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದು, ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಧು ಗುರುಸ್ವಾಮಿ, ಜಗಪತಿ ಬಾಬು, ಈಶ್ವರಿ ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸುಮಾರು 400 ಕೋಟಿ ಗೂ ಹೆಚ್ಚು ಸಲಾರ್‌ ಬಜೆಟ್‌ ಎಂದು ಹೇಳಲಾಗಿದೆ. ಸೆಪ್ಟೆಂಬರ್‌ 28 2023 ರಂದು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News