ಪ್ರಿಯಾ ಪ್ರಕಾಶ್ ಚೊಚ್ಚಲ ಬಾಲಿವುಡ್ ಚಿತ್ರ 'ಶ್ರೀದೇವಿ ಬಂಗ್ಲೋ' Teaser ರಿಲೀಸ್!

ಸದ್ಯ 'ಶ್ರೀದೇವಿ ಬಂಗ್ಲೋ' ದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರಕ್ಕೆ ಪದಾರ್ಪಣೆ.

Last Updated : Jan 15, 2019, 10:57 AM IST
ಪ್ರಿಯಾ ಪ್ರಕಾಶ್ ಚೊಚ್ಚಲ ಬಾಲಿವುಡ್ ಚಿತ್ರ 'ಶ್ರೀದೇವಿ ಬಂಗ್ಲೋ' Teaser ರಿಲೀಸ್! title=
Pic: Video grab

ದಕ್ಷಿಣ ಭಾರತದ ಕಲಾವಿದರು ಬಾಲಿವುಡ್ ಗೆ ಪದಾರ್ಪಣೆ ಮಾಡುವುದು ಹೊಸತೇನಲ್ಲ. ಈ ಬಾರಿ ಇಂಟರ್ನೆಟ್ ಸೆನ್ಸೇಷನ್ ಪ್ರಿಯಾ ಪ್ರಕಾಶ್ ವಾರಿಯರ್ ಬಾಲಿವುಡ್ ಪ್ರವೇಶ ಮಾಡಲಿದ್ದು, ಸದ್ಯ ಶ್ರೀದೇವಿ ಜೀವನಾಧಾರಿತ ಚಿತ್ರ 'ಶ್ರೀದೇವಿ ಬಂಗ್ಲೋ' ದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರಕ್ಕೆ ಪದಾರ್ಪಣೆ ಮಾಡಿದ್ದು, ಸದ್ಯ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ದಕ್ಷಿಣ ಭಾರತದ ಪ್ರಮುಖ ನಿರ್ದೇಶಕ ಪ್ರಶಾಂತ್ ಮಾಂಬುಲಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಲಂಡನ್ ನಲ್ಲಿ ನಡೆದಿದೆ.

ಈ ಚಿತ್ರದ ಟೀಸರ್ ನೋಡಿದ ಬಳಿಕ ಈ ಚಿತ್ರ ಬಾಲಿವುಡ್ ಸೂಪರ್ ಸ್ಟಾರ್ ಶ್ರೀದೇವಿ ಜೀವನಾಧಾರಿತ ಎಂದು ತೋರುತ್ತದೆ. ಕಾರಣ ಟೀಸರ್ ನ ಕೊನೆಯಲ್ಲಿ ಬಾತ್ ಟಬ್ ನಲ್ಲಿ ಕೇವಲ ಕಾಲುಗಳು ಮಾತ್ರ ಗೋಚರಿಸುತ್ತವೆ. ಚಿತ್ರದಲ್ಲಿ ಪ್ರಿಯಾ ಹೊರತುಪಡಿಸಿ ಪ್ರಿಯಾಂಶು ಚಟರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಬಿಡುಗಡೆ ಯಾವಾಗ ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿಸಿಲ್ಲ.

ರಾತ್ರೋ ರಾತ್ರಿ ಕಣ್ಣ ಸನ್ನೆಯಿಂದ ಇಂಟರ್ನೆಟ್ ಸೆನ್ಸೇಷನ್:
2018 ರ ಆರಂಭದಲ್ಲಿ ರಾತ್ರೋ ರಾತ್ರಿ ಕಣ್ಣ ಸನ್ನೆಯಿಂದ ಇಡೀ ದೇಶವನ್ನೇ ತಿರುಗಿ ನೋಡುವಂತೆ ಮಾಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್ 2019 ರಲ್ಲಿ ಕೂಡ ಸುದ್ದಿಯಾಗಿದ್ದಾರೆ. 'ಒರು ಆಡರ್ ಲವ್' ಚಿತ್ರದ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ ಈ ಮಾಲಿವುಡ್ ಬೆಡಗಿ ಈಗ ಬಾಲಿವುಡ್ ನಲ್ಲಿ ತನ್ನ ಚೊಚ್ಚಲ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಪ್ರಿಯಾ ಪ್ರಕಾಶ್ ವಾರಿಯರ್ ತನ್ನ ಮೊದಲ ಮಲಯಾಳಂ ಚಿತ್ರ 'ಒರು ಆಡರ್ ಲವ್' ನಿಂದ ಹಾಡಿನೊಂದಿಗೆ ಸೂಪರ್ಹಿಟ್. 'ಒರು ಆಡರ್ ಲವ್' ಎನ್ನುವುದು 2018 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಚಿತ್ರ. 

Trending News