ಪ್ರಿಯಾಂಕಾ ಚೋಪ್ರಾ ನಾಯಿಮರಿ ಇನ್ಸ್ಟಾಗ್ರಾಮ್ ನಲ್ಲಿ ಚಾಟ್ ಕೂಡ ಮಾಡುತ್ತೆ!

ಈಗ ಬಾಲಿವುಡ್ ನಿಂದ ಹಿಡಿದು ಈಗ ಹಾಲಿವುಡ್ ನಲ್ಲಿಯೂ ಕೂಡ ಸದ್ದು ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ  ಅವರು ಕುಂತರು ನಿಂತರು ಅವರದ್ದೇ ಸುದ್ದಿ.

Updated: Oct 9, 2018 , 02:33 PM IST
ಪ್ರಿಯಾಂಕಾ ಚೋಪ್ರಾ ನಾಯಿಮರಿ ಇನ್ಸ್ಟಾಗ್ರಾಮ್ ನಲ್ಲಿ ಚಾಟ್ ಕೂಡ ಮಾಡುತ್ತೆ!
Photo:instagram

ನವದೆಹಲಿ: ಈಗ ಬಾಲಿವುಡ್ ನಿಂದ ಹಿಡಿದು ಈಗ ಹಾಲಿವುಡ್ ನಲ್ಲಿಯೂ ಕೂಡ ಸದ್ದು ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ  ಅವರು ಕುಂತರು ನಿಂತರು ಅವರದ್ದೇ ಸುದ್ದಿ.

ಈಗ ನಾವು ಹೇಳ ಹೊರಟಿರುವುದು ಪ್ರಿಯಾಂಕಾ ಸುದ್ದಿಯಲ್ಲ, ಬದಲಾಗಿ ಅವರ ನಾಯಿ ಮರಿಯ ಸುದ್ದಿ. ಹೌದು ಅವರ ನಾಯಿ ಮರಿ ಈಗ ಸಾಮಾಜಿಕ ಜಾಲತಾಣದಲ್ಲಿ ಅಷ್ಟು ಸುದ್ದಿ ಮಾಡಿದೆ.ಅಷ್ಟಕ್ಕೂ ಇದು  ಸುದ್ದಿ ಮಾಡುತ್ತಿರುವ ವಿಚಾರವನ್ನು ಕೇಳಿದರೆ ನೀವು ಖಂಡಿತಾ ಬೆಚ್ಚಿ ಬಿಳುತ್ತಿರಾ?

ಏಕೆಂದರೆ ಇನ್ಸ್ಟಾಗ್ರಾಂ ನಲ್ಲಿ  ಪ್ರತ್ಯೇಕ ಖಾತೆಯನ್ನು ತೆರೆದಿರುವ ಈ ನಾಯಿಮರಿ ತನ್ನ  ಖಾತೆಯನ್ನು ಡೈರೀಸ್ ಆಫ್ ಡಯಾನಾ(diariesofdiana) ಎನ್ನುವ ಹೆಸರಿನಲ್ಲಿಟ್ಟುಕೊಂಡಿದೆ.ಈಗ ಈ ನಾಯಿಮರಿಯನ್ನು ಬರೋಬ್ಬರಿ 84 ಸಾವಿರ ಜನರು ಫಾಲೋ ಮಾಡುತ್ತಿದ್ದಾರೆ.