'ರಾಬರ್ಟ್' ಸಿನಿಮಾಗೆ ಕನ್ನಡದಲ್ಲಿ ಡಬ್ ಮಾಡಿದ ಈ ತೆಲುಗು ನಟ ಹೇಳಿದ್ದೇನು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ನಟಿಸಿರುವ ತೆಲುಗು ಖಳನಾಯಕ ಜಗಪತಿ ಬಾಬು ಈ ಬಾರಿ ಕನ್ನಡದಲ್ಲಿ ತಮ್ಮ ಧ್ವನಿಯನ್ನು ಡಬ್ ಮಾಡಿದ್ದಾರೆ.

Last Updated : Oct 25, 2020, 04:53 PM IST
'ರಾಬರ್ಟ್' ಸಿನಿಮಾಗೆ ಕನ್ನಡದಲ್ಲಿ ಡಬ್ ಮಾಡಿದ ಈ ತೆಲುಗು ನಟ ಹೇಳಿದ್ದೇನು..?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ನಟಿಸಿರುವ ತೆಲುಗು ಖಳನಾಯಕ ಜಗಪತಿ ಬಾಬು ಈ ಬಾರಿ ಕನ್ನಡದಲ್ಲಿ ತಮ್ಮ ಧ್ವನಿಯನ್ನು ಡಬ್ ಮಾಡಿದ್ದಾರೆ.

ಸ್ವತಃ ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಜಗಪತಿಬಾಬು ಅವರು 'ಕನ್ನಡದಲ್ಲಿ ಮೊದಲ ಬಾರಿಗೆ ರಾಬರ್ಟ್ ಚಿತ್ರಕ್ಕಾಗಿ ಡಬ್ ಮಾಡಿರುವುದು ಹೆಮ್ಮಯ ವಿಷಯ, ನಿರ್ದೇಶಕ ತರುಣ್ ಸುಧೀರ್ ಹಾಗೂ ನಾಯಕ ದರ್ಶನ್ ಅವರು ತುಂಬಾ ಸಿಹಿಯಾಗಿರುವ ವ್ಯಕ್ತಿತ್ವ ಉಳ್ಳವರು ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ತರುಣ್ ಸುಧೀರ್ ಅವರು ಧನ್ಯವಾದಗಳು ಜಗಪತಿ ಬಾಬು ಸರ್, ನೀವು ರಾಬರ್ಟ್ ಸಿನಿಮಾದಲ್ಲಿ ನಟಿಸಿರುವುದು ಸಂತಸದ ಸಂಗತಿ, ಕನ್ನಡಿಗರು ನಿಮ್ಮ ಧ್ವನಿಯನ್ನು ಖಂಡಿತ ಇಷ್ಟ ಪಡುತ್ತಾರೆ' ಎಂದು ಹೇಳಿದರು.
 

More Stories

Trending News