Naatu Naatu singer Rahul Sipligunj : ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಈ ಸಿನಿಮಾ ನಾಟು ನಾಟು ಹಾಡು ಆಸ್ಕರ್ಗೆ ನಾಮನಿರ್ದೇಶನಗೊಂಡಿದೆ. ಈ ಹಾಡಿಗೆ ಆಸ್ಕರ್ ಸಿಗುತ್ತೆ ಎನ್ನುವ ವಿಶ್ವಾಸ ಚಿತ್ರತಂಡ ಮತ್ತು ಅಭಿಮಾನಿಗಳಲ್ಲಿದೆ. ಇನ್ನೊಂದು ವಿಶೇಷ ಅಂದ್ರೆ, ಆಸ್ಕರ್ ಸಮಿತಿ ನಾಟು ನಾಟು ಹಾಡಿನ ಗಾಯಕರಾದ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲಭೈರವ ಅವರನ್ನು ಕಾರ್ಯಕ್ರಮದಲ್ಲಿ ನೇರವಾಗಿ ಹಾಡಲು ಆಹ್ವಾನಿಸಿದೆ. ಜೊತೆಗೆ ಕೀರವಾಣಿಯವರು ಸಹ ಇರಲಿದ್ದಾರೆ.
ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಸ್ವತಃ ಚಲನಚಿತ್ರ ಬರಹಗಾರರು. ಕೀರವಾಣಿ ಅವರ ತಂದೆ ಶಿವಶಕ್ತಿ ದತ್ತಾ ಕೂಡ ಆ ಸಮಯದಲ್ಲಿ ದೊಡ್ಡ ಬರಹಗಾರರಾಗಿದ್ದರು. ಹೀಗಾಗಿ ತಂದೆಯ ಪರಂಪರೆಯನ್ನು ಪಡೆದು ಚಿತ್ರರಂಗಕ್ಕೆ ಇಬ್ಬರು ಕಾಲಿಟ್ಟರು. ಇನ್ನು ಎನ್ಟಿಆರ್ ವಂಶದ ಬಗ್ಗೆ ಹೇಳಬೇಕಾಗಿಲ್ಲ, ರಾಮ್ ಚರಣ್ ಕೂಡ ತಮ್ಮ ತಂದೆ ಮೆಗಾಸ್ಟಾರ್ ಚಿರಂಜೀವಿ ಅವರ ಹಾದಿಯನ್ನು ಅನುಸರಿಸಿ ಹೀರೋ ಆದರು. ಆದರೆ ಈ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನ ನೀಡಲು ಹೊರಟಿರುವವರಲ್ಲಿ ರಾಹುಲ್ ಸಿಪ್ಲಿಗಂಜ್ ಅವರ ಜೀವನ ಕುರಿತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಯಾವುದೇ ಚಲನಚಿತ್ರ ಹಿನ್ನೆಲೆ ಹೊಂದಿರದ ರಾಹುಲ್ ಸಿಪ್ಲಿಗಂಜ್ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ.
ಇದನ್ನೂ ಓದಿ:ಬಿಬಿಎಂಪಿ ಮಾಡಲು ಆಗದ ಕೆಲಸ ಮಾಡಿ ಸೈ ಅನಿಸಿಕೊಂಡಿದ್ದಾರೆ ನಟಿ ಕಾರುಣ್ಯರಾಮ್..!
ರಾಹುಲ್ ಹೈದರಾಬಾದ್ನ ಹಳೆಯ ಪಟ್ಟಣ ಮಂಗಳಾಹಟ್ನ ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ರಾಹುಲ್ ಸಿಪ್ಲಿಗಂಜ್ ಅವರ ತಂದೆ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲಿ, ರಾಹುಲ್ ಸಿಪ್ಲಿಗಂಜ್ ಬಟ್ಟಲುಗಳು ಮತ್ತು ತಟ್ಟೆಗಳನ್ನು ಬಾರಿಸುತ್ತ ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಅವರ ಸಂಗೀತದ ಮೇಲಿನ ಆಸಕ್ತಿಯನ್ನು ಗಮನಿಸಿದ ಅವರ ಕುಟುಂಬ ರಾಹುಲ್ನನ್ನು ಸಂಗೀತ ಕಲಿಯಲು ಖ್ಯಾತ ಗಜಲ್ ಮಾಸ್ಟರ್ ಜೊತೆಗೂಡಿದರು.
ಅದ್ರೆ ಮನೆಯ ಪರಿಸ್ಥಿತಿ ನಿಭಾಯಿಸಿಲು ರಾಹುಲ್ ತಂದೆಯ ಬೆಂಬಲಕ್ಕೆ ನಿಲ್ಲಲು ಕ್ಷೌರದಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ತಮ್ಮ ಬಿಡುವಿನ ವೇಳೆ ಸಂಗೀತ ಕಲಿಯುತ್ತಿದ್ದರು. ತಮ್ಮ ನೆಚ್ಚಿನ ಜಾನಪದ ಗೀತೆಗಳನ್ನು ಹಾಡಿ, ಚಲನಚಿತ್ರಗಳಲ್ಲಿ ಗಾಯಕರಾಗಲು ಪ್ರಯತ್ನಿಸಿ ಇಂದು ಆಸ್ಕರ್ ಅವಾರ್ಡ್ಸ್ ಸ್ಟೇಜ್ ಮೇಲೆ ಲೈವ್ ಪರ್ಫಾರ್ಮೆನ್ಸ್ ಕೊಡುವ ಮಟ್ಟಕ್ಕೆ ಬೆಳೆದಿದ್ದಾರೆ. ರಂಗಸ್ಥಳಂ ಚಿತ್ರದ ಶೀರ್ಷಿಕೆ ಗೀತೆ "ರಂಗ ರಂಗ ರಂಗಸ್ಥಳಂ" ಹಾಡಿದ ರಾಹುಲ್ ಸಿಪ್ಲಿಗಂಜ್ ಅವರಿಗೆ ಒಳ್ಳೆಯ ಮನ್ನಣೆ ಸಿಕ್ಕಿತ್ತು. ನಂತರ ಬಿಗ್ ಬಾಸ್ ಶೋಗೆ ಹೋಗಿ ವಿನ್ನರ್ ಆದ ಕಾರಣ ತೆಲುಗು ಪ್ರೇಕ್ಷಕರೆಲ್ಲರಿಗೂ ಪರಿಚಿತರಾದರು.
ಇದನ್ನೂ ಓದಿ: ಕಳೆದ ವರ್ಷ ಸ್ಯಾಂಡಲ್ವುಡ್ ಪ್ರವೇಶಿಸಿದ ನಟ-ನಟಿಯರು ಯಾರು ಅಂತ ಗೊತ್ತಾ..!
ಶೀಘ್ರದಲ್ಲೇ, ಮಾರ್ಚ್ 12 ರಂದು, ಅವರು ತಮ್ಮ ಸಹ ಗಾಯಕ ಕಾಲಭೈರವ ಅವರೊಂದಿಗೆ ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡಿನ ನೇರ ಪ್ರದರ್ಶನವನ್ನು ನೀಡಲಿದ್ದಾರೆ. ವಾಸ್ತವವಾಗಿ ಕಾಲಭೈರವನ ಹಿನ್ನೆಲೆಯೂ ಇದೆ, ಕಾಲಭೈರವ ಕೀರವಾಣಿಯವರ ಮಗ. ಹಾಗಾಗಿ ಈ ಬಾರಿ ಆಸ್ಕರ್ ವೇದಿಕೆಯಲ್ಲಿ ಯಾವುದೇ ಹಿನ್ನೆಲೆ ಇಲ್ಲದೆ ಬೆಳೆದ ಏಕೈಕ ವ್ಯಕ್ತಿಯಾಗಿ ರಾಹುಲ್ ಸಿಪ್ಲಿಗಂಜ್ ನಿಲ್ಲಲಿದ್ದಾರೆ. ಹೈದರಾಬಾದಿನ ಸ್ಲಂ ಹುಡುಗ ಕಿಡಿಗೇಡಿ ದಂಧೆಕೋರ ಎಂದೆನಿಸಿಕೊಂಡಿದ್ದವನು ನಾಳೆ ಆಸ್ಕರ್ ವೇದಿಕೆಯಲ್ಲಿ ‘ನನ್ನ ಹಾಡು ನೋಡು, ನನ್ನ ಆಟ ನೋಡು’ ಅಂತ ಹಾಡಲಿದ್ದಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.