Lal Salaam: ಮಾಸ್‌ ಅವತಾರದಲ್ಲಿ​ ರಜನಿಕಾಂತ್: ಲಾಲ್​ ಸಲಾಂ ಟ್ರೇಲರ್‌ ಔಟ್!

Lal Salaam Trailer: ಸೂಪರ್​ ಸ್ಟಾರ್​ ನಟ ರಜನಿಕಾಂತ್ ನಟಿಸಿರುವ ಲಾಲ್​ ಸಲಾಂ ಸಿನಿಮಾದ ಟ್ರೇಲರ್​ ನಿನ್ನೆ ಫೆಬ್ರವರಿ 5 ರಂದು ಬಿಡುಗಡೆಯಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ರೇಲರ್‌ನಲ್ಲಿ ರಜನಿಕಾಂತ್‌ ಎಂಟ್ರಿ ನೋಡಿ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿದೆ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Feb 6, 2024, 11:38 AM IST
  • ಲಾಲ್​ ಸಲಾಂ ಕ್ರೀಡಾ ಚಿತ್ರವಾಗಿದ್ದು, ಇದರಲ್ಲಿ ರಜನಿಕಾಂತ್ ಮುಸ್ಲಿಂ ಲೀಡರ್ ಪಾತ್ರದಲ್ಲಿ ಅಭಿನಯಿಸುವುದರ ಜೊತೆಗೆ ಧಾರ್ಮಿಕ ಸಾಮರಸ್ಯ, ಕೋಮುವಾದದಂತಹ ವಿಚಾರಗಳನ್ನೂ ತೋರಿಸಲಾಗಿದೆ.
  • ನಿನ್ನೆ ಫೆಬ್ರವರಿ 5 ರಂದು ‘ಲಾಲ್ ಸಲಾಂ’ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
  • ನಟ ರಜನಿಕಾಂತ್‌ ಆಕ್ಷನ್ ಅವತಾರ ಮತ್ತು ಸಿಂಪಲ್ ಲುಕ್​ ನೋಡಿದ ಅಭಿಮಾನಿಗಳು ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಕಾಯ್ತಿತ್ತಿದ್ದು, ಚಿತ್ರದ ಟ್ರೇಲರ್ ಪವರ್​ ಫುಲ್​ ಆಗಿದೆ.
Lal Salaam: ಮಾಸ್‌ ಅವತಾರದಲ್ಲಿ​ ರಜನಿಕಾಂತ್: ಲಾಲ್​ ಸಲಾಂ ಟ್ರೇಲರ್‌ ಔಟ್! title=

Lal Salam Trailer Out: ಕಾಲಿವುಡ್‌ ಸೂಪರ್​ ಸ್ಟಾರ್​ ನಟ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ​ ಲಾಲ್​ ಸಲಾಂ ಸಿನಿಮಾದ ಟ್ರೇಲರ್​ ​ ಬಿಡುಗಡೆಯಾಗಿದೆ. ಇದೊಂದು ಕ್ರೀಡಾ ಚಿತ್ರವಾಗಿದ್ದು, ಇದರಲ್ಲಿ ರಜನಿಕಾಂತ್ ಮುಸ್ಲಿಂ  ಲೀಡರ್ ಪಾತ್ರದಲ್ಲಿ ಅಭಿನಯಿಸುವುದರ ಜೊತೆಗೆ ಧಾರ್ಮಿಕ ಸಾಮರಸ್ಯ, ಕೋಮುವಾದದಂತಹ ವಿಚಾರಗಳನ್ನೂ ತೋರಿಸಲಾಗಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಕಪಿಲ್ ದೇವ್ ಕೂಡ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ವಿಕ್ರಾಂತ್ ಮತ್ತು ವಿಷ್ಣು ವಿಶಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ರಜನಿಕಾಂತ್  ಪುತ್ರಿ ಐಶ್ವರ್ಯಾ ಆಕ್ಷನ್‌ ಕಟ್‌ ಹೇಳಿದ್ದಾರೆ. 

ಲಾಲ್ ಸಲಾಮ್ ಕ್ರಿಕೆಟ್ ಮತ್ತು ಹಳ್ಳಿಯ ಜೀವನದ ಹಿನ್ನೆಲೆಯಲ್ಲಿ ನಿರ್ಮಿಸಲಾದ ಆಕ್ಷನ್ ಪ್ಯಾಕ್ಡ್ ಚಿತ್ರವಾಗಿದ್ದು, ಈ ಟ್ರೇಲರ್‌ನಲ್ಲಿ ರಜನಿಕಾಂತ್ ದೃಶ್ಯಗಳು ಅದ್ಧೂರಿಯಾಗಿವೆ ಎಂದು ಫ್ಯಾನ್ಸ್‌ ಹೇಳಿದ್ದಾರೆ. ನಿನ್ನೆ ಫೆಬ್ರವರಿ 5 ರಂದು ‘ಲಾಲ್ ಸಲಾಂ’ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದ ಟ್ರೇಲರ್‌ ದಟ್ಟವಾದ ಕಾಡಿನಲ್ಲಿ ಯಾರನ್ನಾದರೂ ಹುಡುಕುವ ಮೂಲಕ ಆರಂಭವಾಗುತ್ತಿದ್ದು, ಆಗ ಕಾರಿನ ಬಳಿ ಬಾಂಬ್ ಸ್ಫೋಟಗೊಂಡಿದೆ. ಮುಂದಿನ ದೃಶ್ಯದಲ್ಲಿ ವಿಷ್ಣು ಸೇರಿದಂತೆ ಹಲವರು ಕ್ರಿಕೆಟ್ ಆಡುತ್ತಿರುವುದು ಕಾಣಿಸುತ್ತಿದ್ದು, ತದನಂತರ ಜಗಳ, ಬೆಂಕಿ ಹಚ್ಚುವುದು ಮತ್ತು ಗಲಭೆಗಳು ಕಂಡುಬರುತ್ತವೆ. ಒಂದು ಧರ್ಮದ ಮೇಲಿನ ದ್ವೇಷದ ರಾಜಕಾರಣದ ಚಿತ್ರಣ ಈ ಸಿನಿಮಾದಲ್ಲಿ ಕಂಡುಬರುತ್ತದೆ.

ಇದನ್ನೂ ಓದಿ: Vishwambhara: ಮೆಗಾಸ್ಟಾರ್‌ನ ವಿಶ್ವಂಭರದಲ್ಲಿ ಅತಿಲೋಕ ಸುಂದರಿ ತ್ರಿಷಾ ಆಯ್ಕೆ!‌

‘ಲಾಲ್ ಸಲಾಂ’ ಚಿತ್ರದಲ್ಲಿ ರಜನಿಕಾಂತ್ ಮೊಯ್ದೀನ್ ಭಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ಎಂಟ್ರಿ ನೋಡಿ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿದೆ. ಅನೇಕ ದೃಶ್ಯಗಳಲ್ಲಿ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕ್ರಿಕೆಟ್ ಮೈದಾನದಲ್ಲಿ ಆಟಗಾರರಿಗೆ ತರಬೇತಿ ನೀಡುತ್ತಿರುವ  ಕಪಿಲ್ ದೇವ್, ರಜನಿಕಾಂತ್ ಜೊತೆ ಕುಳಿತು ಪಂದ್ಯ ವೀಕ್ಷಿಸುತ್ತಿರುವುದನ್ನು ಟ್ರೇಲರ್‌ನಲ್ಲಿ ನೋಡಬಹುದಾಗಿದೆ.

ನಟ ರಜನಿಕಾಂತ್‌ ಆಕ್ಷನ್ ಅವತಾರ ಮತ್ತು ಸಿಂಪಲ್ ಲುಕ್​ ನೋಡಿದ ಅಭಿಮಾನಿಗಳು ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಕಾಯ್ತಿತ್ತಿದ್ದು,  ಚಿತ್ರದ ಟ್ರೇಲರ್ ಪವರ್​ ಫುಲ್​ ಆಗಿದೆ. ಲಾಲ್ ಸಲಾಂ ಫೆಬ್ರವರಿ 9 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಚಿತ್ರಕ್ಕೆ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಈ ಸಿನಿಮಾಗೆ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್‌ ಆಗಿ ಸೂಪರ್ ಹಿಟ್ ಆಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News