ಬೆಂಗಳೂರು : ಸಾಜಿದ್ ಖಾನ್ ವಿಷಯದಲ್ಲಿ ಶೆರ್ಲಿನ್ ಚೋಪ್ರಾ ಮತ್ತು ರಾಖಿ ಸಾವಂತ್ ನಡುವೆ ತೀವ್ರ ಮಾತಿನ ಸಮರ ನಡೆಯುತ್ತಿದೆ. ಇಬ್ಬರೂ ಪರಸ್ಪರ ಆರೋಪ ಮಾಡುತ್ತಿದ್ದಾರೆ. ಸದ್ಯ ಈ ವಿಷಯ ಕೇವಲ ಮಾತಿನ ಗಡಿಯನ್ನೂ ದಾಟಿದ್ದು, ಇದೀಗ ರಾಖಿ ಸಾವಂತ್ ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಮಾಧ್ಯಮಗಳ ಮುಂದೆ ರಾಖಿ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದಾರೆ.
ಶೆರ್ಲಿನ್ ಚೋಪ್ರಾ, ರಾಖಿ ಸಾವಂತ್ ನಡುವಿನ ಕ್ಯಾಟ್ ಫೈಟ್ ಈಗ ಕಾನೂನು ರೂಪ ಪಡೆದುಕೊಂಡಿದೆ. ವಾಸ್ತವವಾಗಿ ರಾಖಿ ಶೆರ್ಲಿನ್ ಚೋಪ್ರಾ ವಿರುದ್ಧ ಮಾನನಷ್ಟ ದೂರು ದಾಖಲಿಸಿದ್ದಾರೆ ಮತ್ತು ಹಲವು ಗಂಭೀರ ಆರೋಪಗಳನ್ನೂ ಮಾಡಿದ್ದಾರೆ. ರಾಖಿ ಮತ್ತು ವಕೀಲ ಫಲ್ಗುಣಿ ಶೆರ್ಲಿನ್ ವಿರುದ್ಧ ಮಾನನಷ್ಟ ದೂರು ದಾಖಲಿಸಿದ್ದಾರೆ. ಠಾಣೆಯಿಂದ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಇದನ್ನೂ ಓದಿ: ಕಾಂತಾರ' ಸಿನಿಮಾ ನನ್ನದೇ : ರಿಷಬ್ ಶೆಟ್ಟಿ ಚಿತ್ರದ ಕುರಿತು ಯಶ್ ಶಾಕಿಂಗ್ ಹೇಳಿಕೆ..!
ಶೆರ್ಲಿನ್ ಚೋಪ್ರಾ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಮತ್ತು ವೀಡಿಯೋಗಳು ನನ್ನ ಬಳಿ ಇವೆ, ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ರಾಖಿ ಸಾವಂತ್ ಹೇಳಿದ್ದಾರೆ. ಭಾರತದಲ್ಲಿ ಮಹಿಳೆಯರಿಗೆ ಉತ್ತಮ ಕಾನೂನುಗಳಿವೆ, ಆದರೆ ಕೆಲವರು ಅದನ್ನು ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾಜಿದ್ ಖಾನ್ ನಂತಹ ಒಳ್ಳೆಯ ವ್ಯಕ್ತಿ ರಿಯಾಲಿಟಿ ಶೋಗೆ ಹೋದಾಗ ಅದು ಪ್ರಚಾರಕ್ಕಾಗಿ ಅವರ ಹೆಸರನ್ನು ಏತ್ತಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬಾಲಿವುಡ್ ಮಂದಿ ಏಕೆ ಮಾತನಾಡುತ್ತಿಲ್ಲ ಎಂದು ರಾಖಿ ಪ್ರಶ್ನಿಸಿದ್ದಾರೆ.
ಉನ್ನತ ಸಮಾಜದವರು ಎಂಬ ಕಾರಣಕ್ಕೆ ಮೌನ ವಹಿಸುತ್ತಿದ್ದಾರೆ. ಅವರು ಮಾತನಾಡುವುದಿಲ್ಲ, ಆದರೆ ನಾನು ಸಮಾಜ ಸೇವಕಿ. ನಾನು ಜನರಿಗೆ ಒಳ್ಳೆಯದನ್ನು ಮಾಡುತ್ತೇನೆ ಮತ್ತು ನಾನು ಅದನ್ನು ಮುಂದುವರಿಸುತ್ತೇನೆ ಎಂದು ರಾಖಿ ಸಾವಂತ್ ಅವರು ವಕೀಲರೊಂದಿಗೆ ಎಫ್‌ಐಆರ್ ಪ್ರತಿಯನ್ನು ತೋರಿಸುತ್ತಿದ್ದಾರೆ. ಇದಾದ ನಂತರ ಶೆರ್ಲಿನ್ ಚೋಪ್ರಾ ಪ್ರತಿಕ್ರಿಯೆ ಕೂಡ ಮುನ್ನೆಲೆಗೆ ಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನನಗೂ ರಾಖಿಗೂ ಯಾವುದೇ ಸಂಬಂಧವಿಲ್ಲ ಮತ್ತು ರಾಖಿಯೊಂದಿಗೆ ಜಗಳವಿಲ್ಲ. ಅವಳೇ ಮಧ್ಯೆ ಬರುತ್ತಿದ್ದಾಳೆ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.