Rakhi Sawant: ಟ್ಯೂಮರ್ ಸರ್ಜರಿ ನಂತರ ರಾಖಿ ಸಾವಂತ್ ಸ್ಥಿತಿ ಹೇಗಿದೆ?

Rahi Sawant Health Update: ರಾಖಿ ಸಾವಂತ್ ಅವರ ಟ್ಯೂಮರ್ ಆಪರೇಷನ್ ಯಶಸ್ವಿಯಾಗಿದೆ ಆದರೆ ಅವರ ಸ್ಥಿತಿ ಇನ್ನೂ ಚೆನ್ನಾಗಿಲ್ಲ. ಇತ್ತೀಚೆಗಷ್ಟೇ ವೈದ್ಯರು ರಾಖಿಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.  

Written by - Savita M B | Last Updated : May 25, 2024, 01:20 PM IST
  • ಜನಪ್ರಿಯ ಟಿವಿ ಸೆಲೆಬ್ರಿಟಿ ರಾಖಿ ಸಾವಂತ್ ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ
  • ಶಸ್ತ್ರಚಿಕಿತ್ಸೆ ನಂತರ ರಾಖಿ ಸಾವಂತ್ ಸ್ಥಿತಿ ಹೇಗಿದೆ?
Rakhi Sawant: ಟ್ಯೂಮರ್ ಸರ್ಜರಿ ನಂತರ ರಾಖಿ ಸಾವಂತ್ ಸ್ಥಿತಿ ಹೇಗಿದೆ?  title=

Rahi Sawant: ಜನಪ್ರಿಯ ಟಿವಿ ಸೆಲೆಬ್ರಿಟಿ ರಾಖಿ ಸಾವಂತ್ ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ತನ್ನ ಹೇಳಿಕೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ವಿಚಿತ್ರ ನಡುವಳಿಕೆ ಹಾಗೂ ಸಂಬಂಧಗಳ ಬಗ್ಗೆ ಆಗಾಗ್ಗೆ ವಿವಾದಗಳಿಗೆ ಒಳಗಾಗುವ ರಾಖಿ ಸಾವಂತ್ ಮತ್ತೊಮ್ಮೆ ಮುಖ್ಯಾಂಶಗಳಲ್ಲಿದ್ದಾರೆ ಆದರೆ ಈ ಬಾರಿ ಅವರ ಆರೋಗ್ಯದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..

ಇದನ್ನೂ ಓದಿ-SRH Vs RR : 36ರನ್ ಗಳ ಅಂತರದಿಂದ ಗೆಲುವು ಸಾಧಿಸಿದ SRH, ಸೋತ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಫೈನಲ್ ಕಣಕ್ಕಿಳಿದ ಹೈದರಾಬಾದ್!!

ಶಸ್ತ್ರಚಿಕಿತ್ಸೆ ನಂತರ ರಾಖಿ ಸಾವಂತ್ ಸ್ಥಿತಿ ಹೇಗಿದೆ? 
ಶಸ್ತ್ರಚಿಕಿತ್ಸೆ ನಂತರ ರಾಖಿ ಸಾವಂತ್ ಸ್ಥಿತಿ ಹೇಗಿದೆ ಎನ್ನುವುದನ್ನು ಆಕೆಯ ಸಹೋದರ ರಾಕೇಶ್ ಸಾವಂತ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಎಲ್ಲಾ ವರದಿಗಳ ನಡುವೆ ಇದೀಗ ವೈದ್ಯರಿಂದ ನಟಿಯ ಆರೋಗ್ಯದ ಕುರಿತಾಗಿ ಹೇಳಿಕೆ ಬಂದಿದ್ದು, ಆಸ್ಪತ್ರೆಯಲ್ಲಿ ರಾಖಿ ಸಾವಂತ್ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದ ಅವರು ಆಸ್ಪತ್ರೆಯ ಅನುಮತಿಯಿಲ್ಲದೆ ರಾಖಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.. 

ಇದನ್ನೂ ಓದಿ-IPL 2024: ಪ್ಲೇಆಫ್ ಹಂತದಲ್ಲಿ ಸೋಲುಂಡು ಹೊರಬಿದ್ದ RCB ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ?

'ರಾಖಿ ಸಾವಂತ್‌ ಜೀವಕ್ಕೆ ಅಪಾಯ'
ಶಸ್ತ್ರಚಿಕಿತ್ಸೆಯ ನಂತರವೂ ರಾಖಿ ಆರೋಗ್ಯವಾಗಿಲ್ಲ ಎಂದು ರಿತೇಶ್ ಈ ಹಿಂದೆ ಹೇಳಿದ್ದರು. ಇದಲ್ಲದೇ ತನಗೆ ಮತ್ತು ರಾಖಿ ಸಾವಂತ್ ಜೀವಕ್ಕೆ ಅಪಾಯವಿದೆ ಎಂದು ರಿತೇಶ್ ಬಹಿರಂಗಪಡಿಸಿದ್ದರು.. ರಾಖಿಯ ಆಪರೇಷನ್ ಯಶಸ್ವಿಯಾಗಿದೆ ಆದರೆ ಆಕೆಯ ಆರೋಗ್ಯದಲ್ಲಿ ಹಲವು ಏರಿಳಿತಗಳಿದ್ದು,. ಶುಗರ್ ಮತ್ತು ಬಿಪಿ ಕಂಟ್ರೋಲ್‌ ಆಗುತ್ತಿಲ್ಲ.. ನಾನು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದೇನೆ. ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಆರೋಗ್ಯದ ಅಪ್‌ಡೇಟ್‌ನ್ನು ನೀಡುತ್ತಿರುವ ರಾಖಿ ಹಾಗೂ ರಿತೇಶ್ ' ಶೀಘ್ರದಲ್ಲೇ ಗುಣಮುಖಳಾಗಲು ಆಶೀರ್ವದಿಸಿʼ ಎಂದಿದ್ದಾರೆ.. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News