ರಕ್ಷಿತ್ ಶೆಟ್ಟಿ ನಿರ್ಮಾಣದ ʻಇಬ್ಬನಿ ತಬ್ಬಿದ ಇಳೆಯಲಿʼ ಚಿತ್ರದ ʻಓ ಅನಾಹಿತʼ ಹಾಡು ಶೀಘ್ರದಲ್ಲೇ ರಿಲೀಸ್‌

Ibbani Tabbida Ileyali Movie: ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿರುವ, ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಸುಮಧುರ ಪ್ರೇಮಕಾವ್ಯ "ಇಬ್ಬನಿ ತಬ್ಬಿದ ಇಳೆಯಲಿ". 

Written by - YASHODHA POOJARI | Last Updated : Jun 18, 2024, 10:38 AM IST
  • ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಹಾಡು
  • ಶೀಘ್ರದಲ್ಲೇ ʻಓ ಅನಾಹಿತʼ ಹಾಡು ರಿಲೀಸ್‌
  • ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿರುವ ಸಿನಿಮಾ
ರಕ್ಷಿತ್ ಶೆಟ್ಟಿ ನಿರ್ಮಾಣದ ʻಇಬ್ಬನಿ ತಬ್ಬಿದ ಇಳೆಯಲಿʼ ಚಿತ್ರದ ʻಓ ಅನಾಹಿತʼ ಹಾಡು ಶೀಘ್ರದಲ್ಲೇ ರಿಲೀಸ್‌   title=

Ibbani Tabbida Ileyali Movie: ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿರುವ, ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಸುಮಧುರ ಪ್ರೇಮಕಾವ್ಯ "ಇಬ್ಬನಿ ತಬ್ಬಿದ ಇಳೆಯಲಿ". ಈಗಾಗಲೇ ಸುಂದರ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ ಈ ಚಿತ್ರದಲ್ಲಿ ಗಗನ್ ಬಡೇರಿಯಾ ಅವರು ಸಂಗೀತ ಸಂಯೋಜಿಸಿರುವ ಆರು‌ ಹಾಡುಗಳಿದೆ. ಆ ಪೈಕಿ ಚಿತ್ರದ ಮೊದಲ ಇಂಪಾದ ಹಾಡು "ಓ ಅನಾಹಿತ" ಜೂನ್ 21ರಂದು ಬಿಡುಗಡೆಯಾಗಲಿದೆ. 

ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಅವರೆ ಈ ಹಾಡನ್ನು ಬರೆದಿದ್ದು, ಮೂಲ ಸಂಯೋಜನೆಯನ್ನು ಮಾಡಿದ್ದಾರೆ.  "ಮಾನ್ಸೂನ್ ರಾಗ"ದ ಖ್ಯಾತಿಯ ದೀಕ್ಷಿತ್ ಈ‌ ಗೀತೆಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. "ಸಪ್ತ ಸಾಗರ" ಖ್ಯಾತಿಯ ಕಪಿಲ್ ಕಪಿಲನ್ ಈ ಹಾಡನ್ನು ಹಾಡಿದ್ದಾರೆ. ಜೂನ್ 21ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಮೊದಲ ಹಾಡಿನ ಬರುವಿಕೆಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಕೊಲೆಯಾದ ದಿನ ದರ್ಶನ್‌ ಜೊತೆಗಿದ್ದ ಚಿಕ್ಕಣ್ಣ... ಪೊಲೀಸ್‌ ವಿಚಾರಣೆಯಲ್ಲಿ ಹೊರಬಿತ್ತು ಸತ್ಯ !? 

"ಕಿರಿಕ್ ಪಾರ್ಟಿ" ಹಾಗೂ "ಅವನ್ನೇ ಶ್ರೀ ಮನ್ನಾರಾಯಣ" ಚಿತ್ರಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದ ಚಂದ್ರಜಿತ್ ಬೆಳಿಯಪ್ಪ,  ರಕ್ಷಿತ್ ಅವರ "ಸೆವೆನ್ ಓಡ್ಸ್ " ಬರಹಗಾರರ ತಂಡದ ಪ್ರಮುಖ ಸದಸ್ಯ ಹಾಗು "ಕಥಾ ಸಂಗಮ" ಚಿತ್ರದ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಈಗ "ಇಬ್ಬನಿ ತಬ್ಬಿದ ಇಳೆಯಲಿ" ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ.

"ಪಂಚತಂತ್ರ"ದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ವಿಹಾನ್ ಈ ಚಿತ್ರದ ನಾಯಕ. ಐದು ವರ್ಷಗಳ ನಂತರ ವಿಹಾನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.ಕಿರುತೆರೆಯ ಮೂಲಕ.      ಜನಮನಸೂರೆಗೊಂಡಿರುವ ಅಂಕಿತ ಅಮರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಸೂಪರ್ ಹಿಟ್ " ಗೀತಾಂಜಲಿ"  ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್ ಬಹಳ ವರ್ಷಗಳ ನಂತರ ಅಭಿನಯಕ್ಕೆ ಮರಳಿ ಬಂದಿದ್ದಾರೆ. ಮಯೂರಿ ನಟರಾಜ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 

ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ (ನ್ಯೂಯಾರ್ಕ್ ಫಿಲಂ ಅಕಾಡೆಮಿ ಹಾಗು ಆಸ್ಕರ್ ಗೋಲ್ಡ್ ರೈಸಿಂಗ್ ಪ್ರೋಗ್ರಾಮ್ ನಿಂದ ತರಬೇತಿ) ಹಾಗೂ ರಕ್ಷಿತ್ ಕಾಪ್ ಅವರ ಸಂಕಲನವಿರುವ "ಇಬ್ಬನಿ ತಬ್ಬಿದ ಇಳೆಯಲಿ" ಚಿತ್ರಕ್ಕೆ VFX ಪಿನಾಕ ಸ್ಟುಡಿಯೋದಲ್ಲಿ ನಡೆದಿದೆ. ಶಶಿಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಂವಃ ಸ್ಟುಡಿಯೋಸ್ ಸಿ.ಯಿ.ಓ ಆಗಿ ಶ್ರೀನೀಶ್ ಶೆಟ್ಟಿ ಇದ್ದಾರೆ.

ಇದನ್ನೂ ಓದಿ: Renu Desai: ವಿಚ್ಛೇದನಕ್ಕೆ ಇದೇ ಕಾರಣವೇ? ಶಾಕಿಂಗ್ ಸತ್ಯ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News