ತಮಿಳು ʼವಾರಿಸುʼಗೆ ಕನ್ನಡತಿ ಜೋಡಿ : ವಿಜಯ್‌-ರಶ್ಮಿಕಾ ಡುಯೆಟ್‌ ಸಾಂಗ್‌ ರಿಲೀಸ್‌..!

ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಅತೀ ಬೇಡಿಕೆಯ ನಟಿಯರಲ್ಲಿ ಒಬ್ಬರು. ಸದ್ಯ ರಶ್ಮಿಕಾ ಹಾಗೂ ಇಳಯದಳಪತಿ ವಿಜಯ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ʼವಾರಿಸುʼ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ.

Written by - Krishna N K | Last Updated : Nov 5, 2022, 07:02 PM IST
  • ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಅತೀ ಬೇಡಿಕೆಯ ನಟಿಯರಲ್ಲಿ ಒಬ್ಬರು
  • ರಶ್ಮಿಕಾ ಹಾಗೂ ಇಳಯದಳಪತಿ ವಿಜಯ್ ಕಾಂಬಿನೇಷನ್‌ನ ವಾರಿಸು ಸಿನಿಮಾದ ಹಾಡು ರಿಲೀಸ್‌
  • ಯೂಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ ರಂಜಿತಮೆ ಲಿರಿಕಲ್‌ ಸಾಂಗ್‌
ತಮಿಳು ʼವಾರಿಸುʼಗೆ ಕನ್ನಡತಿ ಜೋಡಿ : ವಿಜಯ್‌-ರಶ್ಮಿಕಾ ಡುಯೆಟ್‌ ಸಾಂಗ್‌ ರಿಲೀಸ್‌..! title=

ಬೆಂಗಳೂರು : ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಅತೀ ಬೇಡಿಕೆಯ ನಟಿಯರಲ್ಲಿ ಒಬ್ಬರು. ಸದ್ಯ ರಶ್ಮಿಕಾ ಹಾಗೂ ಇಳಯದಳಪತಿ ವಿಜಯ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ʼವಾರಿಸುʼ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಕಾರ್ತಿ ಜೊತೆ ನಟಿಸಿ ತಮಿಳು ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದ ರಶ್ಮಿಕಾ ಸದ್ಯ ಸೂಪರ್‌ ಸ್ಟಾರ್‌, ದಳಪತಿ ವಿಜಯ್‌ ಜೊತೆ ಸ್ಕ್ರೀನ್‌ ಮೇಲೆ ಮಿಂಚಿದ್ದಾರೆ. ಚಿತ್ರದ ರಂಜಿತಮೆ ಎಂಬ ಲಿರಿಕಲ್‌ ಹಾಡೊಂದು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದರಿಂದ ಕೊಡಗಿನ ಕುವರಿ ತಮಿಳು ಸಿನಿರಂಗದ ಫೇವರಿಟ್‌ ನಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: ದೆಹಲಿಯ ಇಂಡಿಯಾ ಗೇಟ್ ನಲ್ಲಿ ಕಾಂತಾರ ತಂಡದ ಭರ್ಜರಿ ಪ್ರೊಮೋಷನ್....!

 

ರಂಜಿತಮೆ ಲಿರಿಕಲ್‌ ಸಾಂಗ್‌ ವಿಡಿಯೋದಲ್ಲಿ ರಶ್ಮಿಕಾ ದೊಡ್ಡ ಮೂಗುತಿ ಹಾಗೂ ರೆಡ್ ಬಿಂದಿಯಿಟ್ಟುಕೊಂಡು, ರೆಡ್ ಬ್ಲೌಸ್​​​ಗೆ ಗ್ರೇ ಸೆರಗು ಧರಿಸಿ ಸೂಪರ್‌ ಸೆಕ್ಸಿಯಾಗಿ ಕಾಣುತ್ತಿದ್ದಾರೆ. ವಿಜಯ್ ಅವರು ಫ್ಲೋರಲ್ ಶರ್ಟ್​ ಹಾಕಿಕೊಂಡು ರಗಡ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಥಮನ್‌ ಎಸ್‌ ಸಂಗೀತವಿರುವ ಹಾಡಿಗೆ ರಾಜ್‌ ಸುಂದರಂ, ಶೋಬಿ, ಜಾನಿ ಕೊರಿಯೋಗ್ರಫಿ ಇದೆ. ವಾರಿಸು ಚಿತ್ರಕ್ಕೆ ವಂಶಿ ಪಡಿಪಲ್ಲಿ ಆಕ್ಷನ್‌ ಕಟ್‌ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News