ಈ ಒಂದು ಫೋಟೋಗಾಗಿ ಅತ್ತಿದ್ದರಂತೆ.. 36 ವರ್ಷ ಕಾದಿದ್ದರಂತೆ ಕಿಚ್ಚ.. ಇದೇ ನೋಡಿ ಆ ಅಪರೂಪದ ಚಿತ್ರ!

Sudeep with Kapil Dev: "1986–87ರ ಸಮಯದಲ್ಲಿ ಭಾರತ ಕ್ರಿಕೆಟ್‌ ತಂಡ ಬೆಂಗಳೂರಿನ ವೆಸ್ಟ್‌ಎಂಡ್‌ ಹೋಟೆಲ್‌ಗೆ ಬಂದಿತ್ತು. ಅಲ್ಲಿ ಕಪಿಲ್‌ ದೇವ್‌ ಅವರ ಜೊತೆ  ಫೋಟೋ (Sudeep with Kapil Dev) ತೆಗೆಸಿಕೊಳ್ಳಬೇಕು ಎನ್ನುವಾಗ ಕ್ಯಾಮೆರಾ ಕೈಕೊಟ್ಟಿತ್ತು. ಆಗ ಕಣ್ಣೀರು ಹಾಕಿದ್ದ ನನ್ನನ್ನು ಕಪಿಲ್‌ ದೇವ್‌ ಎತ್ತಿಕೊಂಡಿದ್ದರು" ಎಂದು ಸುದೀಪ್ ಹೇಳಿದರು.

Edited by - Zee Kannada News Desk | Last Updated : Dec 19, 2021, 01:06 PM IST
  • 1983ರಲ್ಲಿ ವಿಶ್ವಕಪ್‌ ಗೆದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ಕಪಿಲ್‌ ದೇವ್‌
  • ಕಪಿಲ್ ದೇವ್ ಅವರ ಜತೆಗಿನ ಘಟನೆಯೊಂದನ್ನು ನೆನೆದ ಸುದೀಪ್
  • ತಮ್ಮ ಮತ್ತು ಕಪಿಲ್ ದೇವ್ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಕಿಚ್ಚ
ಈ ಒಂದು ಫೋಟೋಗಾಗಿ ಅತ್ತಿದ್ದರಂತೆ..  36 ವರ್ಷ ಕಾದಿದ್ದರಂತೆ ಕಿಚ್ಚ.. ಇದೇ ನೋಡಿ ಆ ಅಪರೂಪದ ಚಿತ್ರ! title=
ಸುದೀಪ್

ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ (Ranveer Singh) ನಟನೆಯ '83' ಚಿತ್ರವು ಹಿಂದಿ, ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಡಿ.24ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರ ಕಾರ್ಯಕ್ರಮ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. 1983ರಲ್ಲಿ ವಿಶ್ವಕಪ್‌ ಗೆದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ಕಪಿಲ್‌ ದೇವ್‌ (Kapil Dev) ಸೇರಿದಂತೆ ತಂಡದಲ್ಲಿದ್ದ ರೋಜರ್‌ ಬಿನ್ನಿ, ಸೈಯದ್‌ ಕಿರ್ಮಾನಿ, ಕೆ.ಶ್ರೀಕಾಂತ್‌ ಭಾಗವಹಿಸಿದ್ದರು.
                                             
'83' ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ  ಸುದೀಪ್ (Sudeep) ವಿತರಸುತ್ತಿದ್ದು, ನಿನ್ನೆ ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಕಪಿಲ್ ದೇವ್ ಅವರ ಜತೆಗಿನ ಘಟನೆಯೊಂದನ್ನು ನೆನೆದ ಸುದೀಪ್, "1986–87ರ ಸಮಯದಲ್ಲಿ ಭಾರತ ಕ್ರಿಕೆಟ್‌ ತಂಡ ಬೆಂಗಳೂರಿನ ವೆಸ್ಟ್‌ಎಂಡ್‌ ಹೋಟೆಲ್‌ಗೆ ಬಂದಿತ್ತು. ಅಲ್ಲಿ ಕಪಿಲ್‌ ದೇವ್‌ ಅವರ ಜೊತೆ  ಫೋಟೋ (Sudeep with Kapil Dev) ತೆಗೆಸಿಕೊಳ್ಳಬೇಕು ಎನ್ನುವಾಗ ಕ್ಯಾಮೆರಾ ಕೈಕೊಟ್ಟಿತ್ತು. ಆಗ ಕಣ್ಣೀರು ಹಾಕಿದ್ದ ನನ್ನನ್ನು ಕಪಿಲ್‌ ದೇವ್‌ ಎತ್ತಿಕೊಂಡಿದ್ದರು" ಎಂದು ಹೇಳಿದರು.

"ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಭಾರತ ತಂಡ ಉಳಿದುಕೊಂಡಿತ್ತು. ಕಪಿಲ್‌ ದೇವ್‌ ಅವರನ್ನು ನೋಡಲು ಹೋಗಿದ್ದೆವು. ಅವರು ಒಬ್ಬರೇ ನಡೆದುಕೊಂಡು ಹೋಗುತ್ತಿರುವಾಗ ನಾನು ಹಿಂದಿನಿಂದ ಕೋಟ್‌ ಎಳೆದಿದ್ದೆ. ನಿಮ್ಮ ಜೊತೆ ಒಂದು ಫೋಟೊ ತೆಗೆಸಿಕೊಳ್ಳಬೇಕು ಎಂದಿದ್ದೆ. ನನ್ನ ಕೈಯಲ್ಲಿ ಫ್ಯೂಜಿ ಕ್ಯಾಮೆರಾ ಇತ್ತು. ನನ್ನ ಜೊತೆ ಅಕ್ಕ ಇದ್ದಳು." ಎಂದರು.

"ಅಕ್ಕ ಫೋಟೋ ತೆಗೆಯುವಾಗ ಕ್ಯಾಮೆರಾ ಕೈಕೊಟ್ಟಿತು. ನಾನು ಅಂದು ಅತ್ತಿದ್ದೆ.  ಆಗ ನನ್ನ ಕಣ್ಣೀರು ಒರೆಸಿ, ನನ್ನನ್ನು ಕಪಿಲ್‌ದೇವ್‌ ಎತ್ತಿಕೊಂಡಿದ್ದರು. ಇಂದು ಇಷ್ಟು ಸಮಯದ ಬಳಿಕ ಅವರೊಂದಿಗೆ ಒಂದು ಫೋಟೊ ತೆಗೆಸಿಕೊಳ್ಳುವ ಅವಕಾಶ ಒದಗಿದೆ" ಎಂದು ಸುದೀಪ್ ಹೇಳಿದರು.

 

 

ತಮ್ಮ ಮತ್ತು ಕಪಿಲ್ ದೇವ್ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್, "ನಾನು ಸುಮಾರು 36 ವರ್ಷಗಳಿಂದ ಕಾಯುತ್ತಿದ್ದ ಚಿತ್ರ ಇದು. ಧನ್ಯವಾದ ಕಪಿಲ್ ಸರ್. ಇದನ್ನು ಸಾಧಿಸಿದ್ದಕ್ಕಾಗಿ. ನಮ್ರತೆಯ ಪ್ರತೀಕ.." ಎಂದು ಬರೆದುಕೊಂಡಿದ್ದಾರೆ. 

ಈ ಸಿನಿಮಾದಲ್ಲಿ ಕ್ರಿಕೆಟಿಗ ಕಪಿಲ್‌ ದೇವ್‌ ಅವರ ಪಾತ್ರದಲ್ಲಿ ರಣ್‌ವೀರ್‌ ಸಿಂಗ್‌ ನಟಿಸಿದ್ದು, ಕಬೀರ್‌ ಖಾನ್‌ ಇದನ್ನು ನಿರ್ದೇಶಿಸಿದ್ದಾರೆ. 

ಇದನ್ನೂ ಓದಿ: Nick ಪತ್ನಿ ಎಂದಿದ್ದಕ್ಕೆ Priyanka Chopraಗೆ ಕೋಪ ಬಂದಿದ್ದಾದರೂ ಯಾಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News