ಬ್ರೇಕ್‌ ಅಪ್‌ ಆಯ್ತಾ ಕಿರಿಕ್‌ ಪಾರ್ಟಿ ಕರ್ಣ ಮತ್ತು ಸಾನ್ವಿ ನಿಶ್ಚಿತಾರ್ಥ?

ದೂರವಾಗುವ ನಿರ್ಧಾರಕ್ಕೆ ಬಂದ್ರ ರಶ್ಮಿಕಾ ಮಂದಣ್ಣ - ರಕ್ಷಿತ್‌ ಶೆಟ್ಟಿ ?

Yashaswini V Yashaswini V | Updated: Sep 10, 2018 , 12:28 PM IST
ಬ್ರೇಕ್‌ ಅಪ್‌ ಆಯ್ತಾ ಕಿರಿಕ್‌ ಪಾರ್ಟಿ ಕರ್ಣ ಮತ್ತು ಸಾನ್ವಿ ನಿಶ್ಚಿತಾರ್ಥ?

ಬೆಂಗಳೂರು: ಕಳೆದ ವರ್ಷವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ಕಿರಿಕ್‌ ಪಾರ್ಟಿಯ ಕರ್ಣ ಮತ್ತು ಸಾನ್ವಿ ವೃತ್ತಿ ಕಾರಣದಿಂದಾಗಿ ದೂರವಾಗಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥದ ನಂತರ ರಶ್ಮಿಕಾ ಟಾಲಿವುಡ್‌ಗೆ ಹಾರಿದರು. ತೆಲುಗಿನ ಮೊದಲ ಸಿನಿಮಾ 'ಛಲೋ' ಇವರಿಗೆ ಸಾಕಷ್ಟು ಹೆಸರು ತಂದಿತು. ಇತ್ತೀಚೆಗಷ್ಟೇ ಬಿಡುಗಡೆಯಾದ ವಿಜಯ್‌ ದೇವರಕೊಂಡ ನಟನೆಯ 'ಗೀತ ಗೋವಿಂದಂ' ಸಿನಿಮಾ ರಶ್ಮಿಕಾಗೆ ಸ್ಟಾರ್‌ ಪಟ್ಟ ತಂದುಕೊಟ್ಟಿತು. 

ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್‌ ಲಿಪ್‌ಲಾಕ್‌ ಮಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನಂತರ ರಶ್ಮಿಕಾ ಮತ್ತು ರಕ್ಷಿತ್‌ ದೂರವಾಗುತ್ತಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದು ಸುಳ್ಳು ಎಂದೇ ಇಬ್ಬರೂ ಹೇಳಿಕೊಂಡಿದ್ದರು. ಆದರೆ, ಈಗ ಅದುವೇ ನಿಜವಾಗಿದೆ.

ಎರಡೂ ಕುಟುಂಬಗಳು ಕುಳಿತು ಮಾತನಾಡಿಯೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದ್ದು, ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾರ ವೃತ್ತಿ ಜೀವನವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.