Rashmika: "ಅಪ್ಪು ಸರ್​ ಮಾತುಗಳು ನೆನಪಾಗ್ತಿವೆ" ಎಂದ ರಶ್ಮಿಕಾ ಮಂದಣ್ಣ

Rashmika on Puneeth Rajkumar : ಸ್ಯಾಂಡಲ್‌ವುಡ್‌ನ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನವು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನು ಉಂಟು ಮಾಡಿತು. 2017 ರಲ್ಲಿ ಪುನೀತ್‌ ಜೊತೆ ರಶ್ಮಿಕಾ ಮಂದಣ್ಣ ಅಂಜನಿ ಪುತ್ರ ಸಿನಿಮಾದಲ್ಲಿ ನಟಿಸಿದರು.

Last Updated : Dec 22, 2022, 06:28 PM IST
  • "ಅಪ್ಪು ಸರ್​ ಮಾತುಗಳು ನೆನಪಾಗ್ತಿವೆ"
  • ಅಂಜನಿ ಪುತ್ರ ಸಿನಿಮಾಗೆ 5 ವರ್ಷ ಪೂರೈಸಿದ ಹಿನ್ನೆಲೆ
  • ಪುನೀತ್‌ ಬಗ್ಗೆ ಟ್ವೀಟ್‌ ಮಾಡಿದ ರಶ್ಮಿಕಾ ಮಂದಣ್ಣ
Rashmika: "ಅಪ್ಪು ಸರ್​ ಮಾತುಗಳು ನೆನಪಾಗ್ತಿವೆ" ಎಂದ ರಶ್ಮಿಕಾ ಮಂದಣ್ಣ  title=

Rashmika on Puneeth Rajkumar : ಸ್ಯಾಂಡಲ್‌ವುಡ್‌ನ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನವು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನು ಉಂಟು ಮಾಡಿತು. 2017 ರಲ್ಲಿ ಪುನೀತ್‌ ಜೊತೆ ರಶ್ಮಿಕಾ ಮಂದಣ್ಣ ಅಂಜನಿ ಪುತ್ರ ಸಿನಿಮಾದಲ್ಲಿ ನಟಿಸಿದರು. ಡಿಸೆಂಬರ್ 21 ರಂದು ಈ ಸಿನಿಮಾ ಬಿಡುಗಡೆಯಾಗಿ 5 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆ  ತನ್ನ ಟ್ವಿಟರ್‌ನಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಕುರಿತು ರಶ್ಮಿಕಾ ಟ್ವೀಟ್‌ ಮಾಡಿದ್ದಾರೆ.

"ಅಂಜನಿಪುತ್ರನಿಗೆ 5 ವರ್ಷಗಳು. ನಾನು ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಸಂಭಾಷಣೆಯ ಬಗ್ಗೆ ಯೋಚಿಸುತ್ತಲೇ ಇದ್ದೇನೆ. ನನ್ನಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದರು. ಅಪ್ಪು ಸರ್​ ಮಾತುಗಳು ನೆನಪಾಗ್ತಿವೆ. ಅವರ ಮನಸ್ಸು ತುಂಬಾ ಒಳ್ಳೆಯದಾಗಿತ್ತು. ಈ ಚಿತ್ರಕ್ಕಾಗಿ ಧನ್ಯವಾದಗಳು ಹರ್ಷ ಸರ್" ಎಂದು ರಶ್ಮಿಕಾ ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ : Sapthami Gowda: ಸಪ್ತಮಿ ಗೌಡಗೆ ಬಂತಂತೆ ಮದುವೆ ಪ್ರಪೋಸಲ್! ವರನ್ಯಾರು ಗೊತ್ತೇ?

ಎ.ಹರ್ಷ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅವರಲ್ಲದೆ, ರಮ್ಯಾ ಕೃಷ್ಣ, ಮುಖೇಶ್ ತಿವಾರಿ, ಪಿ. ರವಿಶಂಕರ್ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಾಂತ್ರಿಕ ವರ್ಗದವರ ವಿಚಾರಕ್ಕೆ ಬರುವುದಾದರೆ, ರವಿ ಬಸ್ರೂರ್ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ನೀಡಿದರೆ, ಸ್ವಾಮಿ ಜೆ ಅವರ ಛಾಯಾಗ್ರಹಣವಿದೆ. 

 

 

ರಶ್ಮಿಕಾ ಮಂದಣ್ಣ ಅವರು ದಳಪತಿ ವಿಜಯ್ ಅವರ ಫ್ಯಾಮಿಲಿ ಎಂಟರ್ಟೈನರ್ ವರಿಸು ಚಿತ್ರದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಪುಷ್ಪಾ 2 ಸಿನಿಮಾದಲ್ಲೂ ರಶ್ಮಿಕಾ ನಟಿಸಲಿದ್ದಾರೆ. ಸುಕುಮಾರ್ ನಿರ್ದೇಶನದಲ್ಲಿ ನಟಿ ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ : Puneeth Rajkumar: ಬೆಂಗಳೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಪುನೀತ್ ರಾಜಕುಮಾರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News