ಬಾಲಿವುಡ್ ಗೆ ಹಾರಲಿರುವ ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ ?

ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದಿಂದ ಜನಪ್ರಿಯತೆ ಪಡೆದ ನಟಿ ರಶ್ಮಿಕಾ ಮಂದಣ್ಣ ಮುಂದೆ ಪುನೀತ್ ರಾಜ್ ಕುಮಾರ್, ದರ್ಶನ್ ರಂತಹ ಅಗ್ರಗಣ್ಯ ಸ್ಟಾರ್ ಗಳ ಜೊತೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು. 

Last Updated : Apr 28, 2019, 02:22 PM IST
 ಬಾಲಿವುಡ್ ಗೆ ಹಾರಲಿರುವ ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ ? title=
Photo courtesy: Facebook

ಬೆಂಗಳೂರು: ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದಿಂದ ಜನಪ್ರಿಯತೆ ಪಡೆದ ನಟಿ ರಶ್ಮಿಕಾ ಮಂದಣ್ಣ ಮುಂದೆ ಪುನೀತ್ ರಾಜ್ ಕುಮಾರ್, ದರ್ಶನ್ ರಂತಹ ಅಗ್ರಗಣ್ಯ ಸ್ಟಾರ್ ಗಳ ಜೊತೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು.ಇದಾದ ನಂತರ ಈಗ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ತೆಲುಗಿನಲ್ಲಿಯೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಆ ಮೂಲಕ ಈಗ ದಕ್ಷಿಣದಲ್ಲಿ ತಮ್ಮದೇ ಆದ ಖದರ್ ನ್ನು ರಶ್ಮಿಕಾ ಹೆಚ್ಚಿಸಿಕೊಂಡಿದ್ದಾರೆ.

ಈಗ ನಾವು ಹೇಳ ಹೊರಟಿರುವ ಸಂಗತಿ ಏನೆಂದರೆ ಕೊಡಗಿನ ಬೆಡಗಿ ಎಲ್ಲವು ಅಂದುಕೊಂಡಂತೆ ಆದಲ್ಲಿ ಸದ್ಯದಲ್ಲಿ ಬಾಲಿವುಡ್ ನಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ.ಹೌದು ಈ ಕುರಿತಾಗಿ ಈಗಾಗಲೇ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ.ಈಗಾಗಲೇ ಬಾಲಿವುಡ್ ನಲಿ ನಟಿಸುವ ಕುರಿತಾಗಿ ಹಿಂದಿಯ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ಮುಂಬರುವ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂದು ಹಲವು ಮನರಂಜನಾ ವೆಬ್ಸೈಟ್ ಗಳು ವರದಿ ಮಾಡಿವೆ.

ಆದರೆ ಇದುವರೆಗೂ ಯಾವುದು ಅಂತಿಮಗೊಳಿಸಿಲ್ಲ ಎನ್ನಲಾಗಿದೆ.ಆದರೆ ಇನ್ನು ಕೆಲವು ವರದಿಗಳು ಹೇಳಿರುವಂತೆ ಈ ಆಪರ್ ನ್ನು ಅವರು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಇನ್ನು ಅಧಿಕೃತವಾಗಿ ಯಾರು ಕೂಡ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಎಲ್ಲವು ಅಂದು ಕೊಂಡಂತೆ ಆದಲ್ಲಿ ಸದ್ಯದಲ್ಲಿ ರಶ್ಮಿಕಾ ಬಾಲಿವುಡ್ ಗೆ ಹಾರಲುಬಹುದು ಎನ್ನುತ್ತಿವೆ ಗಾಂಧಿ ನಗರದ ಮೂಲಗಳು. 

Trending News