Women's Cricket ODI: ಟೀಂ ಇಂಡಿಯಾ ಅಬ್ಬರದ ಆಟಕ್ಕೆ ಬೆದರಿದ ದ.ಆಫ್ರಿಕಾ..! ಭಾರತಕ್ಕೆ 3–0 ಅಂತರದ ಜಯ

Women's Cricket ODI : ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ 3-0 ಅಂತರದಿಂದ ಭಾರತ ಮಹಿಳಾ ತಂಡ ಭರ್ಜರಿ ಗೆಲುವನ್ನು ಸಾಧಿಸಿದೆ. 

Written by - Zee Kannada News Desk | Last Updated : Jun 23, 2024, 09:14 PM IST
  • 3-0 ಅಂತರದಿಂದ ಭಾರತ ಮಹಿಳಾ ತಂಡ ಭರ್ಜರಿ ಗೆಲುವನ್ನು ಸಾಧಿಸಿದೆ.
  • ಭಾರತ ತಂಡಕ್ಕೆ 216 ರನ್ ಗಳ ಗೆಲುವಿನ ಗುರಿಯನ್ನು ನೀಡಿತು.
  • ಸ್ಮೃತಿ ಮಂಧಾನ 83 ಎಸೆತಗಳಲ್ಲಿ ಒಟ್ಟು 90 ರನ್ ಗಳಿಸುವ ಮೂಲಕ ಮತ್ತೆ ಮಿಂಚಿದರು.
Women's Cricket ODI: ಟೀಂ ಇಂಡಿಯಾ ಅಬ್ಬರದ ಆಟಕ್ಕೆ ಬೆದರಿದ ದ.ಆಫ್ರಿಕಾ..! ಭಾರತಕ್ಕೆ 3–0 ಅಂತರದ ಜಯ title=

Team India won the match : ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ನಡೆಯಿತು. 

ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 215 ರನ್ಗಳನ್ನು ಗಳಿಸಿತು. ಈ ಮೂಲಕ ಭಾರತ ತಂಡಕ್ಕೆ 216 ರನ್ ಗಳ ಗೆಲುವಿನ ಗುರಿಯನ್ನು ನೀಡಿತು. 

ಇದನ್ನು ಓದಿ : ನನಗೆ 49 ವಯಸ್ಸು, ಆದ್ರೆ ನಾನು ʼಆʼ ಪಾತ್ರದಲ್ಲಿ ನಟಿಸುವುದಿಲ್ಲ..! ನಟಿಯ ಶಾಕಿಂಗ್‌ ಹೇಳಿಕೆ

ಇದಕ್ಕೆ ವಿರುದ್ಧವಾಗಿ ಬ್ಯಾಟಿಂಗ್ ಮಾಡಿದ ಭಾರತ ತಂಡ 40.4 ಪವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿತು. ಈ ಮೂಲಕ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಭರ್ಜರಿ 3-0 ಅಂತರದಿಂದ ಗೆಲುವನ್ನು ಸಾಧಿಸಿತು.

ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟರ್ ಗಳಾದ ಲಾರಾ ವೊಲ್ವಾರ್ಡ್ 61ರನ್ ಮತ್ತು ತಜ್ಮಿನ್ ಬ್ರಿಟ್ಸ್ 38ರನ್ ಸೇರಿ ಒಟ್ಟು ನೀ 102 ರನ್ ಗಳ ಜೊತೆ ಆಟ ಆಡಿದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ 215 ರ ಗೆಲುವಿನ ಗುರಿ ನೀಡುವಲ್ಲಿ ಸಹಕಾರಿಯಾಯಿತು. ಭಾರತ ತಂಡದ ಬೌಲಿಂಗ್ ಪಡೆಯಲ್ಲಿ ಅರುಂಧತಿ ರೆಡ್ಡಿ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ಗಳನ್ನು ಪಡೆದುಕೊಂಡರೆ, ಪ್ರಿಯಾಂಕ ಪಾಟೀಲ್ ಹಾಗೂ ಪೂಜಾ ತಲಾ ವಿಕೆಟ್ಗಳನ್ನು ಪಡೆದುಕೊಂಡರು. 

ಎರಡನೇ ಇವಿನಿಂಗ್ಸ್ ನಲ್ಲಿ ಭಾರತದ ಆರಂಭಿಕ ಬ್ಯಾಟರಿಗಳಾದ ಸ್ಮೃತಿ ಮಂಧಾನ  ಹಾಗೂ ಶಫಾಲಿವರ್ಮ  ಕಾಣಕ್ಕಿಳಿದರು. 115 ರನ್ ಗಳ ಜೊತೆ ಆಟ ಆಡಿ, ಸ್ಮೃತಿ ಮಂಧಾನ 83 ಎಸೆತಗಳಲ್ಲಿ ಒಟ್ಟು 90 ರನ್ ಗಳಿಸುವ ಮೂಲಕ ಮತ್ತೆ ಮಿಂಚಿದರು. 

ಇದನ್ನು ಓದಿ : ಎಲ್ಲರೂ ಹಾಲಿವುಡ್‌ಗೆ ಹೋಗ್ತಾರೆ.. ನಾನು ಸೌತ್‌ಗೆ ಹೋಗ್ತೀನಿ.! ಸಲ್ಮಾನ್ ಖಾನ್ ಹೇಳಿಕೆಗೆ ಮೆಚ್ಚುಗೆ

ಈ ಪಂದ್ಯದಲ್ಲಿ ಶಫಾಲಿ ವರ್ಮ 25, ಪ್ರಿಯ ಪೂನಿಯಾ 28, ಹರ್ಮನ್ ಪ್ರೀತ್ ಕೌರ್ 42 ಜೆಮಿಮಾ ರಾಡ್ರಿಗಸ್ 19 ಮತ್ತು ರಿಚಾ ಘೋಷ್ 6 ರನ್ ಗಳಿಸಿದರು. 

ಈ ಮೂಲಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ 3-0 ಅಂತರದಿಂದ ಗೆಲುವು ಸಾಧಿಸಿದರು.\

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News