'ಡಿ 51' ಚಿತ್ರದಲ್ಲಿ ಕಿರಿಕ್‌ ಬೆಡಗಿ...ಧನುಷ್​ ಜತೆ ರೊಮ್ಯಾನ್ಸ್ ಮಾಡಲಿರುವ ರಶ್ಮಿಕಾ ಮಂದಣ್ಣ!

Rashmika Mandanna-Dhanush : ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಪುಷ್ಪ 2 ನಂತರ ಯಾವುದೇ ಸಿನಿಮಾದಲ್ಲಿ ಬ್ಯುಸಿಯಾಗಿರಲಿಲ್ಲ. ಆದರೆ ಇದೀಗ ಕಿರಿಕ್‌ ಬೆಡಗಿ 'ಡಿ 51' ಚಿತ್ರದಲ್ಲಿ ಧನುಷ್​ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.   

Written by - Savita M B | Last Updated : Aug 14, 2023, 03:56 PM IST
  • ನಿರ್ದೇಶಕ ಶೇಖರ್ ಕಮ್ಮುಲ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ 'ಡಿ 51'.
  • ಇನ್ನು ಡಿ 51 ಎಂದು ಚಿತ್ರಕ್ಕೆ ತಾತ್ಕಾಲಿಕವಾಗಿ ನಾಮಕರಣ ಮಾಡಲಾಗಿದೆ.
  • ಇದು ಧನುಷ್‌ ಅವರ ಮೊದಲ ತೆಲುಗು ಸಿನಿಮಾ.
'ಡಿ 51' ಚಿತ್ರದಲ್ಲಿ ಕಿರಿಕ್‌ ಬೆಡಗಿ...ಧನುಷ್​ ಜತೆ ರೊಮ್ಯಾನ್ಸ್ ಮಾಡಲಿರುವ ರಶ್ಮಿಕಾ ಮಂದಣ್ಣ!  title=

Rashmika Mandanna : ನಿರ್ದೇಶಕ ಶೇಖರ್ ಕಮ್ಮುಲ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ 'ಡಿ 51'. ಈ ಚಿತ್ರದಲ್ಲಿ ಧನುಷ್​ಗೆ ನಾಯಕಿಯಾಗಿ ರಶ್ಮಿಕಾ ನಟಿಸಲಿದ್ದು, ಈ ಕುರಿತು ಸ್ವತಃ ರಶ್ಮಿಕಾ ಮಂದಣ್ಣ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ. 

ನಟಿ ರಶ್ಮಿಕಾ ಹಾಗೂ ನಟ ಧನುಷ್‌ ಇಬ್ಬರು ಮೊದಲು ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು, ಸಹಜವಾಗಿಯೇ ಈ ಸಿನಿಮಾ ಕುತೂಹಲಕ ಹೆಚ್ಚಿಸುತ್ತದೆ. ಇನ್ನು ಡಿ 51 ಎಂದು ಚಿತ್ರಕ್ಕೆ ತಾತ್ಕಾಲಿಕವಾಗಿ ನಾಮಕರಣ ಮಾಡಲಾಗಿದೆ. 

 
 
 
 

 
 
 
 
 
 
 
 
 
 
 

A post shared by Rashmika Mandanna (@rashmika_mandanna)

ಇದನ್ನೂ ಓದಿ-Upendra Controversy : ನಟ ಉಪೇಂದ್ರಗೆ ಬಂಧನ ಭೀತಿ! ರಿಯಲ್​ ಸ್ಟಾರ್‌ ಮನೆಗೆ ಬಂತು ಪೊಲೀಸ್ ನೋಟಿಸ್​?

ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೇ ಇದು ಧನುಷ್‌ ಅವರ ಮೊದಲ ತೆಲುಗು ಸಿನಿಮಾ. ಸದ್ಯ ಈ ಚಿತ್ರದ ಪೂರ್ವ ನಿರ್ಮಾಣ ಆರಂಭವಾಗಿದ್ದು, ಡಿಸೆಂಬರ್‌ನಿಂದ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ. 

ಧನುಷ್‌ ಹಾಗೂ ಶೇಖರ್ ಕಮ್ಮುಲ ಅವರ ಈ ಬಿಗ್‌ ಬಜೆಟ್‌ ಚಿತ್ರ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಈ ಚಿತ್ರದಲ್ಲಿ ಬೇರೆ ಭಾಷೆಯ ನಟರು ನಟಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. 

ಇದನ್ನೂ ಓದಿ-ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಹೊಸ ಸಿನಿಮಾ ಘೋಷಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News